ಶನಿವಾರ, ಮೇ 28, 2022
24 °C

ಕುಣಿಗಲ್ ಬಳಿ ಅಪಘಾತ: ಬೆಂಗಳೂರಿನ 3 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕಾರ್ ಮತ್ತು ಟಿಂಪೋ ಟ್ರಾವೆಲ್ (ಟಿ.ಟಿ) ಮಧ್ಯೆ ನಡೆದ ಅಪಘಾತದಲ್ಲಿ ಮೂರು ಮಂದಿ ಮೃತಪಟ್ಟ ಘಟನೆ ಕುಣಿಗಲ್ ತಾಲ್ಲೂಕಿನ ಬೇಗೂರು ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಮೃತರನ್ನು ಬೆಂಗಳೂರು ಸಂಜಯನಗರ ನಿವಾಸಿಗಳಾದ ವಿಜಯ್, ರಾಘು, ಸಂತೊಷ ಎಂದು ಗುರುತಿಸಲಾಗಿದೆ. ಐದು ಜನ ಗಾಯಗೊಂಡಿದ್ದಾರೆ.

ಎಲ್ಲರು ಬೆಂಗಳೂರಿನಿಂದ ಕಾರ್ ನಲ್ಲಿ ಹಾಸನದ ಕಡೆ ಹೋಗುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಕಾರ್, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಎದುರುಗಡೆ ಬರುತ್ತಿದ್ದ ಟಿ.ಟಿ.ಗೆ ಗುದ್ದಿದ ಪರಿಣಾಮ ಕಾರ್ ನಲ್ಲಿದ್ದ ಮೂರು ಮಂದಿ ಮೃತಪಟ್ಟಿದ್ದಾರೆ‌.

ಧರ್ಮಸ್ಥಳದಿಂದ ಪ್ರವಾಸ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ಟಿ.ಟಿ ಯಲ್ಲಿದ್ದವರು ಹಾಗೂ ಕಾರ್ ಚಾಲಕ ಲೋಕೇಶ್ ಗಾಯಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು