ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರು: ಗೌರಿ, ಗಣೇಶ ತಯಾರಿಕ ಶಿಬಿರ

Last Updated 8 ಸೆಪ್ಟೆಂಬರ್ 2021, 4:17 IST
ಅಕ್ಷರ ಗಾತ್ರ

ತಿಪಟೂರು: ಗೌರಿ-ಗಣಪತಿ ಆರಾಧನೆ ಜೊತೆಗೆ ಪರಸರ ಉಳಿಸುವ ಜವಾಬ್ದಾರಿಯೂ ಎಲ್ಲರ ಮೇಲಿರುವುದರಿಂದ ಪರಿಸರ ಸ್ನೇಹಿ ಗಣಪನ ಆರಾಧನೆ ಅಗತ್ಯ ‌ಎಂದು ಸ್ಪಂದನ ಟ್ರಸ್ಟ್ ಅಧ್ಯಕ್ಷ ವೀಣಾ ನಾಗೇಶ್ ಹೇಳಿದರು.

ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೊಗಡು ಜನಪದ ಹೆಜ್ಜೆ ಸಂಘ, ಇಕೊ ಕ್ಲಬ್, ಎನ್‌ಎಸ್‌ಎಸ್‌ನಿಂದ ಆಯೋಜಿಸಿದ್ದ ಪರಿಸರ ಸ್ನೇಹಿ ಗೌರಿ-ಗಣಪತಿ ವಿಗ್ರಹ ತಯಾರಿಸುವ ಶಿಬಿರದಲ್ಲಿ ಅವರು ಮಾತನಾಡಿದರು.

ಇಂದಿನ ಮಕ್ಕಳು ಪರಿಸರದೊಂದಿಗೆ ಬೆರೆಯುವ ಅವಕಾಶಗಳನ್ನೇ ಕಳೆದುಕೊಳ್ಳುತ್ತಿದ್ದಾರೆ. ಮಣ್ಣು, ಪ್ರಕೃತಿಯ ಜೊತೆಗೆ ಬೆರೆಯುತ್ತಿಲ್ಲ. ಗಣಪತಿ ಹಬ್ಬ ಸಮೀಪವಿರುವುದರಿಂದ ಪ್ರತಿಯೊಬ್ಬರು ಮನೆಗಳಲ್ಲಿ ಗಣಪತಿ ಪ್ರತಿಷ್ಠಾಪಿಸುತ್ತಾರೆ. ಅಂತಹ ಸಂದರ್ಭದಲ್ಲಿ ಮಣ್ಣಿನಿಂದ ಮಾಡಿದ ಪರಿಸರಸ್ನೇಹಿ ಗಣಪತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಿದಾಗ ಪ್ರಕೃತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣಪತಿಗಳನ್ನು ಬಳಸಿ ಪರಿಸರಕ್ಕೆ ಹಾನಿ ಉಂಟು ಮಾಡುವವರಿಗೆ ಮನವರಿಕೆ ಮಾಡಿ ಪರಿಸರ ಸ್ನೇಹಿ ಗಣಪತಿ ಬಳಸಲು ಪ್ರೇರೆಪಿಸಬೇಕಿದೆ ಎಂದರು.

ತಾ.ಪಂ. ಮಾಜಿ ಸದಸ್ಯ ಅರಳಗುಪ್ಪೆ ಪುಟ್ಟಸ್ವಾಮಿ ಮಾತನಾಡಿ, ಗೌರಿ-ಗಣಪತಿ ತಯಾರಕರು ಇತ್ತೀಚೆಗೆ ಪರಿಸರ ಸ್ನೇಹಿ ವಾಟರ್ ಪೇಯಿಂಟ್ ಬಳಸಿ ಗಣಪತಿಯ ವಿಗ್ರಹಗಳನ್ನು ತಯಾರು ಮಾಡುತ್ತಿದ್ದಾರೆ. ಇದನ್ನು ಅರಿತು ಪ್ರತಿಯೊಬ್ಬರು ಪರಿಸರ ಸ್ನೇಹಿ ಗಣಪನ ಖರೀದಿಸಿ ಪ್ರಕೃತಿಯನ್ನು ರಕ್ಷಿಸಬೇಕು ಎಂದರು.

ಪರಿಸರವಾದಿ ಮುರುಳೀಧರ್ ಮಾತನಾಡಿ, ಮಕ್ಕಳಲ್ಲಿ ಜಾಗೃತಿ ಮೂಡಿಸುವುದರಿಂದ ಮನೆಯವರಿಗೆ ಹಾಗೂ ನೆರೆಹೊರೆಯವರಿಗೂ ಅರಿವು ಮೂಡಿಸಲು ಮುಂದಾಗುತ್ತಾರೆ. ಮುಂದಿನ ದಿನಗಳಲ್ಲಿ ಎಲ್ಲೆಡೆ ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗೌರಿ-ಗಣಪತಿಯನ್ನು ಬಳಸುವಂತಾಗಬೇಕಿದೆ ಎಂದರು.

ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಉತ್ತಮ ಗಣಪನ ಮೂರ್ತಿ ಮಾಡಿದವರಿಗೆ ವಿಶೇಷ ಬಹುಮಾನ ನೀಡಲಾಯಿತು. ಶಿಬಿರಾರ್ಥಿಗಳು ತಾವು ತಯಾರಿಸಿದ ಗಣಪನ ವಿಗ್ರಹಗಳನ್ನು ತಮ್ಮ ಮನೆಗಳಿಗೆ ಕೊಂಡೊಯ್ದರು.

ಶಿಬಿರದಲ್ಲಿ ತಹಶೀಲ್ದಾರ್ ಆರ್.ಜಿ.ಚಂದ್ರಶೇಖರ್, ಪೌರಾಯುಕ್ತ ಉಮಾಕಾಂತ್, ಸಂಘದ ಅಧ್ಯಕ್ಷ ಸಿರಿಗಂಧ ಗುರು, ಕಾರ್ಯದರ್ಶಿ ಚಿದಾನಂದ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT