ಪಾವಗಡ: 84 ಲಕ್ಷ ಬಗೆಯ ಜೀವಿಗಳು ಜಗತ್ತಿನಲ್ಲಿದ್ದರೂ, ಜೀವನ ಸಾರ್ಥಕ ಮಾಡಿಕೊಳ್ಳುವ ಶಕ್ತಿ ಮನುಷ್ಯನಿಗೆ ಮಾತ್ರ ಇದೆ ಎಂದು ಶೃಂಗೇರಿ ಪೀಠದ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.

ಪಟ್ಟಣಕ್ಕೆ ಬುಧವಾರ ರಾತ್ರಿ ವಿಜಯಯಾತ್ರೆ ಅಂಗವಾಗಿ ಭೇಟಿ ನೀಡಿದ ಅವರು ಮಾತನಾಡಿದರು.

ಜೀವಿಸುವುದು, ಸಾಧಿಸುವುದಕ್ಕೂ ವ್ಯತ್ಯಾಸ ಇದೆ. ಎಲ್ಲ ಪ್ರಾಣಿಗಳೂ ಜೀವಿಸುತ್ತವೆ. 84 ಲಕ್ಷ ಬಗೆಯ ಜೀವಿಗಳು ಜಗತ್ತಿನಲ್ಲಿವೆ. ಇದರಲ್ಲಿ ಮನುಷ್ಯನೂ ಒಬ್ಬ. ಆದರೆ ಯೋಗ್ಯತೆ ವಿಚಾರದಲ್ಲಿ ಮನುಷ್ಯನೊಟ್ಟಿಗೆ ನಿಲ್ಲಲು ಯಾವ ಪ್ರಾಣಿಗಳಿಗೂ ಸಾಧ್ಯವಿಲ್ಲ ಎಂದು ಹೇಳಿದರು.

ಧರ್ಮಾಚರಣೆಗೆ ಸಮಯವಿಲ್ಲ ಎನ್ನುವುದು ಮೂರ್ಖತನ. ಎಂತಹ ದೊಡ್ಡ ಹುದ್ದೆಯಲ್ಲಿದ್ದವರೂ, ಜವಾಬ್ದಾರಿ ಹೊತ್ತವರು ಸಹ ಧರ್ಮಾಚರಣೆ ಮಾಡುವುದನ್ನು ನೋಡುತ್ತಿದ್ದೇವೆ. ಧರ್ಮಾಚರಣೆ ಮಾಡುವವರು ಉನ್ನತ ಹುದ್ದೆ, ಉನ್ನತ ಸ್ಥಾನ ಅಲಂಕರಿಸುತ್ತಾರೆ ಎಂದರು.

ಕೆಲವರು ಧರ್ಮಾಚರಣೆಗಳನ್ನು ಮೂಢನಂಬಿಕೆಗಳೆಂದು ಟೀಕೆ ಮಾಡುತ್ತಾರೆ. ಕೆಲವರು ಶಾಸ್ತ್ರಗಳ ಸಾರವನ್ನು ಪೂರ್ತಿಯಾಗಿ ತಿಳಿದುಕೊಳ್ಳದೆ ಆಡಂಬರ ತೋರುತ್ತಾ ನಾಲ್ಕಾರು ಜನರನ್ನು ಹಿಂದಿಟ್ಟುಕೊಂಡು ಧರ್ಮದ್ರೋಹದ ಕೆಲಸ ಮಾಡುತ್ತಿದ್ದಾರೆ. ಅಂತಹವರಿಂದ ದೂರವಿರಿ ಎಂದು ತಿಳಿಸಿದರು.

ಸ್ವಾಮಿ ಜಪಾನಂದ ಜಿ ಮಾತನಾಡಿ, ಧರ್ಮ, ಆಚಾರಗಳನ್ನು ಅನುಸರಿಸಬೇಕು. ಭಗವದ್ಗೀತೆ, ವೇದ, ಉಪನಿಷತ್ಗಳನ್ನು ಅಭ್ಯಾಸ ಮಾಡಬೇಕು. ಸಂಧ್ಯಾವಂದನೆ, ಪೂಜೆ, ಇತ್ಯಾದಿ ಆಚಾರಗಳನ್ನು ಅನುಸರಿಸಬೇಕು ಎಂದರು.

ಶಾರದಾದೇವಿ ಕಣ್ಣಿನ ಆಸ್ಪತ್ರೆಯ ಮಕ್ಕಳ ನೇತ್ರಾ ಚಿಕಿತ್ಸಾ ಘಟಕವನ್ನು ಗುರುವಾರ ಉದ್ಘಾಟಿಸಲಾಯಿತು. ಶೃಂಗೇರಿ ಪೀಠದ ಜಗದ್ಗುರು ವಿಧುಶೇಖರ ಭಾರತಿ ಸ್ವಾಮೀಜಿ ಅವರಿಗೆ ಭಿನ್ನವತ್ತಳೆ ಸಮರ್ಪಿಸಲಾಯಿತು.

ಸ್ವಾಮೀಜಿ ದರ್ಶನ ಪಡೆಯಲು, ಪರಶುರಾಂಪುರ, ಚಳ್ಳಕೆರೆ, ಆಂಧ್ರದ ಕಲ್ಯಾಣದುರ್ಗ, ಪೆನುಗೊಂಡ, ಹಿಂದೂಪುರ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಬಂದಿದ್ದರು.

ಎಸ್.ಎಸ್.ಕೆ.ಸಂಘದ ಅಧ್ಯಕ್ಷ ಆನಂದರಾವ್, ಕಾರ್ಯದರ್ಶಿ ಸುಬ್ಬನರಸಿಂಹ, ತಾಲ್ಲೂಕು ಬ್ರಾಹ್ಮಣ ಸಂಘದ ಗೌರವ ಅಧ್ಯಕ್ಷ ಅನಂತರಾಮ ಭಟ್, ಅಧ್ಯಕ್ಷ ವಿಶ್ವನಾಥ್, ನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ರಘುನಾಥ್, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಶೋಭಾ ಯಾತ್ರೆ ರದ್ದು

ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ದೇಶದ ಸೈನಿಕರು ಬಲಿದಾನದ ಹಿನ್ನೆಲೆ ಶೋಭಾಯಾತ್ರೆ ನಡೆಸಬಾರದು ಎಂದು ವಿಧುಶೇಖರ ಭಾರತಿ ಸ್ವಾಮೀಜಿ ಸೂಚಿಸಿದ್ದರಿಂದ ಶೋಭಾಯಾತ್ರೆ ರದ್ದುಗೊಳಿಸಲಾಯಿತು. ನಗರ ತಾಲ್ಲೂಕು ಬ್ರಾಹ್ಮಣ ಸಭಾ ಶೋಭಾ ಯಾತ್ರೆಗಾಗಿ ಪಟ್ಟಣವನ್ನು ಸಿಂಗರಿಸಿ ಸಕಲ ಸಿದ್ಧತೆ ನಡೆಸಿತ್ತು. ನಂತರ ಬೆಸ್ಕಾಂ ಕಚೇರಿ ಮುಂಭಾಗ ಸ್ವಾಮೀಜಿಯನ್ನು ಸ್ವಾಗತಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.