ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಅಂಧರ ಬಾಳಲ್ಲಿ ದಾಂಪತ್ಯದ ಬೆಳಕು

Last Updated 3 ನವೆಂಬರ್ 2019, 8:34 IST
ಅಕ್ಷರ ಗಾತ್ರ

ತುಮಕೂರು: ರಾಷ್ಟ್ರೀಯ ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆಯ 11ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮೂರು ಅಂಗವಿಕಲ ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟವು.

ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಎಸ್.ಜಗದೀಶ ಕನಮಡಿ ಅವರು ತಿಪಟೂರಿನ ವಿನುತಾ ಅವರ ಕೈ ಹಿಡಿದರು.

ತುಮಕೂರಿನ ಟಿ.ಎನ್.ಮಂಜುನಾಥ್ ಮತ್ತು ಚಿಕ್ಕಬಳ್ಳಾಪುರದ ಮಂಜುಳಾ ಅವರ ಜೋಡಿ ಗಾಲಿ ಕುರ್ಚಿಯನ್ನೇ ಹಸೆಮಣೆ ಆಗಿಸಿಕೊಂಡು ಮಾಂಗಲ್ಯ ಧಾರಣೆ ಸಂಪ್ರದಾಯದಲ್ಲಿ ಭಾಗಿಯಾಯಿತು.

ಕಾಲು ಊನಗೊಂಡಿದ್ದರೂ ಗುಬ್ಬಿ ತಾಲ್ಲೂಕಿನ ಎಂ.ಧನಂಜಯ್ ಅವರು ದಾವಣಗೆರೆಯ ಕೆ.ಜಿ.ಸಿಂಧು ಅವರೊಂದಿಗೆ ಬದುಕಿನ ಹೊಸ ಹೆಜ್ಜೆ ಇಟ್ಟರು. ಅದಕ್ಕೆ ಅಂಧರಾದ ಸಿಂಧು ಸಹ ಸಾಥ್ ನೀಡಿದರು.

ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಂಗವಿಕಲತೆಗೆ ಸವಾಲು ಹಾಕಿ ಇವರು ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದು ನಿಜವಾದ ಪವಾಡ. ಇವರಲ್ಲಿ ದೈಹಿಕ ನೂನ್ಯತೆ ಇರಬಹುದು, ಆದರೆ ಇಚ್ಛಾಶಕ್ತಿಯ ಕೊರತೆ ಇಲ್ಲ ಎಂದರು.

ಜೀವನದಲ್ಲಿ ಸಂಗಾತಿ ಇದ್ದರೆ ಬದುಕಲು ಆನೆ ಬಲ ಬರುತ್ತದೆ. ಗೃಹಸ್ಥಾಶ್ರಮ ಶ್ರೇಷ್ಠವೆಂದು ಪುರಾಣಗಳು ಹೇಳಿವೆ. ಅದು ಉಳಿದ ಆಶ್ರಮಗಳನ್ನು ಕಾಪಾಡುತ್ತದೆ‌ ಎಂದು ಹೇಳಿದರು.

ಅಂಗವಿಕಲರನ್ನು ನಾವು ವ್ಯಂಗ್ಯ ಮಾಡಬಾರದು ಎಂದು ಸಲಹೆ ನೀಡಿದರು.

ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಕ್ಷೇಮಾಭಿವೃದ್ಧಿ ಸಂಘದ ಕಾರ್ಯ ಶ್ಲಾಘನೀಯ. ಸಂಘದ ಕಟ್ಟಡಕ್ಕಾಗಿ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಸಿ.ಎ. ಸೈಟ್ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT