ಕುಣಿಗಲ್: ರಾಜ್ಯ ಹೆದ್ದಾರಿ 33ರಲ್ಲಿನ ದೊಡ್ಡಮಾವತ್ತೂರು ಬಳಿಯ ಟೋಲ್ ಸಂಗ್ರಹ ಕೇಂದ್ರದಲ್ಲಿ ಮಂಗಳವಾರ ಮುಂಜಾನೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ, ಟೋಲ್ ಸಂಗ್ರಹ ಕೇಂದ್ರದ ಸಿಬ್ಬಂದಿ ಗಾಯಗೊಂಡಿದ್ದು, ಟೋಲ್ ಕೇಂದ್ರ ಧ್ವಂಸವಾಗಿದೆ.
ಮದ್ದೂರು ಕಡೆಯಿಂದ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಸಂಗ್ರಹ ಕೇಂದ್ರಕ್ಕೆ ಡಿಕ್ಕಿ ಹೊಡೆದಿದೆ. ನಂತರ ಡೀಸೆಲ್ ಟ್ಯಾಂಕರ್‌ಗೂ ಡಿಕ್ಕಿ ಹೊಡೆದಿದೆ. ಟೋಲ್ ಸಂಗ್ರಹಕ್ಕಾಗಿ ನಿರ್ಮಿಸಲಾಗಿದ್ದ ಶೆಡ್ ಮುರಿದು ಬಿದ್ದಿದೆ. ಕೇಂದ್ರದಲ್ಲಿದ್ದ ಸಿಬ್ಬಂದಿ ಕೇಶವ್ ಮತ್ತು ಲಾರಿ ಚಾಲಕ ಹೈದರ್ ಖಾನ್ ಗಾಯಗೊಂಡಿದ್ದಾರೆ.
ಟೋಲ್ ಸಂಗ್ರಹ ಕೇಂದ್ರದ ಕಂಪ್ಯೂಟರ್ ಸೇರಿದಂತೆ ಇತರ ಸಾಮಾಗ್ರಿಗಳು ನಾಶವಾಗಿವೆ. ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.