ಗಾರ್ಮೆಂಟ್ಸ್ ಬಗ್ಗೆ ದೂರು ಸಲ್ಲಿಸಿದರೆ ನಮಗೆ ಕೆಲಸದ ಅಭದ್ರತೆ ಉಂಟಾಗುತ್ತದೆ. ಒತ್ತಡ ನಿವಾರಣೆಗೆ ಸೂಕ್ತ ವಿಶ್ರಾಂತಿ ಹಾಗೂ ರಕ್ಷಣೆ ನೀಡುವತ್ತ ಉದ್ಯೋಗದಾತರು ನಿಗಾ ವಹಿಸಬೇಕು.
ಗಾರ್ಮೆಂಟ್ಸ್ ಉದ್ಯೋಗಿ
ಪ್ರತಿ ನಿಮಿಷವು ನಿಗದಿತ ಗುರಿ ತಲುಪುವ ದೆಸೆಯಲ್ಲಿ ಕೆಲಸ ಮಾಡುತ್ತಾ ಕೈಗಳು ಜಡವಾಗುತ್ತವೆ. ವಾರದ ಆರು ದಿನದ ಕೆಲಸದಲ್ಲಿ ಪ್ರವಾಸ ಮನರಂಜನೆ ಇರಲಿ ಕುಟುಂಬದ ಜೊತೆ ಕಾಲ ಕಳೆಯುವುದು ಕಷ್ಟವಾಗಿದೆ.
ರಿಯಾ ಗಾರ್ಮೆಂಟ್ಸ್ ಉದ್ಯೋಗಿ
ಗಾರ್ಮೆಂಟ್ಸ್‌ಗಳ ಮುಂಭಾಗ ರಸ್ತೆ ಬಳಿ ಕುಳಿತು ಸಂಜೆ ವ್ಯಾಪಾರ ಮಾಡುತ್ತೇನೆ. ಮಹಿಳೆಯರು ಮನೆಗೆ ಹೋಗುವಾಗ ಸಮಯದ ಅಭಾವವಿರುವುದರಿಂದ ತರಾತುರಿಯಲ್ಲಿ ವಸ್ತುಗಳನ್ನು ಖರೀದಿ ಮಾಡಿ ಹೋಗುತ್ತಾರೆ.