ಗುರುವಾರ , ಡಿಸೆಂಬರ್ 12, 2019
27 °C

ಕೊರಟಗೆರೆಯಲ್ಲಿ ಕರಡಿ ದಾಳಿ; ಮೂವರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೊರಟಗೆರೆ ತಾಲ್ಲೂಕು ತೋವಿನಕೆರೆ ಸುತ್ತಲಿನ ಗ್ರಾಮಗಳಲ್ಲಿ ಕರಡಿಗಳ ದಾಳಿ ಮುಂದುವರಿದಿದೆ. ಭಾನುವಾರ ಬೆಳಿಗ್ಗೆ ಸೂರೇನಹಳ್ಳಿಯ ಬಳಿ ಮೂವರ ಮೇಲೆ ದಾಳಿ ಮಾಡಿದೆ.

ರೇಣುಕಮ್ಮ ಎಂಬುವವರು ಹೊಲದಲ್ಲಿ ಕಾಕಡ ಹೂ ಬಿಡಿಸುವಾಗ ಕರಡಿ ದಾಳಿ ನಡೆಸಿ ಕಚ್ಚಿದೆ. ಅಲ್ಲಿಂದ ಮುಂದಿನ ತೋಟದಲ್ಲಿ ದಂಪತಿ ಮೇಲೆ ದಾಳಿ ಮಾಡಿದೆ.

ಗಾಯಾಳುಗಾಳನ್ನು ತೋವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಕರಡಿ ಯಾವ ದಿಕ್ಕಿಗೆ ಹೋಯಿತು ಎಂದು ಜನರಿಗೆ ತಿಳಿದಿಲ್ಲ. ಇದು ಮತ್ತಷ್ಟು ಗಾಬರಿಗೆ ಕಾರಣವಾಗಿದೆ. ಎರಡು ವಾರದ ಹಿಂದೆ ಇದೇ ರೀತಿ ಬೆಳಿಗ್ಗೆ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ಐದು ಮಂದಿ ರೈತರ ಮೇಲೆ ಕರಡಿ ದಾಳಿ ನಡೆಸಿತ್ತು.

ಪ್ರತಿಕ್ರಿಯಿಸಿ (+)