ಬುಗಡನಹಳ್ಳಿಯ ಮಧುಗಿರಿ ಪಂಪ್ ಹೌಸ್ ನಲ್ಲಿದ್ದ ಸ್ಟಾಟರ್ ಸರಿಪಡಿಸುತ್ತಿರುವುದು
ಬುಗಡನಹಳ್ಳಿಯ ಜಲ ಸಂಗ್ರಹಾಗಾರದ ಮಧುಗಿರಿ ಪಂಪ್‌ಹೌಸ್‌ನಲ್ಲಿದ್ದ ಸ್ಟಾಟರ್ ಸಮಸ್ಯೆಯಾಗಿತ್ತು. ಅದನ್ನು ಹೊಸದಾಗಿ ಟೆಂಡರ್ ಕರೆದು ಆ ಕೆಲಸ ಪೂರ್ಣಗೊಂಡಿದೆ. ನೂತನ ಟ್ರಾನ್ಸ್‌ಫಾರ್ಮರನ್ನು ಅಳವಡಿಸಲಾಗಿದೆ. ಇನ್ನು 14 ದಿನಗಳಲ್ಲಿ ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಸಲಾಗುವುದು. ಪಟ್ಟಣ ಮತ್ತು ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಎದುರಾದರೆ ಕೊಳವೆ ಬಾವಿಯನ್ನು ಕೊರೆದು ನೀರು ಕೊಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.