ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದಿಮೆ ಸ್ಥಾಪಿಸಿ ದೇಶದ ಅಭಿವೃದ್ಧಿಗೆ ಕೈಜೋಡಿಸಿ

ನಗರದ ಹೊರವಲಯದ ಎಚ್ಎಂಎಸ್ಐಟಿ ಕಾಲೇಜಿನಲ್ಲಿ ನಡೆದ 19ನೇ ಪದವಿ ಪ್ರದಾನ ಸಮಾರಂಭದಲ್ಲಿ ಡಾ.ಕೆ. ಬಲವೀರರೆಡ್ಡಿ ಕರೆ
Last Updated 15 ಮೇ 2019, 18:28 IST
ಅಕ್ಷರ ಗಾತ್ರ

ತುಮಕೂರು: ಭಾರತದಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಈಗ ಸೂಕ್ತ ಕಾಲವಾಗಿದ್ದು, ಎಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳು ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ವಿಟಿಯು ಮಾಜಿ ಕುಲಪತಿ ಡಾ.ಕೆ.ಬಲವೀರರೆಡ್ಡಿ ಅಭಿಪ್ರಾಯಪಟ್ಟರು.

ನಗರದ ಹೊರವಲಯದಲ್ಲಿರುವ ಹೆಚ್‌ಎಂಎಸ್‌ಐಟಿ ಕಾಲೇಜಿನಲ್ಲಿ ನಡೆದ 19ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತ ನಾಡಿದರು.

‘ಜಾಗತೀಕರಣ ಎರಡು ಅಲಗಿನ ಕತ್ತಿ ಇದ್ದಂತೆ.ಅದರಿಂದಾಗಿಯೇ ಪ್ರಪಂಚದೆಲ್ಲೆಡೆ ಉದ್ಯೋಗಕ್ಕಾಗಿ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಜಾಗತೀಕರಣದಿಂದ ದೊಡ್ಡ ಸಂಸ್ಥೆಗಳಿಗೆ ಅನುಕೂಲವಾದಂತೆ ಸಣ್ಣ, ಮಧ್ಯಮ ಸಂಸ್ಥೆಗಳು ನಷ್ಟವನ್ನು ಅನುಭವಿಸುತ್ತಿವೆ’ ಎಂದು ಹೇಳಿದರು.

‘ಜಾಗತೀಕರಣದ ಪ್ರಭಾವದಿಂದ ಸಣ್ಣ ಉದ್ದಿಮೆಗಳು ನಷ್ಟ ಅನುಭವಿಸಲು ಬಹುಮುಖ್ಯ ಕಾರಣ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಹಿಂದೆ ಬಿದ್ದಿರುವುದು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಣ್ಣ ಉದ್ದಿಮೆ, ಸ್ಟಾರ್ಟ್‌ ಅಪ್ ಸ್ಥಾಪಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಎಂಜಿನಿಯರ್ ಪದವೀಧರರು ಸಣ್ಣ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗ ಸೃಷ್ಠಿಸಲು ಮುಂದಾಗಬೇಕು’ ಎಂದರು.

‘ಅಂತರರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಪಡೆದವರು ಸಹ ಮೂರು ವರ್ಷಗಳ ಅನುಭವ ಪಡೆದ ನಂತರ ಉದ್ದಿಮೆ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು’ ಎಂದು ಸಲಹೆ ನೀಡಿದರು.

ಎಚ್‌ಎಂಎಸ್‌ಐಟಿ ನಿರ್ದೇಶಕ ಹಾಗೂ ಮಾಜಿ ಶಾಸಕರಾದ ಡಾ.ರಫೀಕ್ ಅಹಮ್ಮದ್ ಮಾತನಾಡಿ, ‘ರಾಜ್ಯದಲ್ಲಿರುವ ಎಂಜಿನಿಯರ್ ಕಾಲೇಜುಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಅದರಲ್ಲಿಯೂ ಪ್ರವೇಶದ ಕೊರತೆಯನ್ನು ಎದುರಿಸುತ್ತಿದ್ದು, ಈ ನಿಟ್ಟಿನಲ್ಲಿ ವಿಟಿಯು ಮಾಜಿ ಕುಲಪತಿಗಳು ಹಾಗೂ ಎನ್‌ಐಟಿಕೆ ಸುರತ್ಕಲ್‌ನ ನಿರ್ದೇಶಕರಾಗಿರುವ ಡಾ.ಬಲವೀರರೆಡ್ಡಿ ಅವರು ವಿಟಿಯುಗೆ ಮಾರ್ಗದರ್ಶನ ಮಾಡಬೇಕು’ ಎಂದು ಮನವಿ ಮಾಡಿದರು.

‘ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರಾಗಿದ್ದ ಎಂಜಿನಿಯರ್ ಕಾಲೇಜುಗಳ ಸಮಸ್ಯೆಗಳನ್ನು ಡಾ.ಬಲವೀರರೆಡ್ಡಿ ಅರಿತುಕೊಂಡಿದ್ದಾರೆ. ಎಂಜಿನಿಯರ್ ಕಾಲೇಜುಗಳ ಪ್ರವೇಶದ ಸಮಸ್ಯೆ ಬಗೆಹರಿಸುವ ದೂರದೃಷ್ಟಿತ್ವ ಹಾಗೂ ಅರ್ಹತೆಯನ್ನು ಹೊಂದಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ವಿವಿಧ ಎಂಜನಿಯರ್ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ವಚನವನ್ನು ಬೋಧಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ.ಇರ್ಫಾನ್ ಮಾತನಾಡಿ, ‘ಕಡಿಮೆ ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಎಚ್‌ಎಂ ಎಸ್‌ಐಟಿ ಸಂಸ್ಥೆಯಲ್ಲಿ ಈಗ ಆರು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸೋಲಾರ್ ಶಕ್ತಿಯನ್ನು ಮಾತ್ರ ಬಳಸುತ್ತಿರುವ ರಾಜ್ಯದ ಏಕೈಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ’ ಎಂದರು.

‘ವಿದ್ಯಾರ್ಥಿಗಳು ಮಿನುಗು ದೀಪದ ಕೆಳಗಿಂದ ಹೊರಬರಬೇಕು (ಸ್ಪಾಟ್‌ಲೈಟ್ ಸಿಂಡ್ರೋಮ್‌). ಯಾರು ನಿಮ್ಮ ವೇಷಭೂಷಣ ಗಮನಿಸುವುದಿಲ್ಲ. ಏಕೆಂದರೆ ಅವರು ಅವರದ್ದೇ ಜಗತ್ತಿನಲ್ಲಿ ತಲ್ಲೀನರಾಗಿರುತ್ತಾರೆ. ಆದ್ದರಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಅಧ್ಯಯನ ಶೀಲರಾಗಬೇಕು’ ಎಂದು ನುಡಿದರು.

ಎಚ್‌ಎಂಎಸ್‌ಐಟಿ ಅಧ್ಯಕ್ಷ ಶಫೀ ಅಹಮ್ಮದ್ ಎಸ್‌ಐಟಿ ನಿರ್ದೇಶಕ ಪ್ರೊ.ಸೊಲ್ಲಾಪುರ್, ಪ್ರೊ.ಬಸವರಾಜು, ಡಾ.ಜಗನ್ನಾಥ್, ಡಾ.ಸದಾಶಿವಯ್ಯ, ಸಿ.ಪಿ.ಲತಾ, ಡಾ.ಶಿವಮೂರ್ತಿ, ಫಾತಿಮಾ, ಪ್ರೊ.ಯೋಗೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT