ಜನರು ಏನಂದರು ಕಲ್ಲೂರು ಉತ್ತಮ ವ್ಯಾಪಾರ ಕೇಂದ್ರವಾಗಿದ್ದರೂ ಮೂಲ ಸೌಕರ್ಯಗಳಿಲ್ಲದೆ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಜನಪ್ರತಿನಿಧಿಗಳು ಗಮನಹರಿಸಿ ಅಗತ್ಯ ಸೌಕರ್ಯ ಕಲ್ಪಿಸಿ ಕೊಟ್ಟಲ್ಲಿ ರಾಜ್ಯದಲ್ಲಿಯೇ ಉತ್ತಮ ವ್ಯಾಪಾರ ಕೇಂದ್ರವಾಗಿ ಬೆಳೆಯುವುದು.
ವೆಂಕಟೇಶ್, ಗ್ರಾಮಸ್ಥ
ಸಂತೆ ವ್ಯಾಪಾರದಿಂದ ಹೆಚ್ಚು ಸುಂಕ ವಸೂಲಿಯಾಗುತ್ತಿದ್ದರೂ, ಗ್ರಾಮ ಪಂಚಾಯಿತಿಯವರು ಅಗತ್ಯ ಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ವ್ಯಾಪಾರಿಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸಿಕೊಟ್ಟಲ್ಲಿ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಆದಾಯದ ಮೂಲವಾಗುತ್ತದೆ.
ಎಜಾದ್ ಪಾಷ, ವ್ಯಾಪಾರಿ
ಕಲ್ಲೂರು ಸಂತೆ ಮೈದಾನದ ಮೂಲಕ ಹಾದುಹೋಗಿರುವ ಯಡೆಯೂರು ರಸ್ತೆ ಹಾಗೂ ಮೈಸೂರು ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ವಾಹನ ಚಲಾಯಿಸುವುದು ಕಷ್ಟವಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಗರ್ಭಿಣಿಯರು, ಹಿರಿಯ ನಾಗರಿಕರ ಹಾಗೂ ರೋಗಿಗಳ ಪಾಡು ಹೇಳತೀರದಾಗಿದೆ. ತಕ್ಷಣ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು.
ಹೇಮಂತ್, ಆಟೊ ಚಾಲಕ
ಕುರಿ ಮೇಕೆ ವ್ಯಾಪಾರದಲ್ಲಿ ಬದುಕು ಕಟ್ಟಿಕೊಂಡಿರುವ ಅನೇಕ ಸ್ಥಳೀಯರಿಗೆ ವ್ಯಾಪಾರ ಇಲ್ಲವಾದಲ್ಲಿ ತೊಂದರೆ ಉಂಟಾಗುವುದು. ಅಗತ್ಯ ಸೌಕರ್ಯ ಒದಗಿಸಿದಲ್ಲಿ ದೂರದ ವ್ಯಾಪಾರಿಗಳು ಬಂದು ವಹಿವಾಟು ಹೆಚ್ಚಾಗುವ ಜೊತೆಗೆ ಗ್ರಾಮ ಪಂಚಾಯಿತಿಗೂ ಉತ್ತಮ ಆದಾಯದ ಮೂಲವಾಗುವುದು.