ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಿಗೇನಹಳ್ಳಿ: ಕರಡಿ ಪ್ರತ್ಯಕ್ಷ ಗ್ರಾಮಸ್ಥರ ಆತಂಕ

Last Updated 5 ಅಕ್ಟೋಬರ್ 2021, 4:49 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಕಳೆದ ಕೆಲವು ದಿನಗಳಿಂದ ಚಿಕ್ಕಮಾಲೂರು ಗ್ರಾಮದ ಕೆರೆಯಂಗಳ ಮತ್ತು ಅರಣ್ಯದಲ್ಲಿ ಕಾಣಿಸುತ್ತಿದ್ದ ಕರಡಿಗಳು ಮತ್ತೆ ಸೋಮವಾರ ಸಂಜೆ ಕುರಿಗಾಹಿಗಳಿಗೆ ಪೊದೆಯಲ್ಲಿ ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ.

ಕಳೆದ ಎರಡು ವಾರದಲ್ಲಿ ಮೂರು ಬಾರಿ ಕಂಡಿದ್ದ ಕರಡಿಗಳು ಸೋಮವಾರವೂ ಪೊದೆ ಕೆಳಗೆ ಮಲಗಿರುವುದನ್ನು ಗ್ರಾಮಸ್ಥರು ಕಂಡಿದ್ದು, ದಿಗಿಲುಗೊಂಡಿದ್ದಾರೆ.

‘3 ದೊಡ್ಡ ಕರಡಿಗಳು ಮತ್ತು ಒಂದು ಮರಿ ಆಗಾಗ ಓಡಾಡುವುದನ್ನು ಕಣ್ಣಾರೆ ಕಂಡಿದ್ದೇವೆ. ಅವುಗಳನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಲಾಗಿದೆ. ಅವರು ಕೂಡ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಆದರೆ, ಅವರಿಗೂ ಇದುವರೆಗೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಲು ಸಾಧ್ಯವಾಗಿಲ್ಲ. ಇದು ನಮ್ಮಲ್ಲಿ ಭಯದ ವಾತವರಣ ಉಂಟು ಮಾಡಿದೆ. ಕೂಡಲೇ, ಬೋನು ಇಟ್ಟು ಕರಡಿಗಳನ್ನು ಸೆರೆ ಹಿಡಿಯಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಗ್ರಾಮದ ಸಮೀಪದ ಗುಡ್ಡದಿಂದ ಆಹಾರ ಹುಡುಕುತ್ತ ಕರಡಿಗಳು ಬಂದಿರಬಹುದು. ಮತ್ತೆ ಅದೇ ಸ್ಥಳದಲ್ಲಿ ಕಂಡುಬಂದರೆ ಬೋನು ಇಟ್ಟು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮಧುಗಿರಿ ವಿಭಾಗದ ವಲಯ ಅರಣ್ಯಾಧಿಕಾರಿ ಸಿ. ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT