ತುಮಕೂರು: ಬಾಲಿವುಡ್ ನಟಿ ಕಂಗನಾ ರನೋತ್ ಟ್ವಿಟರ್ ಖಾತೆ ಸ್ಥಗಿತಗೊಳಿಸುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಹೈಕೋರ್ಟ್ ವಕೀಲ ಹಾಗೂ ತಾಲ್ಲೂಕಿನ ಕದರೇನಹಳ್ಳಿ ತಾಂಡಾ ವಾಸಿ ಎಲ್.ರಮೇಶ್ ನಾಯಕ್ ಗುರುವಾರ ದೂರು ನೀಡಿದ್ದಾರೆ.

ಪಾಪ್ ತಾರೆ ರಿಯಾನಾ ಮತ್ತು ಕಂಗನಾ ಟ್ವಿಟ್ ಮತ್ತು ಮರುಟ್ವಿಟ್ ಬಗ್ಗೆ ಪ್ರಸ್ತಾಪಿಸಿರುವ ರಮೇಶ್ ನಾಯ್ಕ, ಕಂಗನಾ ಮತ್ತೆ, ಮತ್ತೆ ರೈತರನ್ನು ಭಯೋತ್ಪಾದಕರು ಎಂದು ನಿಂದಿಸುತ್ತಿದ್ದು ಅವರ ಟ್ವಿಟರ್ ಖಾತೆ ಸ್ಥಗಿತಗೊಳಿಸುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ.

‘ಕಂಗಾನ ಟ್ವಿಟರ್ ನಿಯಮಗಳನ್ನು ಮೀರಿದ್ದರೆ ಕ್ರಮಕೈಗೊಳ್ಳಲಾಗುವುದು’ ಎಂದು ಸಚಿವಾಲಯದಿಂದ ಪ್ರತಿಕ್ರಿಯೆ ಕೂಡ ಬಂದಿದೆ.

ಈ ಹಿಂದೆ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಕಂಗನಾ ಟ್ವೀಟ್ ಮಾಡಿದ್ದ ವೇಳೆ ಅವರ ವಿರುದ್ಧ ದೂರು ದಾಖಲಿಸುವಂತೆರಮೇಶ್ ನಾಯಕ್ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯವು ಕ್ಯಾತ್ಸಂದ್ರ ಪೊಲೀಸರಿಗೆ ನಿರ್ದೇಶನ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.