ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರು | ಬಹು ಉಪಯೋಗಿ ಕಲ್ಪವೃಕ್ಷ ತೆಂಗಿಗೆ ಬೇಕಿದೆ ಮೌಲ್ಯವರ್ಧನೆ

Published 2 ಸೆಪ್ಟೆಂಬರ್ 2023, 7:03 IST
Last Updated 2 ಸೆಪ್ಟೆಂಬರ್ 2023, 7:03 IST
ಅಕ್ಷರ ಗಾತ್ರ

ಎಚ್.ಬಿ.ಸುಪ್ರತೀಕ್

ತಿಪಟೂರು: ವಿಶ್ವ ಮಟ್ಟದಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕನ್ನು ಕಲ್ಪತರು ನಾಡೆಂದು ಪ್ರಖ್ಯಾತಿ ಪಡೆದಿದ್ದು, ತೆಂಗು ಬೆಳೆದು ಉಂಡೆ ಕೊಬ್ಬರಿ ಮಾಡುವ ಸ್ಥಳವಾಗಿದೆ. ಒಣ ಹಣ್ಣಿನಂತೆ ತಿನ್ನಲು ಅತಿ ರುಚಿಕರವಾದ ಗುಣಮಟ್ಟವುಳ್ಳ ಆಹಾರ ಪದಾರ್ಥ ಇದಾಗಿದ್ದು ಏಷ್ಯಾ ಖಂಡದಲ್ಲಿ ಅತೀ ಹೆಚ್ಚು ಬೆಳೆಯುತ್ತಾರೆ.

ಇತ್ತೀಚಿನ ದಿನದಲ್ಲಿ ಉಂಡೆ ಕೊಬ್ಬರಿ ಹಾಗೂ ತೆಂಗಿನಕಾಯಿಗೆ ಬೆಲೆಯಿಲ್ಲದೆ ರೈತರು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಾ ಬೆಳೆಗಾರನ ಜೀವನವು ಶೋಚನೀಯವಾಗಿದೆ. ಬೆಳೆಗಾರನ ಸಂಕಷ್ಟಕ್ಕೆ ಸ್ಪಂದಿಸುವ ಯೋಚನೆಯಿಂದ ರಾಜ್ಯಮಟ್ಟದಲ್ಲಿ ತೋಟಗಾರಿಕೆ ಇಲಾಖೆ, ರಾಷ್ಟ್ರಮಟ್ಟದಲ್ಲಿ ತೆಂಗು ಅಭಿವೃದ್ದಿ ಮಂಡಳಿಯು ಸ್ಥಾಪನೆಯಾಗಿದ್ದು ಏಷ್ಯಾ ಖಂಡದಲ್ಲಿ ತೆಂಗು ಬೆಳೆಯುವ ಭಾರತವು ಸೇರಿದಂತೆ ಅನೇಕ ದೇಶಗಳು ಕೂಡಿ ಏಷ್ಯನ್ ಪೆಸಿಫಿಕ್ ತೆಂಗಿನಕಾಯಿ ಸಮುದಾಯದ ಒಕ್ಕೂಟ ರಚಿಸಿದ್ದು (ಎಪಿಸಿಸಿ) ಇದರ ನೆನಪಿಗಾಗಿ 2009 ರಿಂದ ಸೆಪ್ಟೆಂಬರ್ 2 ರಂದು ವಿಶ್ವ ತೆಂಗು ದಿನವನ್ನು ಆಚರಿಸಲಾಗುತ್ತಿದೆ. ಇದರ ಪ್ರಧಾನ ಕಚೇರಿ ಇಂಡೋನೇμÁ್ಯದ ಜಕಾರ್ತಾನಲ್ಲಿದೆ. ತೆಂಗಿನಕಾಯಿ ಬೆಳೆಯುವ ದೇಶಗಳು ಎಪಿಸಿಸಿಯ ಸದಸ್ಯರಾಗಿದ್ದು ಪ್ರತಿ ವರ್ಷವೂ ಒಂದೊಂದು ಧ್ಯೇಯೋದ್ದೇಶದ ಜೊತೆಗೆ ಕಾರ್ಯನಿರ್ವಹಿಸುತ್ತಾ ಬರುತ್ತಿದ್ದು, 2023ರ ವಿಶ್ವ ತೆಂಗು ದಿನಾಚರಣೆ ಅಂಗವಾಗಿ “ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ತೆಂಗಿನಕಾಯಿ ಕ್ಷೇತ್ರವನ್ನು ಉಳಿಸಿಕೊಳ್ಳುವುದು" ಎಂಬ ಘೋಷ ವಾಕ್ಯದ ಮೂಲಕ ಆಚರಿಸಲಾಗುತ್ತಿದೆ.

ತೆಂಗಿನಕಾಯಿಯನ್ನು ಪ್ರಪಂಚದಾದ್ಯಂತ ಉಷ್ಣವಲಯದ ಮತ್ತು ಉಪೆÇೀಷ್ಣವಲಯದ ಪ್ರದೇಶಗಳಲ್ಲಿ ವ್ಯಾಪಕವಾಗಿ ಮರಳು, ಮಣ್ಣು ಮತ್ತು ಸಾಕಷ್ಟು ಸೂರ್ಯನ ಬೆಳಕನ್ನು ಹೊಂದಿರುವ ಕರಾವಳಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ತೆಂಗನ್ನು ಸಾಂಸ್ಕøತಿಕ, ಸಂಸ್ಕøತಿಯ ಬಿಂಬವಾಗಿ ಬಳಸಲಾಗುತ್ತದೆ. ಪ್ರಮುಖವಾಗಿ ಪಾಕಶಾಲೆಯಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದ್ದು ತೆಂಗಿನಕಾಯಿ ಹಾಗೂ ಕೊಬ್ಬರಿ ಆಧಾರಿತ ಉತ್ಪನ್ನಗಳನ್ನು ಅಡುಗೆ, ತ್ವಚೆ ಮತ್ತು ಕೂದಲಿನ ಆರೈಕೆಯಲ್ಲಿ ಬಳಸುತ್ತಾ, ರಾಸಾಯನಿಕಗಳಲ್ಲಿ ಬಳಕೆ, ಆರೋಗ್ಯ, ಸಾಂಪ್ರದಾಯಿಕ ಔಷಧ ಮತ್ತು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ತೆಂಗಿನ ಹಾಗೂ ಕೊಬ್ಬರಿ ಉತ್ಪನ್ನದ ಆಹಾರದಿಂದ ವಿಟಮಿನ್‍ಗಳಾದ ಸಿ,ಇ, ಕೆಲವು ಬಿ ಜೀವಸತ್ವಗಳ ಮತ್ತು ಖನಿಜಾಂಶಗಳಾದ ಪೆÇಟ್ಯಾಷಿಯಂ, ಮೆಗ್ನೀಷಿಯಮ್ ಮತ್ತು ತಾಮ್ರವನ್ನು ಒಳಗೊಂಡಂತೆ ಉತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ.

ಜನಪ್ರತಿನಿಧಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರಿ ತೆಂಗು ಉತ್ಪನ್ನಗಳಿಗೆ ಹಾಗೂ ಕೊಬ್ಬರಿಗೆ ವೈಜ್ಞಾನಿಕ, ಲಾಭದಾಯಕ ಬೆಲೆಯನ್ನು ಸ್ಥಿರವಾಗಿ, ನಿಶ್ಚಿತವಾಗಿ ಉಳಿಯುವಂತೆ ಮಾಡಬೇಕಿದೆ. ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರ ಹಿತವನ್ನು ಕಾಪಾಡುತ್ತಾ ಸಮಯಕ್ಕೆ ಸರಿಯಾಗಿ ಇಲಾಖಾ ಮಾಹಿತಿಗಳು ರೈತರಿಗೆ ತಲುಪ ವ್ಯವಸ್ಥೆಗಳು ಆಗಬೇಕು
ಶಂಕರಮೂರ್ತಿ ರಂಗಾಪುರ, ಅಧ್ಯಕ್ಷರು ರಂಗನಾಥ ತೆಂಗು ಬೆಳೆಗಾರರ ಸಂಘ, ರಂಗಾಪುರ

ತೆಂಗಿನಕಾಯಿಯನ್ನು ತಿನ್ನುವುದು ಮತ್ತು ಅದರ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಅಂಶವಿರುವದರಿಂದ ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯಕವಾಗಿದ್ದು, ಕೂದಲು ಬೆಳವಣಿಗೆಗೆ, ಚರ್ಮ ಕಾಂತಿಗೆ, ಗಾಯವನ್ನು ಗುಣಪಡಿಸಲು ತೆಂಗಿನಕಾಯಿ ಎಣ್ಣೆಯಿಂದ ಸಾಧ್ಯವಾಗಿದೆ. μÉೀವಿಂಗ್ ಕ್ರೀಮ್ ತಯಾರಿಕೆಯಲ್ಲಿ, ದೀಪಾರಾಧನೆಯಲ್ಲಿ ಉಪಯೋಗಿಸುತ್ತಾರೆ.

ತೆಂಗು ಬಹುಉಪಯೋಗಿ ಬೆಳೆಯಾಗಿದ್ದು, ಸರಾಸರಿ 80 ರಿಂದ 100 ವರ್ಷಗಳ ಬದುಕಬಲ್ಲ ಸಸ್ಯವಾಗಿದ್ದು, ಮರದಕಾಂಡ ಒಣಗಿಸಿದ ನಂತರ ಮನೆ ನಿರ್ಮಾಣದಲ್ಲಿ ಮನೆಯ ಕಂಬ, ತೂಲೆ, ತೀರು, ಮನೆಯ ಛಾವಣಿ ನಿರ್ಮಾಣಕ್ಕೆ ನಂತರ ಸೌದೆಯಾಗಿ ಉಪಯೋಗಿಸಬಹುದು. ತೆಂಗಿನ ನಾರಿನಿಂದ ಹಗ್ಗಗಳು, ಚಾಪೆಗಳು, ತೆಂಗಿನಕಾಯಿಯ ಸಿಪ್ಪೆ ಹಾಗೂ ಎಲೆಗಳಿಂದ ಛಾವಣಿಗಳು ಮತ್ತು ಗುಡಿಸಲುಗಳನ್ನು ನಿರ್ಮಿಸಬಹುದು. ಹೆಣ್ಣು ಮಕ್ಕಳು ಮೈ ನೆರೆದಾಗ, ಅವರಿಗೆ ಒಸಗೆ ಮಾಡುವ ಸಂದರ್ಭದಲ್ಲಿ ಮಟ್ಟೆ ತೆಂಗಿನಗರಿಯಿಂದ ಹೆಣೆದು ಚಪ್ಪರ ಮಂಟಪ ಮಾಡುವರು. ಹಸಿ ತೆಂಗಿನ ಎಲೆ/ಗರಿಗಳಿಂದ ಹಬ್ಬದ ಸಮಯದಲ್ಲಿ, ಕಲ್ಯಾಣ ಸಮಯದಲ್ಲಿ, ಮತ್ತು ಇತರ ಶುಭ ಸಂದರ್ಭದಲ್ಲಿ ಮಂಟಪಗಳನ್ನು ಅಲಂಕರಿಸಲು, ಚಾಪೆ, ಬುಟ್ಟಿ ಮುಂತಾದ ಅಲಂಕಾರಿಕ ಸಾಮಗ್ರಿಗಳನ್ನು ಹೆಣೆಯುತ್ತಾರೆ. ಹಸಿ ಎಲೆಗಳಿಂದ ಊದುವಪೀಪಿ, ಹಾವು, ಜಡೆಸರಗಳನ್ನು ಕಸ ಗುಡಿಸಲು ಪೂರಕೆ, ತಯಾರಿಸುವರು. ಶವ ಸಂಸ್ಕಾರದ ಸಮಯದಲ್ಲೂ ತೆಂಗಿನ ಗರಿ/ಮಟ್ಟೆಗಳನ್ನು ಬಳಸುತ್ತಾರೆ. ದೇವಾಲಯದಲ್ಲಿ, ಮನೆಯಲ್ಲಿ ಪೂಜೆ ಮಾಡುವಾಗ ಶುಭಕಾರ್ಯದಲ್ಲಿ, ಮದುವೆ ಸಂದರ್ಭದಲ್ಲಿ ತೆಂಗಿನಕಾಯಿ ಇರಲೇಬೇಕು.

ಇಂತಹ ತೆಂಗನ್ನು ಬೆಳೆಗಾರ ತೆಂಗಿನಕಾಯಿ ಪಡೆಯಲು ಕಾಯಿ ಮೊಳಕೆ ಬರಲು ಒಂದು ವರ್ಷ, ಗೆಪ್ಪೆ ಸಸಿ ಪ್ರಾರಂಭವಾಗಲು ಎರಡು ವರ್ಷ, ನಂತರ ಸಸಿಯು ಮರವಾಗಿ, ನಂತರ ಹೊಂಬಾಳೆ (ತೆಂಗಿನ ಹೂವು) ಮೂಡಿ ಎಳನೀರಾಗಿ ಫಲಬರಲು ನಾಲ್ಕು ವರುಷಗಳಾಗಿ ನಂತರ ಸುಮಾರು 6-7 ವರ್ಷಗಳ ಪೋಷಣೆ ಮಾಡಿ ಬೆಳೆಯಬೇಕಾಗಿದೆ. ಒಂದು ಮರವು ವರ್ಷದಲ್ಲಿ ಸರಾಸರಿ 65 ರಿಂದ 80 ಕಾಯಿಯನ್ನು ನೀಡುತ್ತದೆ. ನಂತರ ತೋಟದಿಂದ ಕಿತ್ತ ಕಾಯಿಯನ್ನು ಅಟ್ಟದಲ್ಲಿ ಸುಮಾರು ಒಂದು ವರ್ಷಗಳ ಶೇಖರಿಸಿದಾಗ ತೆಂಗು ಕೊಬ್ಬರಿಯಾಗಿ ಬರುತ್ತದೆ. ಇಂತಹ ಸುದೀರ್ಘ ಬೆಳೆಗೆ ಇಂದು ಬೆಲೆಯಿಲ್ಲದೆ, ಇತ್ತ ಸರಿಯಾದ ಪ್ರಮಾಣದಲ್ಲಿ ಮಳೆಯಿಲ್ಲದೆ ತೆಂಗು ಬೆಳೆಗಾರ ಸ್ಥಿತಿಯು ಶೋಚನೀಯವಾಗಿದ್ದು, ತೆಂಗಿನ ಹೆಸರಿನಲ್ಲಿ ನಡೆಯುವ ಗೋಷ್ಠಿಗಳು, ಸಮ್ಮೇಳನಗಳು, ವಿಚಾರ ಸಂಕೀರರ್ಣಗಳು ರೈತನ ಬದುಕಿಗೆ ಆಸರೆಯಾದರೆ ಸಮಾರಂಭಗಳಿಗೆ ಉತ್ತಮ ಬೆಲೆ ಸಿಗುತ್ತದೆ. ಸರ್ಕಾರಗಳು, ಸಂಶೋಧಕರು, ವಿಜ್ಞಾನಿಗಳು ಅಧಿಕಾರಿಗಳು ತೆಂಗು ಬೆಳೆಗೆ ಮೌಲ್ಯವರ್ಧನೆ ಮಾಡುವ ಕಾರ್ಯಗಾರಗಳ ಬಗ್ಗೆ, ಕೀಟ ನಿಯಂತ್ರಣಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕಾಗಿದ ಅಗತ್ಯವಿದೆ.

ಪೋಟೋ : ತೆಂಗಿನ ಕಾಯಿಯ ಚಿತ್ರ.
ಪೋಟೋ : ತೆಂಗಿನ ಕಾಯಿಯ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT