ಶುಕ್ರವಾರ, ಮಾರ್ಚ್ 31, 2023
33 °C

ಅರಣ್ಯ ಒತ್ತುವರಿ ಆರೋಪ: ಎಸಿ, ತಹಶೀಲ್ದಾರ್ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ತಾಲ್ಲೂಕಿನ ಯರದೇಹಳ್ಳಿಯಲ್ಲಿ ಒಂದೇ ಕುಟುಂಬದವರು 17 ಎಕರೆ ಅರಣ್ಯ ಭೂಮಿಯನ್ನು ಅತಿಕ್ರಮವಾಗಿ ಪ್ರವೇಶಿಸಿ, ಭೂ ಕಬಳಿಕೆ ಮಾಡಿದ್ದಾರೆ ಎಂದು ಯರದಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಿಪಟೂರು ಉಪ
ವಿಭಾಗಾಧಿಕಾರಿ ದಿಗ್ವಿಜಯ್‍ ಬೋಡ್ಕೆಮತ್ತು ತಹಶೀಲ್ದಾರ್ಆರ್‌.ನಯೀಂಉನ್ನೀಸಾ ಭೇಟಿ ನೀಡಿ, ಪರಿಶೀಲಿಸಿದರು.

ಅರಣ್ಯ ಭೂಮಿಯಲ್ಲಿ ದನ, ಕರುಗಳು ಮೇಯಲು, ಕಾಡುಪ್ರಾಣಿಗಳು ವಾಸವಿರುವ ಈ ಪ್ರದೇಶವನ್ನು ಹಾಗೂ ಅಕ್ರಮವಾಗಿ ಮಂಜೂರಾಗಿರುವ ಜಾಗವನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು.

ಎಸಿ ಮತ್ತು ತಹಶೀಲ್ದಾರ್ ಮಾತನಾಡಿ, ಈ ಜಾಗವು ಸಾಮಾಜಿಕ ಅರಣ್ಯ ಪ್ರದೇಶವಾಗಿದೆ. ಸಂಬಂಧಪಟ್ಟ ದಾಖಲೆ, ಸ್ಥಳ ಪರಿಶೀಲಿಸಲಾಗಿದೆ. ಸದರಿ ಜಾಗದಲ್ಲಿ ನೀಲಗಿರಿ ಮರಗಳು ಇದ್ದು, ಇದು ಅರಣ್ಯ ಪ್ರದೇಶವಾಗಿರುತ್ತದೆ. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣವಿದ್ದು ಜುಲೈ 14ರಂದು ವಿಚಾರಣೆ ಇದ್ದು, ಆನಂತರ ಕ್ರಮಕೈಗೊಳ್ಳಲಾಗುವುದು ಎಂದರು. ಈ ಸ್ಥಳವನ್ನು ಅತಿಕ್ರಮವಾಗಿ ಯಾರೂ ಪ್ರವೇಶಿಸದಂತೆ ನೋಡಿಕೊಳ‍್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಅರಣ್ಯ ಇಲಾಖೆಯ ಅಧಿಕಾರಿ ಲಿಂಗರಾಜ ಮಾತನಾಡಿ, ಈ ಸ್ಥಳವು ಸಾಮಾಜಿಕ ಅರಣ್ಯ ಪ್ರದೇಶವಾಗಿದ್ದು, ಇದನ್ನು ಒತ್ತುವರಿ ಮಾಡಲಾಗುತ್ತಿದೆ. ಇದರ ವಿರುದ್ಧ ಈಗಾಗಲೇ ಕ್ರಮಕೈಗೊಂಡು ಅತಿಕ್ರಮ ಪ್ರವೇಶವನ್ನು ತೆರವುಗೊಳಿಸುವಂತೆ ಕಂದಾಯ ಇಲಾ
ಖೆಗೆ ಮನವಿ ಮಾಡಿದ್ದೇವೆ ಎಂದರು.

ಡಿವೈಎಸ್‌ಪಿ ರಮೇಶ್, ಸಿಪಿಐ ನವೀನ್‍, ರಮೇಶ್, ಶಂಕರಲಿಂಗೇಗೌಡ, ನಂದೀಶ್, ಶಿವಕುಮಾರ, ನರಸಿಂಹಯ್ಯ, ಗಂಗಾಧರ, ಸವಿತಾ, ನವೀನ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.