ಶುಕ್ರವಾರ, ಮೇ 27, 2022
26 °C

ಇಂಧನ ಉಳಿವಿಗೆ ಕೈಜೋಡಿಸಿ: ಎಂ.ಝಡ್. ಕುರಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಮುಂದಿನ ಪೀಳಿಗೆಗೆ ವಿದ್ಯುತ್ ಉಳಿಸಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ನಿರ್ಲಕ್ಷ್ಯ ತೋರಿದರೆ ಮುಂದೆ ವಿದ್ಯುತ್ ಕ್ಷಾಮ ಉಂಟಾಗಲಿದೆ ಎಂದು ‘ಸಾಹೇ’ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಎಂ.ಝಡ್. ಕುರಿಯನ್ ಎಚ್ಚರಿಸಿದರು.

ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಎನರ್ಜಿ ಕ್ಲಬ್’ ವತಿಯಿಂದ ಮಂಗಳವಾರ ಆರಂಭಗೊಂಡ ಒಂದು ವಾರದ ‘ರಾಷ್ಟ್ರೀಯ ಇಂಧನ ಶಕ್ತಿ ಸಂರಕ್ಷಣಾ ಜಾಗೃತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು
ಮಾತನಾಡಿದರು.

ಮುಂದಿನ ಐದು ವರ್ಷಗಳಲ್ಲಿ ಪೆಟ್ರೋಲ್ ಬಂಕ್‍ಗಳು ಮುಚ್ಚಿ, ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗುತ್ತದೆ. ಆಗ ಸಹಜವಾಗಿ ವಿದ್ಯುತ್‌ಗೆ ಬೇಡಿಕೆಯುಂಟಾಗುತ್ತದೆ. ಆದ್ದರಿಂದ ಇಂದಿನಿಂದಲೇ ವಿದ್ಯುತ್‍ ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಆನ್‍ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಾಂಶುಪಾಲ ಎಂ.ಎಸ್. ರವಿಪ್ರಕಾಶ, ‘ಸುಖಾ ಸುಮ್ಮನೆ ಇಂಧನ ಅಥವಾ ವಿದ್ಯುತ್ ಶಕ್ತಿಯನ್ನು ಬಳಸಬಾರದು. ಶಕ್ತಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು.

ಪರೀಕ್ಷಾಂಗ ಕುಲಸಚಿವ ಕರುಣಾಕರ್, ಡೀನ್ ಎಂ. ಸಿದ್ದಪ್ಪ, ವೇಣುಗೋಪಾಲ್, ಆಂತರಿಕ ಗುಣಮಟ್ಟ ಕೋಶ ಘಟಕದ ಮುಖ್ಯ ಸಂಚಾಲಕ ಆರ್. ಪ್ರಕಾಶ್, ಎನರ್ಜಿ ಕ್ಲಬ್‌ನ ಎಲ್. ಸಂಜೀವ್ ಕುಮಾರ್, ಸಂಚಾಲಕರಾದ ಎನ್. ಪ್ರದೀಪ್, ಜೆ. ಹರ್ಷ, ಜೆ. ಭರತ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು