‘ನಾನು ‘ನೀಟ್’ ಪರೀಕ್ಷೆಯನ್ನು ವಿರೋಧಿಸುತ್ತಿಲ್ಲ. ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಸಾಮರ್ಥ್ಯ ಬೆಳೆದ ಬಳಿಕ ಇಂತಹ ವ್ಯವಸ್ಥೆಯೊಂದು ಮುನ್ನೆಲೆಗೆ ಬಂದಿದೆ. ದೊಡ್ಡ ನಗರಗಳಲ್ಲಿ ಶಿಕ್ಷಣ ಹಾಗೂ ವಿಶೇಷ ತರಬೇತಿ ಪಡೆದ ವಿದ್ಯಾರ್ಥಿಗಳು ಮಾತ್ರ ‘ನೀಟ್’ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಎಲ್ಲರಿಗೂ ಸಮಾನ ಅವಕಾಶ ಸೃಷ್ಟಿಸುವುದು ಸಮಾಜವಾದದ ಆಶಯ. ಶಿಕ್ಷಣದಲ್ಲಿ ಇದು ಸಾಧ್ಯವಾಗುತ್ತಿಲ್ಲ’ ಎಂದರು.
‘ಪಿಯು ಪರೀಕ್ಷೆಯಲ್ಲಿ ಶೇ 99 ಅಂಕ ಗಳಿಸಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯೊಬ್ಬರು ವೈದ್ಯಕೀಯ ಶಿಕ್ಷಣ ಪಡೆಯಲು ಆಸಕ್ತಿ ತೋರಲಿಲ್ಲ. ಈ ಶಿಕ್ಷಣ ಕೈಗೆಟಕುವುದಿಲ್ಲ ಎಂಬುದು ಮಕ್ಕಳಿಗೂ ಅರ್ಥವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದವರು ನಿಜವಾದ ಶೋಷಿತರಾಗುತ್ತಿದ್ದಾರೆ. ಸಮಾಜದಲ್ಲಿ ವರ್ಗ ತಾರತಮ್ಯ ಹೆಚ್ಚಾಗುತ್ತಿದೆ’ ಎಂದು ಹೇಳಿದರು.