ಬೆಂಗಳೂರು: ಬೊಮ್ಮಸಂದ್ರದಲ್ಲಿ ಹೊಸ ಮೆಟ್ರೊ ರೈಲಿನ ಹೊಸ ಎತ್ತರಿಸಿದ ಮಾರ್ಗದಲ್ಲಿ ವಯಡಕ್ಟ್ ಅಳವಡಿಕೆ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಇದೇ 14ರಿಂದ ಬೆಳಿಗ್ಗೆ 5ರಿಂದ 17ರ ರಾತ್ರಿ 10ರವರೆಗೆ ಆರ್.ವಿ. ರಸ್ತೆ ಹಾಗೂ ಯಲಚೇನಹಳ್ಳಿ ನಿಲ್ದಾಣಗಳ ನಡುವೆ ರೈಲು ಸಂಚಾರ ಸ್ಥಗಿತಗೊಳ್ಳಲಿದೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ತಿಳಿಸಿದೆ.
ಹಸಿರು ಮಾರ್ಗದ ಆರ್.ವಿ ರಸ್ತೆ ನಿಲ್ದಾಣದ ಮತ್ತು ನಿರ್ಮಾಣ ಹಂತದಲ್ಲಿರುವ ಎಲೆಕ್ಟ್ರಾನಿಕ್ ಸಿಟಿ ಮೆಟ್ರೊ ಕಾರಿಡಾರ್ ನಿರ್ಮಾಣದ ಭಾಗವಾಗಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದೇ 18ರಂದು ಬೆಳಿಗ್ಗೆ 5ರಿಂದ ನಾಗಸಂದ್ರ ಮತ್ತು ಯಲಚೇನಹಳ್ಳಿ ಮೆಟ್ರೊ ನಿಲ್ದಾಣಗಳ ನಡುವೆ ಎಂದಿನಂತೆ ರೈಲು ಸಂಚಾರ ಪ್ರಾರಂಭವಾಗಲಿದೆ.
ರೈಲು ಸಂಚಾರ ಸ್ಥಗಿತಗೊಳ್ಳುವ ಈ ನಾಲ್ಕು ದಿನ (ನ.14ರಿಂದ 17) ಆರ್.ವಿ. ರಸ್ತೆ ಮತ್ತು ಯಲಚೇನಹಳ್ಳಿ ಮೆಟ್ರೊ ನಿಲ್ದಾಣಗಳ ನಡುವೆ ಬಿಎಂಟಿಸಿ ಬಸ್ ಸೇವೆ ಕಲ್ಪಿಸಲಾಗಿದೆ. ಮೊದಲ ಮೂರು ದಿನ ಆರ್.ವಿ. ರಸ್ತೆ ನಿಲ್ದಾಣದಿಂದ ಬೆಳಿಗ್ಗೆ 5.30ರಿಂದ ರಾತ್ರಿ 11.45ರವರೆಗೆ ಮತ್ತು ಯಲಚೇನಹಳ್ಳಿ ನಿಲ್ದಾಣದಿಂದ ಬೆಳಿಗ್ಗೆ 4.45ರಿಂದ ರಾತ್ರಿ 10.30ರವರೆಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಕೊನೆಯ ದಿನ ಅಂದರೆ, ನ.17ರಂದು ಯಲಚೇನಹಳ್ಳಿಯಿಂದ ಬೆಳಿಗ್ಗೆ 6.30ಕ್ಕೆ ಮತ್ತು ಆರ್.ವಿ. ರಸ್ತೆಯಿಂದ ಬೆಳಿಗ್ಗೆ 7.15ಕ್ಕೆ ಬಸ್ ಸೇವೆ ಪ್ರಾರಂಭವಾಗಲಿದೆ. ಈ ಬಸ್‌ಗಳು ಬನಶಂಕರಿ ಮತ್ತು ಜೆ.ಪಿ. ನಗರದ ಮೆಟ್ರೊ ನಿಲ್ದಾಣದಲ್ಲಿ ನಿಲುಗಡೆಯಾಗಲಿವೆ ಎಂದು ನಿಗಮ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.