ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ಬೆಟ್ಟಿಂಗ್‌ ಹಾವಳಿ: ಯುವಕರೇ ಮುಂದು– ಫೋನ್ ಪೇ, ಗೂಗಲ್ ಪೇ ಬಳಸಿ ದಂಧೆ

Last Updated 28 ಏಪ್ರಿಲ್ 2021, 6:26 IST
ಅಕ್ಷರ ಗಾತ್ರ

ಕೊರಟಗೆರೆ: ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ವ್ಯಾಪಕವಾಗಿ ನಡೆಯುತ್ತಿದೆ.

ಈ ಹಿಂದೆ ಪಟ್ಟಣ ಪ್ರದೇಶದಲ್ಲಿ ಹೆಚ್ಚಿದ್ದ ಕ್ರಿಕೆಟ್ ಬೆಟ್ಟಿಂಗ್, ಈಗ ಗ್ರಾಮೀಣ ಭಾಗಕ್ಕೂ ಲಗ್ಗೆ ಇಟ್ಟಿದೆ. ಇದರಿಂದಾಗಿ ಅನೇಕರು ಸಾಲಗಾರ
ರಾಗಿ ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸೋತ ಕೆಲವರು ಕಳ್ಳತನಕ್ಕೆ ಕೈಹಾಕುವ ದುಸ್ಥಿತಿ ಎದುರಾಗುತ್ತಿದೆ.

ಮೊಬೈಲ್ ಮೂಲಕ ಶುರುವಾಗುವ ಈ ದಂಧೆ ಫೋನ್ ಪೇ, ಗೂಗಲ್ ಪೇ ಬಳಸಿ ಹಣ ವರ್ಗಾವಣೆ ಮಾಡುತ್ತಾರೆ. ಇತ್ತೀಚೆಗೆ ಹೈಟೆಕ್‌ ಆಗಿ ನಡೆಯುತ್ತಿದೆ. ಪಟ್ಟಣದಲ್ಲಿ ಒಂದಡೆ ಕೋವಿಡ್‌ ಭೀತಿಯಾದರೆ, ಮತ್ತೊಂದೆಡೆ ಕ್ರಿಕೆಟ್ ಬೆಟ್ಟಿಂಗ್ ಯುವಕರನ್ನು ಬಲಿತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಪೋಷಕರು ಆತಂಕಕ್ಕೀಡಾಗುತ್ತಿದ್ದಾರೆ.

ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮವೊಂದರಲ್ಲಿ 23 ವರ್ಷದ ಯುವಕ ಬೆಟ್ಟಿಂಗ್ ದಂಧೆಗೆ ಸಿಲುಕಿ ₹70 ಲಕ್ಷ ಕಳೆದುಕೊಂಡು, ಊರು ಬಿಟ್ಟಿದ್ದಾನೆ ಎಂಬ ಸುದ್ದಿ ಈ ಭಾಗದಲ್ಲಿ ಹರಿದಾಡುತ್ತಿದೆ. ಆತನ ಆಸ್ತಿ ಮಾರಿದರೂ ಸಾಲ ತೀರಿಸಲಾಗದು ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.

ಬೆಟ್ಟಿಂಗ್‌ನಲ್ಲಿ 16ರಿಂದ 30 ವರ್ಷದವರೇ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಕೋವಿಡ್‌ನಿಂದಾಗಿ, ಶಾಲೆ, ಕಾಲೇಜುಗಳಿಗೆ ರಜೆ ಇರುವುದರಿಂದ ಪಿಯುಸಿ, ಪದವಿ ವಿದ್ಯಾರ್ಥಿಗಳು ಈ ದಂಧೆಯಲ್ಲಿ ತೊಡಗಿದ್ದಾರೆ. ಕಾಲೇಜು, ಕೆಲಸ ಇಲ್ಲದ ಕಾರಣ ಮನೆಯಲ್ಲಿ ಏನಾದರೊಂದು ನೆಪ ಹೇಳಿ ಪೋಷಕರಿಂದ ಹಣ ಪಡೆದು ಮೊದಲು ಸಣ್ಣ ಪ್ರಮಾಣದ ಹಣದಲ್ಲಿ ಬೆಟ್ಟಿಂಗ್ ಪ್ರಾರಂಭಿಸುತ್ತಾರೆ. ನಂತರ ದೊಡ್ಡಮಟ್ಟದ ಬೆಟ್ಟಿಂಗ್‌ಗೆ ಇಳಿಯುತ್ತಾರೆ. ಕೆಲವು ಮೊಬೈಲ್ ಮಳಿಗೆ, ಟೀ ಅಂಗಡಿ, ವಾಹನಗಳ ಸರ್ವೀಸ್ ಸೆಂಟರ್ಸ್‌ ಮಾಲೀಕರು ಈ ದಂಧೆಯಲ್ಲಿ ತೊಡಗಿದ್ದಾರೆ.

ಬಹುತೇಕ ಮೊಬೈಲ್ ಮೂಲಕವೇ ಬೆಟ್ಟಿಂಗ್ ನಡೆಯುವುದರಿಂದ ಇದನ್ನು ಪತ್ತೆ ಹಚ್ಚುವುದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ. ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಗೊತ್ತಿದ್ದರೂ ಯಾರೂ ಈ ದಂಧೆಯಲ್ಲಿ ತೊಡಗಿದ್ದಾರೆ ಎನ್ನುವುದನ್ನು ಕಂಡು ಹಿಡಿಯುವುದು ಸ್ವಲ್ಪ ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT