ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ | ರೈತರ ಮಕ್ಕಳಿಗೆ ಹೆಣ್ಣು ಕೊಡಿಸಿ: ಜಿಲ್ಲಾಧಿಕಾರಿಗೆ ಮನವಿ

Published 17 ಡಿಸೆಂಬರ್ 2023, 5:52 IST
Last Updated 17 ಡಿಸೆಂಬರ್ 2023, 5:52 IST
ಅಕ್ಷರ ಗಾತ್ರ

ಶಿರಾ: ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ನಡೆದ ಜನತಾ ದರ್ಶನದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡಿಸುವಂತೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರಿಗೆ ರೈತ ಜಯರಾಮಪ್ಪ ಮನವಿ ಸಲ್ಲಿಸಿದರು.

ತಾಲ್ಲೂಕಿನ ಚಿಕ್ಕನಕೋಟೆ ಗ್ರಾಮದ ರೈತ ಜಯರಾಮಪ್ಪ ಅವರು, ‘ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. 10 ವರ್ಷದಿಂದ ಹುಡುಕಿದರೂ ನನ್ನ ಮಗನಿಗೆ ಹೆಣ್ಣು ಸಿಕ್ಕಿಲ್ಲ. ಸರ್ಕಾರಿ ಕೆಲಸದಲ್ಲಿ ಇದ್ದರೆ ಮಾತ್ರ ಹೆಣ್ಣು ನೀಡುತ್ತಿದ್ದಾರೆ ಇಲ್ಲದಿದ್ದರೆ ಇಲ್ಲ. ತೋಟ ಇದ್ದರೂ ರೈತರ ಮಕ್ಕಳಿಗೆ ಹೆಣ್ಣು ಕೊಡಲು ಯಾರು ಮುಂದೆ ಬರಲ್ಲ. ಹೆಣ್ಣು ನೋಡಲು ಹೋದರೆ ಮಗ ಏನು ಕೆಲಸ ಮಾಡುತ್ತಾನೆ ಎಂದು ಕೇಳುತ್ತಾರೆ. ನನ್ನ ಮಗನಿಗೆ ಉದ್ಯೋಗ ನೀಡಿ, ಇಲ್ಲ ಹೆಣ್ಣು ಕೊಡಿಸಿ’ ಎಂದು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾದಿಕಾರಿ ಏನು ಉತ್ತರ ನೀಡಬೇಕು ಎಂದು ಆಲೋಚಿಸಿ, ‘ನೋಡೋಣ ಹೋಗಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT