ಗುರುವಾರ , ಆಗಸ್ಟ್ 11, 2022
21 °C

ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿಗೆ ಹೊರಟ ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರದ ಬಲರಾಮ್ ಶೆಟ್ಟಿ ಮತ್ತು ರಮಾದೇವಿ ಅವರ ಪುತ್ರ ನಿರೂಪ್ ತಮ್ಮ ವಿವಾಹಕ್ಕೆ ಬೆಂಗಳೂರಿಗೆ ತೆರಳಲು ಮಂಗಳವಾರ ಹೆಲಿಕಾಪ್ಟರ್ ಬಳಸುವ ಮೂಲಕ ಭರ್ಜರಿ ಹವಾ ಸೃಷ್ಟಿಸಿದರು.

ನಿರೂಪ್ ಅವರ ವಿವಾಹ ಬೆಂಗಳೂರಿನ ತಲಘಟ್ಟಪುರದ ಕಲ್ಯಾಣ ಮಂಟಪವೊಂದರಲ್ಲಿ ಮಂಗಳವಾರ ಮತ್ತು ಬುಧವಾರ ನಡೆಯಲಿದೆ. ನಗರದ ಗುಬ್ಬಿ ಗೇಟ್‌ನ ಹೆಲಿಪ್ಯಾಡ್‌ನಿಂದ ಬೆಳಿಗ್ಗೆ ಹೆಲಿಕಾಪ್ಟರ್‌ ಹತ್ತಿದ ನಿರೂಪ್ ನೇರವಾಗಿ ತಲಘಟ್ಟ ಪುರದ ಹೆಲಿಪ್ಯಾಡ್‌ನಲ್ಲಿ ಇಳಿದಿದ್ದಾರೆ. ಈ ವೇಳೆ ವಧು ಐಶ್ವರ್ಯಾ ಅವರ ಸಂಬಂಧಿಕರು ಹರ್ದೋದ್ಗಾರದಿಂದ ವರನನ್ನು ಸ್ವಾಗತಿಸಿದರು.

ತುಮಕೂರು ಮತ್ತು ಬೆಂಗಳೂರಿನ ನಡುವೆ ಓಡಾಟದ ಅವಧಿ ಸರಾಸರಿ ಒಂದೂವರೆ ತಾಸು ಇದೆ. ಸಾಮಾನ್ಯವಾಗಿ ಶುಭ ಸಮಾರಂಭಗಳಿಗೆ ಬೆಂಗಳೂರಿಗೆ ತೆರಳಲು ಕಾರು ಬಳಸುವರು. ಆದರೆ ಬಲರಾಮ್ ಶೆಟ್ಟಿ ತಮ್ಮ ಪುತ್ರನ ವಿವಾಹಕ್ಕೆ ಹೆಲಿಪಾಪ್ಟರ್ ಬಳಸುವ ಮೂಲಕ ಗಮನ ಸೆಳೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು