ತುಮಕೂರು: ಮಾಜಿ ಉಪಮೇಯರ್ ವೆಂಕಟೇಶ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸೈಯದ್
ಶಾಜಾ ಎಂಬುವರನ್ನು ತಿಲಕ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಗುರುವಾರ ರಾತ್ರಿ ಮೆಳೆಕೋಟೆಯ ಅರಳಿಮರದ ಬಳಿ ಆಟೊದಲ್ಲಿ ಕುಳಿತು ಕೆಲವರು ಅಶ್ಲೀಲ ಪದಗಳನ್ನು ಬಳಸುತ್ತ ಜೋರಾಗಿ ಮಾತನಾಡುತ್ತಿದ್ದರು. ನಾನು ಆಗ ಇಲ್ಲಿ ಏಕೆ ಕುಳಿತಿದ್ದೀರಿ. ಏಕೆ ಇಷ್ಟೊಂದು ಗಲಾಟೆ ಮಾಡುತ್ತಿದ್ದೀರಿ ಎಂದು ಕೇಳಿದೆ. ಆಗ ಅವರು ನೀವು ಯಾರು ಕೇಳುವುದಕ್ಕೆ ಎಂದರು. ಅಲ್ಲಿದ್ದ ಕೆಲ ಸ್ಥಳೀಯರು ಇವರು ದಿನವೂ ಇದೇ ರೀತಿ
ಮಾಡುತ್ತಾರೆ ಎಂದು ಹೇಳಿದರು. ಆಗಬುದ್ಧಿವಾದ ಹೇಳಿದೆ. ಮನೆಗೆ ತೆರಳಿದರು. ಸ್ವಲ್ಪ ಸಮಯದ
ನಂತರ ಆ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಬಂದು ಮಚ್ಚಿನಿಂದ ನನ್ನ ಮೇಲೆ ಹಲ್ಲೆ ನಡೆಸಿದ’ ಎಂದು ವೆಂಕಟೇಶ್ ದೂರಿನಲ್ಲಿ
ತಿಳಿಸಿದ್ದಾರೆ.

‘ಇವರು ಗಾಂಜಾ ಸೇದುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.ಬುದ್ಧಿವಾದ ಹೇಳಿದ್ದು ತಪ್ಪಾಯಿತೇ. ಅವನು ನನ್ನ ಮೇಲೆ ಹಲ್ಲೆ ನಡೆಸಿದಾಗ ಆತನ ಮನೆಯವರೂ ಇದ್ದರು’ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.