ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ₹400ರ ಗಡಿ ದಾಟಿದ ಬೆಳ್ಳುಳ್ಳಿ

Published : 22 ಸೆಪ್ಟೆಂಬರ್ 2024, 6:03 IST
Last Updated : 22 ಸೆಪ್ಟೆಂಬರ್ 2024, 6:03 IST
ಫಾಲೋ ಮಾಡಿ
Comments

ತುಮಕೂರು: ಬೆಳ್ಳುಳ್ಳಿ ಧಾರಣೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದ್ದು, ತುಮಕೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕೆ.ಜಿ ಬೆಳ್ಳುಳ್ಳಿ ಬೆಲೆ ₹400ರ ಗಡಿ ದಾಟಿದೆ.

ಕಳೆದ ವಾರ ₹250ರಷ್ಟಿದ್ದ ಕೆ.ಜಿ. ಬೆಳ್ಳುಳ್ಳಿ ಬೆಲೆ ವಾರದ ಅಂತರದಲ್ಲಿಯೇ ₹150 ಏರಿಕೆ ಕಂಡಿದೆ. ಕಡಿಮೆ ಗುಣಮಟ್ಟದ ಬೆಳ್ಳುಳ್ಳಿ ಬೆಲೆ  ₹320ರ ಆಸುಪಾಸಿನಲ್ಲಿದೆ.

ತಿಂಗಳ ಹಿಂದೆ ₹200ರಷ್ಟಿದ್ದ ಬೆಳ್ಳುಳ್ಳಿ ಧಾರಣೆ ನಂತರದ ದಿನಗಳಲ್ಲಿ ಏರುತ್ತಲೇ ಸಾಗಿದೆ. ರಾಜ್ಯದಲ್ಲಿ ಬೆಳ್ಳುಳ್ಳಿ ಬೆಳೆಯುವುದು ಕಡಿಮೆಯಾಗಿದ್ದು ನೆರೆಯ ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಿಂದ ಸ್ಥಳೀಯ ಮಾರುಕಟ್ಟೆಗೆ ಬರುತ್ತಿದೆ.

ಹೊರ ರಾಜ್ಯಗಳಲ್ಲೂ ಇತ್ತೀಚಿನ ದಿನಗಳಲ್ಲಿ ಬೆಳ್ಳುಳ್ಳಿ ಬೆಳೆ ಕಡಿಮೆಯಾಗಿದೆ. ಬೇಡಿಕೆ ಮತ್ತು ದರ ಹೆಚ್ಚಾಗಲು ಇದು ಮುಖ್ಯ ಕಾರಣ ಎಂದು ಬೆಳ್ಳುಳ್ಳಿ ವರ್ತಕರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT