ತುಮಕೂರು: ‘ವರದಕ್ಷಿಣೆ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾರೆ’ ಎಂದು ಆರೋಪಿಸಿ ಪತಿಯ ಮನೆ ಮುಂಭಾಗ ಪತ್ನಿ ಶುಕ್ರವಾರ ಸಂಜೆ ಧರಣಿ ನಡೆಸಿದರು.

ಚಿಕ್ಕನಾಯಕನಹಳ್ಳಿಯ ಪ್ರೇರಣಾ ಹಾಗೂ ನಗರದ ಸಪ್ತಗಿರಿ ಬಡಾವಣೆಯ ಪ್ರಜ್ವಲ್ ಶಂಕರ್ ವಿವಾಹ 2024ರ ಆಗಸ್ಟ್ ತಿಂಗಳಲ್ಲಿ ನೆರವೇರಿತ್ತು. ‘ಮದುವೆಯಾದ ನಾಲ್ಕನೇ ದಿನದಿಂದ ಹಣಕ್ಕಾಗಿ ಪೀಡಿಸಿ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ’ ಎಂದು ಪ್ರೇರಣಾ ಆರೋಪಿಸಿದ್ದಾರೆ.

‘ಪ್ರಜ್ವಲ್ ತಂದೆ–ತಾಯಿ ಇಬ್ಬರು ಶಿಕ್ಷಕರು. ನನ್ನ ಗಂಡ ಕೆಲಸ ಮಾಡುತ್ತಿರಲಿಲ್ಲ. ಮದುವೆಯಾಗಿ ಎಂಟು ತಿಂಗಳು ಮಾತ್ರ ಅತ್ತೆಯ ಮನೆಯಲ್ಲಿದ್ದೆ. ಈ ಹಿಂದೆ ಒಂದು ಬಾರಿ ಇದೇ ರೀತಿ ಮನೆ ಮುಂದೆ ಬಂದು ನಿಂತಿದ್ದೆ. ಯಾರೊಬ್ಬರೂ ಸ್ಪಂದಿಸಲಿಲ್ಲ. ಈಗ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಎಲ್ಲಿಗೆ ಹೋದರೂ ನ್ಯಾಯ ಸಿಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ಮದುವೆಗಾಗಿ ನಮ್ಮ ತಂದೆ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾರೆ. ಸಾಲಗಾರರು ಈಗ ನಮ್ಮ ಮನೆಯ ಬಾಗಿಲಿಗೆ ಬರುತ್ತಿದ್ದಾರೆ. ನನ್ನ ಬೆಳ್ಳಿ, ಬಂಗಾರದ ಒಡವೆ ಎಲ್ಲ ಮನೆಯ ಒಳಗಡೆ ಇದೆ. ಅದು ಕೊಟ್ಟರೆ ತಂದೆಯ ಸಾಲ ತೀರಿಸುತ್ತೇನೆ. ಈಗಾಗಲೇ ಮಹಿಳಾ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.

ನ್ಯಾಯ ದೊರಕಿಸಿಕೊಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗಕ್ಕೂ ಪ್ರೇರಣಾ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.