ಫಸಲ್ ಬಿಮಾ ಯೋಜನೆ:ಜಾಗೃತಿಗೆ ಬೀದಿ ನಾಟಕ, ಟ್ಯಾಬ್ಲೊಗೆ ಚಾಲನೆ

ಸೋಮವಾರ, ಜೂನ್ 24, 2019
29 °C

ಫಸಲ್ ಬಿಮಾ ಯೋಜನೆ:ಜಾಗೃತಿಗೆ ಬೀದಿ ನಾಟಕ, ಟ್ಯಾಬ್ಲೊಗೆ ಚಾಲನೆ

Published:
Updated:
Prajavani

ತುಮಕೂರು: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಕುರಿತ ಆಯೋಜಿಸಿರುವ ಬೀದಿ ನಾಟಕ ಮತ್ತು ಟ್ಯಾಬ್ಲೊಗೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಜಿಲ್ಲೆಯ ವಿವಿಧ ಹೋಬಳಿ ಕೇಂದ್ರಗಳಲ್ಲಿ ಬೀದಿ ನಾಟಕ ಮತ್ತು ಟ್ಯಾಬ್ಲೊ ಪ್ರದರ್ಶನ ಜೂನ್ 5ರಿಂದ 12ರವರೆಗೆ ನಡೆಯಲಿದೆ. ರೈತರು ಮಾಹಿತಿ ಪಡೆದು ಪ್ರಯೋಜನ ಪಡೆಯಬೇಕು’ ಎಂದು ಹೇಳಿದರು.

‘ಜೂನ್ 5ರಂದು ತುಮಕೂರು ತಾಲ್ಲೂಕಿನ ಕೋರಾ, ಬೆಳ್ಳಾವಿ, ಹೆಬ್ಬೂರು ಹೋಬಳಿ, ಕೊರಟಗೆರೆ ತಾಲ್ಲೂಕಿನ ಕಸಬಾ, ಹೊಳವನಹಳ್ಳಿಯಲ್ಲಿ ಸಂಚರಿಸಲಿದೆ. ಜೂನ್ 6ರಂದು ಮಧುಗಿರಿ ತಾಲ್ಲೂಕಿನ ಕಸಬಾ, ಐ.ಡಿಹಳ್ಳಿ ಹಾಗೂ ಶಿರಾ ತಾಲ್ಲೂಕಿನ ಕಸಬಾ, ಬುಕ್ಕಾಪಟ್ಟಣದಲ್ಲಿ ಸಂಚರಿಸಲಿದೆ’ ಎಂದು ಹೇಳಿದರು.

‘ಜೂನ್ 7ರಂದು ಪಾವಗಡ ತಾಲ್ಲೂಕಿನ ಕಸಬಾ, ಮಂಗಳವಾಡ, ಜೂನ್ 8ರಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಸಬಾ, ಶೆಟ್ಟಿಕೆರೆ, ಹುಳಿಯಾರಿನಲ್ಲಿ ಸಂಚರಿಸಲಿದೆ’ ಎಂದು ತಿಳಿಸಿದರು.

‘ಜೂನ್ 9ರಂದು ತಿಪಟೂರು ತಾಲ್ಲೂಕಿನ ಕಸಬಾ, ಬಿಳಿಗೆರೆ, ಜೂನ್ 10ರಂದು ಗುಬ್ಬಿ ತಾಲ್ಲೂಕಿನ ಕಸಬಾ, ನಿಟ್ಟೂರು, ಚೇಳೂರು, ಜೂನ್ 11ರಂದು ತುರುವೇಕೆರೆ ತಾಲ್ಲೂಕಿನ ಕಸಬಾ, ಮಾಯಸಂದ್ರ,  ಜೂನ್ 12ರಂದು ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಕೇಂದ್ರಗಳಲ್ಲಿ ಬೀದಿ ಮತ್ತು ಟ್ಯಾಬ್ಲೊ ಪ್ರದರ್ಶನ ನಡೆಯಲಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು’ ಅವರು ಮನವಿ ಮಾಡಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಜ್ಯೋತಿ ಗಣೇಶ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ, ಫ್ಯೂಚರ್ ಜನರಲಿ ಜನರಲ್ ಇನ್ಯೂರನ್ಸ್ ಸಂಸ್ಥೆಯ ಪ್ರತಿನಿಧಿಗಳು ಹಾಗೂ ರೈತ ಬಾಂಧವರು ಹಾಜರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !