ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬರ’

Published 7 ಏಪ್ರಿಲ್ 2024, 4:43 IST
Last Updated 7 ಏಪ್ರಿಲ್ 2024, 4:43 IST
ಅಕ್ಷರ ಗಾತ್ರ

ತುರುವೇಕೆರೆ: ‘ಕ್ಷೇತ್ರದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಾಗಿ ಪ್ರತಿ ಮನೆಗೆ ತೆರಳಿ, ಯಾವುದೇ ಗೊಂದಲ ಮಾಡಿಕೊಳ್ಳದೆ ಬಿಜೆಪಿಗೆ ಮತ ಹಾಕಿಸಿ’ ಎಂದು ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಮನವಿ ಮಾಡಿದರು.

ತಾಲ್ಲೂಕಿನ ಕಸಬಾ ಮತ್ತು ದಂಡಿನಶಿವರ ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಮತಯಾಚಿಸಿ ಮಾತನಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯದಲ್ಲಿ ತೀವ್ರ ಬರಗಾಲ ಬಂದು ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಟೀಕಿಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ‘ಒಕ್ಕಲಿಗರಿಗೆ ಎಸ್.ಪಿ.ಮುದ್ದಹನುಮೇಗೌಡ ನಮ್ಮವರು ಎನ್ನುವ ಭಾವನೆ ಇದೆ. ಆದರೆ ಸಂಸದರಾಗಿದ್ದಾಗ ಕ್ಷೇತ್ರಕ್ಕೆ ಅವರ ಕೊಡುಗೆ ಏನು? ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರನ್ನು ಗೆಲ್ಲಿಸಿದಿದ್ದರೆ ಕೇಂದ್ರದಿಂದ ಹೆಚ್ಚಿನ ಅನುದಾನ ತಂದು ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಮಾಡುತ್ತಿದ್ದರು’ ಎಂದರು.

ಮಾಜಿ ಶಾಸಕ ಜಯರಾಂ ಎ.ಎಸ್. ಮಾತನಾಡಿ, ತಾಲ್ಲೂಕಿನ ದುಂಡಾ, ಕುಣಿಕೇನಹಳ್ಳಿ, ಕೋಡಿಹಳ್ಳಿ ಬಳಿ ನಿಕ್ಕಲ್, ಕೊಬಾಲ್ಟ್‌ ಗಣಿ ಬಗ್ಗೆ ಗ್ರಾಮಸ್ಥರು ಗೊಂದಲ ಮಾಡಿಕೊಳ್ಳುವುದು ಬೇಡ. ಚುನಾವಣೆ ನಂತರ ಸೋಮಣ್ಣ, ಶಾಸಕ ಎಂ.ಟಿ.ಕೃಷ್ಣಪ್ಪ ಸೇರಿ ಕೇಂದ್ರ ಸರ್ಕಾರದ ಬಳಿ ಚರ್ಚಿಸಿ ಗಣಿಗಾರಿಕೆ ನಿಲ್ಲಿಸಲು ಯತ್ನಿಸುತ್ತಾರೆ ಎಂದರು.

ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ, ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಜಯರಾಂ ಎ.ಎಸ್., ದಂಡಿನಶಿವರ ಹೊನ್ನಾದೇವಿ ಹಾಗೂ ಸಂಪಿಗೆ ಶ್ರೀನಿವಾಸ ದೇವಾಲಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಬಿಜೆಪಿ ಅಧ್ಯಕ್ಷ ಮುತ್ತಣ್ಣ, ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ಮುಖಂಡರಾದ ದೊಡ್ಡಾಘಟ್ಟ ಚಂದ್ರೇಶ್, ರಾಜೀವ್ ಕೃಷ್ಣಪ್ಪ, ವೆಂಕಟೇಶ್ ಕೃಷ್ಣಪ್ಪ, ದುಂಡಾ ರೇಣುಕಯ್ಯ, ಕೊಂಡಜ್ಜಿ ವಿಶ್ವನಾಥ್, ವಿಜಿಕುಮಾರ್, ಬಿ.ಎಸ್.ದೇವರಾಜು, ಮಾವಿನಹಳ್ಳಿ ವಿಜಯಕುಮಾರ್, ಮಾಚನೇಹಳಿ ಲೋಕೇಶ್, ರಾಮಣ್ಣ, ಕೋಳಘಟ್ಟ ಶಿವಾನಂದ್, ಕಾಂತರಾಜು, ಯೋಗಾನಂದ್ ಪಾಲ್ಗೊಂಡಿದ್ದರು.

ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಶಾಸಕ ಎಂ.ಟಿ.ಕೃಷ್ಣಪ್ಪ ಮಾಜಿ ಶಾಸಕ ಜಯರಾಮ್ ಎ.ಎಸ್. ದಂಡಿನಶಿವರ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಶ್ರೀನಿವಾಸ ದೇವಾಲಕ್ಕೆ ತೆರಳಿದಾಗ ಅಭಿಮಾನಿಗಳಿಂದ ಹೂಮಾಲೆ ಹಾಕಲಾಯಿತು.
ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಶಾಸಕ ಎಂ.ಟಿ.ಕೃಷ್ಣಪ್ಪ ಮಾಜಿ ಶಾಸಕ ಜಯರಾಮ್ ಎ.ಎಸ್. ದಂಡಿನಶಿವರ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಶ್ರೀನಿವಾಸ ದೇವಾಲಕ್ಕೆ ತೆರಳಿದಾಗ ಅಭಿಮಾನಿಗಳಿಂದ ಹೂಮಾಲೆ ಹಾಕಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT