ತುಮಕೂರು: ಮುಜರಾಯಿ ಇಲಾಖೆಗೆ ಸೇರಿದ ತಾಲ್ಲೂಕಿನ ದೇವರಾಯನದುರ್ಗದ ಯೋಗ ಲಕ್ಷ್ಮಿನರಸಿಂಹಸ್ವಾಮಿ
ದೇವಾಲಯದ ಅರ್ಚಕರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘ ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಅವರನ್ನು ಶುಕ್ರವಾರ ಸಂಘದ ಪದಾಧಿಕಾರಿಗಳು ಪ್ರತ್ಯೇಕವಾಗಿ ಭೇಟಿಯಾಗಿ ಮನವಿ ಸಲ್ಲಿಸಿದರು. ಅರ್ಚಕ ಎಸ್.ಕೆ.ನಾಗಭೂಷಣ್ ಮೇಲೆ ಇಬ್ಬರು ಮಹಿಳೆಯರು, ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ದೇವರಾಯದುರ್ಗದ ದೇವಾಲಯದಲ್ಲಿ ವೇದಪುರಾಣ ಕಾರ್ಯ ಮುಗಿಸಿದ ನಂತರ ಆಂಜನೇಯಸ್ವಾಮಿ ದೇವಸ್ಥಾನ ಸ್ವಚ್ಛಮಾಡಿ ಪೂಜೆಗೆ ಸಿದ್ಧತೆ ಮಾಡುತ್ತಿದ್ದಾಗ ಇಬ್ಬರು ಮಹಿಳೆಯರು, ಇಬ್ಬರು ಹುಡುಗರು ಬಂದಿದ್ದಾರೆ. ‘ನಾವು ಬೇಗ ಹೋಗಬೇಕು, ಮಂಗಳಾರತಿ ಕೊಡಿ’ ಎಂದು ಕೇಳಿದ್ದಾರೆ. ನಂತರ ಬೆಟ್ಟದ ಮೇಲೆ ಇರುವ ನರಸಿಂಹ ದೇವಾಲಯದ ದೇವರಿಗೆ ನೈವೇದ್ಯ ಮಾಡಿಕೊಡುವ ಕೆಲಸದಲ್ಲಿ ಅರ್ಚಕರು ತೊಡಗಿಸಿಕೊಂಡಿದ್ದಾರೆ. ಆಗ ದೇವಸ್ಥಾನದಿಂದ ಹೊರಗೆ ಕರೆತಂದು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.

ಸಂಘದ ಅಧ್ಯಕ್ಷ ಎಂ.ಎಸ್.ವೆಂಕಟಾಚಲಯ್ಯ, ಕಾರ್ಯದರ್ಶಿ ಗೋಪಿನಾಥ್, ಖಜಾಂಚಿ ರಘು, ಪ್ರಮುಖರಾದ ಗಂಗಾಧರಪ್ಪ, ಮಂಜುನಾಥ್, ಸಂತೋಷ್, ಮಹದೇವಯ್ಯ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.