ಗುರುವಾರ , ಸೆಪ್ಟೆಂಬರ್ 24, 2020
27 °C
ತುಮಕೂರು ನಗರದಲ್ಲೇ ಅರ್ಧ ಶತಕ ತಲುಪಿದ ಸಾವಿನ ಸಂಖ್ಯೆ

ತುಮಕೂರು: 1,369 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಒಂದೇ ದಿನ ನೂರರ ಗಡಿ ದಾಟಿದೆ. ಶುಕ್ರವಾರ 133 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,411ಕ್ಕೆ ತಲುಪಿದೆ. ಮೂರು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 70ಕ್ಕೆ ತಲುಪಿದೆ.

ಮುಖ್ಯವಾಗಿ ಕೊರೊನಾ ಸೋಂಕಿಗೆ ಒಳಗಾಗಿದ್ದವರು ಸಹ ಗಣನೀಯವಾಗಿ ಗುಣಮುಖರಾಗುತ್ತಿದ್ದಾರೆ. ಒಟ್ಟು 1,369 ರೋಗಿಗಳು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಗುಣಮುಖರಾದ 104 ಮಂದಿಯನ್ನು ಸೋಮವಾರ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು. 972 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ಇವೆ. ಎಲ್ಲ ತಾಲ್ಲೂಕುಗಳಲ್ಲಿಯೂ ಸೋಂಕಿತರು 100ರ ಗಡಿ ದಾಟಿದ್ದಾರೆ. ತುಮಕೂರು ನಗರದಲ್ಲಿಯೇ 50 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ತುಮಕೂರಿನ ಬಿ.ಜಿ.ಪಾಳ್ಯದ 65 ವರ್ಷದ ಪುರುಷ, ಪಿ.ಎಚ್‌.ಕಾಲೊನಿ 60 ವರ್ಷ ಮಹಿಳೆ, ನಾಗವಲ್ಲಿ ಗ್ರಾಮದ 78 ವರ್ಷದ ಪುರುಷ ಮೃತಪಟ್ಟಿದ್ದಾರೆ.

******

ತಾಲ್ಲೂಕು;ಇಂದಿನ ಸೋಂಕಿತರು (ಆ.7);ಒಟ್ಟು ಸೋಂಕಿತರು;ಮರಣ

ಚಿ.ನಾ.ಹಳ್ಳಿ;4;133;3

ಗುಬ್ಬಿ;7;116;3

ಕೊರಟಗೆರೆ;15;156;2

ಕುಣಿಗಲ್;13;255;4

ಮಧುಗಿರಿ;4;164;3

ಪಾವಗಡ;5;174;1

ಶಿರಾ;5;159;3

ತಿಪಟೂರು;25;157;1

ತುಮಕೂರು;44;981;50

ತುರುವೇಕೆರೆ;11;116;0

ಒಟ್ಟು;133;2411;70

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು