ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದಲೂರು ಕೆರೆ ವಿಚಾರದಲ್ಲಿ ಮಾತು ತಪ್ಪದ ಬಿಜೆಪಿ: ಬಿ.ವೈ.ವಿಜಯೇಂದ್ರ

Last Updated 28 ನವೆಂಬರ್ 2021, 6:42 IST
ಅಕ್ಷರ ಗಾತ್ರ

ಶಿರಾ: ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಮದಲೂರು ಕೆರೆ ಭರ್ತಿಯಾಗಿರುವುದು ಸಂತಸ ತಂದಿದೆ ಎಂದು ಬಿಜೆಪಿ‌ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ತಾಲ್ಲೂಕಿನ ಮದಲೂರು ಕೆರೆಗೆ ಶನಿವಾರ ಬಾಗಿನ‌ ಅರ್ಪಿಸಿ ಮಾತನಾಡಿದರು.

ಶಿರಾ ಉಪ ಚುನಾವಣೆ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮದಲೂರು ಕೆರೆ ತುಂಬಿಸುವುದಾಗಿ ಮಾತು ಕೊಟ್ಟಿದ್ದರು. ಅದೇ ರೀತಿ ಕ್ಷೇತ್ರದ ಜನರು ಯಡಿಯೂರಪ್ಪ ಅವರ ಮಾತು ನಂಬಿ ಚುನಾವಣೆಯಲ್ಲಿ ಡಾ.ಸಿ.ಎಂ.ರಾಜೇಶ್ ಗೌಡ ಅವರನ್ನು ಶಾಸಕರಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿಗೆ ಶಕ್ತಿ ನೀಡಿದ್ದಾರೆ. ಅಂದು ಕೊಟ್ಟ ಮಾತಿನಂತೆ ಕೆರೆ ತುಂಬಿಸಲಾಗಿದೆ ಎಂದರು.

ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ವಿಧಾನ ಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ, ನಿಗಮ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ, ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರ ಶ್ರಮದಿಂದಾಗಿ ಕೆರೆಗೆ ನೀರು ಹರಿದಿದೆ. 33 ವರ್ಷಗಳ ನಂತರ ಮದಲೂರು ಕೆರೆ ಕೋಡಿ ಹರಿದು ಇತಿಹಾಸ ನಿರ್ಮಾಣವಾಗಿದೆ ಎಂದರು.

ರೈತ ದಂಪತಿಯಿಂದ ಬಾಗಿನ: ಮದಲೂರು ಕೆರೆಗೆ ಬಿಜೆಪಿ‌ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಾಗಿನ ಅರ್ಪಸುತ್ತಾರೆ ಎಂದು ಹೇಳಲಾಗಿದ್ದರೂ ಅವರು ಬಾಗಿನ ಅರ್ಪಿಸದೆ ರೈತ ದಂಪತಿ ಮೂಲಕ ಬಾಗಿನ ಅರ್ಪಸಿದರು.

ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ರೇಷ್ಮೆ ಉದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ವಿಜಯರಾಜು, ಗ್ರಾಮಾಂತರ ಮೋರ್ಚಾ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ಚಂಗಾವರ ಮಾರಣ್ಣ, ಮುಡಿಮಡು ಮಂಜುನಾಥ್, ನರಸಿಂಹಮೂರ್ತಿ, ಎಪಿಎಂಸಿ ಉಪಾಧ್ಯಕ್ಷ ರಾಮರಾಜು, ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಈರಣ್ಣ, ರಂಗನಾಥ ಗೌಡ, ಸಿದ್ದಲಿಂಗಮೂರ್ತಿ, ಬರಗೂರು ಯುವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT