ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ತರಕಾರಿ, ಈರುಳ್ಳಿ, ಸೊಪ್ಪು ಮತ್ತಷ್ಟು ಅಗ್ಗ: ಕೋಳಿ ಮಾಂಸ ದುಬಾರಿ

Published 28 ಜನವರಿ 2024, 4:59 IST
Last Updated 28 ಜನವರಿ 2024, 4:59 IST
ಅಕ್ಷರ ಗಾತ್ರ

ತುಮಕೂರು: ಈ ವಾರ ತರಕಾರಿ, ಸೊಪ್ಪು ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಕೆಲವು ಹಣ್ಣುಗಳ ಬೆಲೆ ಏರಿಕೆ ಕಂಡಿದೆ. ಮಸಾಲೆ ಪದಾರ್ಥಗಳ ಧಾರಣೆ ಅಲ್ಪ ಇಳಿಕೆಯಾಗಿದ್ದರೆ, ಕೋಳಿ ಮಾಂಸ ಮತ್ತೆ ದುಬಾರಿಯಾಗಿದೆ.

ತರಕಾರಿ ಅಗ್ಗ: ಕಳೆದ ವಾರ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದ ತರಕಾರಿ ಬೆಲೆ ಈ ವಾರ ಮತ್ತಷ್ಟು ಇಳಿಕೆಯಾಗಿದೆ. ಆಲೂಗಡ್ಡೆ, ಗೆಡ್ಡೆಕೋಸು, ಹಾಗಲಕಾಯಿ ಸೇರಿದಂತೆ ಸಾಕಷ್ಟು ತರಕಾರಿ ದರ ಇಳಿಕೆಯತ್ತ ಮುಖ ಮಾಡಿದೆ. ಬೀಟ್ರೂಟ್ ಮಾತ್ರ ಕೆ.ಜಿಗೆ ₹5ರಿಂದ 10 ಹೆಚ್ಚಳವಾಗಿದ್ದರೆ, ಇತರೆ ತರಕಾರಿಗಳ ದರದಲ್ಲಿ ಹೆಚ್ಚಳವಾಗಿಲ್ಲ.

ಕೆಲವು ವಾರಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ಈರುಳ್ಳಿ ದರ ಈ ವಾರ ಇಳಿಕೆಯತ್ತ ಮುಖ ಮಾಡಿದೆ. ಕೆ.ಜಿ ₹25– 30ಕ್ಕೆ ಕುಸಿದಿದ್ದು, ಮುಂದಿನ ದಿನಗಳಲ್ಲಿ ಇದೇ ಬೆಲೆ ಮುಂದುವರಿಯಬಹುದು ಎಂದು ಹೇಳಲಾಗುತ್ತಿದೆ. ಟೊಮೆಟೊ ಬೆಲೆ ಚೇತರಿಸುವಂತೆ ಕಾಣುತ್ತಿಲ್ಲ.

ಸೊಪ್ಪು ಕುಸಿತ: ಮಾರುಕಟ್ಟೆಗೆ ಸೊಪ್ಪು ಆವಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಲೆ ತೀವ್ರವಾಗಿ ಕುಸಿದಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹20–30, ಸಬ್ಬಕ್ಕಿ ಕೆ.ಜಿ ₹20–30, ಮೆಂತ್ಯ ಸೊಪ್ಪು ಕೆ.ಜಿ ₹15–20, ಪಾಲಕ್ ಸೊಪ್ಪು (ಕಟ್ಟು) ₹20ಕ್ಕೆ ಇಳಿದಿದೆ.

ದಾಳಿಂಬೆ ಹೆಚ್ಚಳ: ಒಂದು ತಿಂಗಳಿಂದ ಇಳಿಕೆಯತ್ತ ಸಾಗಿದ್ದ ದಾಳಿಂಬೆ ಹಣ್ಣಿನ ದರ ಈಗ ಏರಿಕೆಯತ್ತ ಮುಖ ಮಾಡಿದ್ದು, ಕೆ.ಜಿ ₹180ಕ್ಕೆ ತಲುಪಿದೆ. ಕಿತ್ತಲೆ ಹಣ್ಣು ಒಮ್ಮೆಲೆ ದುಪ್ಪಟ್ಟಾಗಿದೆ. ಬೇಸಿಗೆ ಸಮೀಸುತ್ತಿದ್ದು, ಕಲ್ಲಂಗಡಿ ಹಣ್ಣು ಸಹ ದುಬಾರಿಯಾಗುತ್ತಿದೆ.

ಅಡುಗೆ ಎಣ್ಣೆ ಯಥಾಸ್ಥಿತಿ: ಅಡುಗೆ ಎಣ್ಣೆ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್‌ವಿನ್ನರ್ ಕೆ.ಜಿ ₹110, ಪಾಮಾಯಿಲ್ ಕೆ.ಜಿ ₹85, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಧಾನ್ಯ ಏರಿಕೆ: ಬೆಳೆಗಳ ಧಾರಣೆ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ, ಧಾನ್ಯ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಹುರುಳಿಕಾಳು ಮತ್ತೆ ದುಬಾರಿಯಾಗಿದ್ದು, ಹುರಿಗಡಲೆ, ಬಟಾಣಿ, ಕಡಲೆಬೀಜ, ಗೋಧಿ ದರ ಹೆಚ್ಚಳವಾಗಿದೆ. ಕಡಲೆಕಾಳು, ಹೆಸರುಕಾಳು ಬೆಲೆ ಅಲ್ಪ ಇಳಿಕೆಯಾಗಿದೆ.

ಬ್ಯಾಡಗಿ ಹೆಚ್ಚಳ: ಕಡಿಮೆಯಾಗಿದ್ದ ಬ್ಯಾಡಗಿ ಮೆಣಸಿನಕಾಯಿ ಧಾರಣೆ ಒಮ್ಮೆಲೆ ಕೆ.ಜಿಗೆ ₹50 ಜಿಗಿದಿದೆ. ಮೆಣಸು, ಜೀರಿಗೆ ದರ ಇಳಿಕೆಯತ್ತ ಸಾಗಿದ್ದರೆ, ಒಣಹಣ್ಣುಗಳಲ್ಲಿ ಬಾದಾಮಿ, ಗೋಡಂಬಿ ದುಬಾರಿಯಾಗಿದೆ.

ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹380–400, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹220–230, ಹುಣಸೆಹಣ್ಣು ₹130–180, ಕಾಳುಮೆಣಸು ಕೆ.ಜಿ ₹650–660, ಜೀರಿಗೆ ಕೆ.ಜಿ ₹400–420, ಸಾಸಿವೆ ಕೆ.ಜಿ ₹85–90, ಮೆಂತ್ಯ ಕೆ.ಜಿ ₹95–100, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹950–1,000, ಗುಣಮಟ್ಟದ ಗಸಗಸೆ ಕೆ.ಜಿ ₹1,350–1,400, ಬಾದಾಮಿ ಕೆ.ಜಿ ₹650–680, ಗೋಡಂಬಿ ಕೆ.ಜಿ ₹600–650, ದ್ರಾಕ್ಷಿ ಕೆ.ಜಿ ₹190–250ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ದುಬಾರಿ: ಕಳೆದ ಕೆಲ ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದ್ದ ಕೋಳಿ ಧಾರಣೆ ಈಗ ಒಮ್ಮೆಲೆ ಕೆ.ಜಿಗೆ ₹20 ಹೆಚ್ಚಳವಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹130, ರೆಡಿ ಚಿಕನ್ ಕೆ.ಜಿ ₹200, ಸ್ಕಿನ್‌ಲೆಸ್ ಕೆ.ಜಿ ₹220, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹100ಕ್ಕೆ ಏರಿಕೆಯಾಗಿದೆ.

ಮೀನು: ಬಂಗುಡೆ ಕೆ.ಜಿ ₹280, ಬೂತಾಯಿ ಕೆ.ಜಿ ₹180, ಬೊಳಿಂಜರ್ ಕೆ.ಜಿ ₹240, ಅಂಜಲ್ ಕೆ.ಜಿ ₹850, ಬಿಳಿ ಮಾಂಜಿ ಕೆ.ಜಿ ₹900, ಕಪ್ಪುಮಾಂಜಿ ಕೆ.ಜಿ ₹650, ಇಂಡಿಯನ್ ಸಾಲ್ಮನ್ ಕೆ.ಜಿ ₹840, ಸೀಗಡಿ ಕೆ.ಜಿ ₹500–740, ಏಡಿ ಕೆ.ಜಿ 600ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT