ತಿಪಟೂರು: ರಾಷ್ಟ್ರೀಯ ಹೆದ್ದಾರಿ 206ರ ವಿಸ್ತರಣೆ ಹಾಗೂ ಬೈಪಾಸ್ ರಸ್ತೆ ನಿರ್ಮಾಣ ಯೋಜನೆಯಿಂದಾಗಿ ತಲೆತಲಾಂತರದಿಂದ ಇದ್ದ ರಸ್ತೆಗಳು ಕಣ್ಮರೆಯಾಗಿ ಸಂಬಂಧ ಕಡಿದುಕೊಳ್ಳುವ ಆತಂಕ ರೈತರಿಗೆ ಎದುರಾಗಿದೆ.

ತುಮಕೂರಿನಿಂದ ಶಿವಮೊಗ್ಗದವರೆಗೆ ಹೆದ್ದಾರಿ ವಿಸ್ತರಿಸಿ, ಚಥುಷ್ಪತ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವ ಸಲುವಾಗಿ ನೂತನ ತಂತ್ರ
ಜ್ಞಾನ ಅಳವಡಿಸಿಕೊಂಡು ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದಾರೆ. ಈ ರಸ್ತೆಗಳು ಜನರ ನಡುವೆ ಸಂಪರ್ಕ ಕಲ್ಪಿಸುವ ಬದಲು ಊರು, ಕೇರಿ, ಜಮೀನುಗಳನ್ನು ಬೇಧಿಸಿ ಸಂಪರ್ಕ ಕಡಿತಗೊಳ್ಳುವ ಭೀತಿಯಲ್ಲಿ ಜನರಿದ್ದಾರೆ.

ರಸ್ತೆ ಅಭಿವೃದ್ಧಿ ಯೋಜನೆ ರೂಪಿಸುವಾಗ ಗ್ರಾಮಾಂತರ ಪ್ರದೇಶಗಳಲ್ಲಿನ ಸ್ಥಳೀಯರ ಅನುಕೂಲಕ್ಕೆ ಅಗತ್ಯವಿರುವ ರಸ್ತೆ, ಮೇಲ್ಸೇತುವೆ, ಕೆಳಸೇತುವೆಗಳನ್ನು ನಿರ್ಮಿಸಿ ಸಾರ್ವಜನಿಕರ ಸೇವೆಗೆ ಮುಂದಾಗಬೇಕಿತ್ತು. ಆದರೆ ಯೋಜನೆ ಅವೈಜ್ಞಾನಿಕವಾಗಿದ್ದು, ಅನೇಕ ಗ್ರಾಮಗಳಿಗೆ ಇದೀಗ ಸಂಪರ್ಕ ಕಳೆದುಕೊಳ್ಳುತ್ತವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.

ರಸ್ತೆ ನಿರ್ಮಾಣ ಹಾಗೂ ಅಭಿವೃದ್ಧಿ ವೇಳೆ ಕೆಲ ಮಾನದಂಡಗಳನ್ನು ಅನುಸರಿಸುವ ಅಗತ್ಯವಿದ್ದು, ಅಗತ್ಯವಿರುವ ಕಡೆಗಳಲ್ಲಿ ಮೇಲ್ಸೇತುವೆ, ಕೆಳಸೇತುವೆ, ಸೇವಾ ಪಥಗಳನ್ನು ನಿರ್ಮಿಸುವುದು ಅಗತ್ಯ. ಇಂತಹ ಯೊಜನೆ ರೂಪಿಸುವ ಮುಂಚಿತವಾಗಿಯೇ ಸ್ಥಳೀಯರಿಗೆ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಆದರೆ ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸದೆ ಕಾಮಗಾರಿಗೆ ಮುಂದಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ತಾಲ್ಲೂಕಿನ ಜಯಂತಿಗ್ರಾಮ, ತಿಮ್ಲಾಪುರ, ಲಕ್ಮಗೊಂಡನಹಳ್ಳಿ, ಮಾದಿಹಳ್ಳಿ ಗ್ರಾಮದ ಜನರಿಗೆ ಸದ್ಯದ ಯೋಜನೆಯಲ್ಲಿ ಯಾವುದೇ ಸಂಪರ್ಕವನ್ನು ಕಲ್ಪಿಸಿಲ್ಲ. ಬೈಪಾಸ್ ನಿರ್ಮಾಣದ ಯೋಜನೆಯಿಂದಾಗಿ ಕೆಂಚರಾಯನಗರ, ಬಿಳಿಕಲ್ಲು ನಗರ, ಗೆದ್ಲೆಹಳ್ಳಿ ಹಾಗೂ ಹಳೇಪಾಳ್ಯಕ್ಕೆ ಸಂಪರ್ಕ ಕಡಿತಗೊಳ್ಳಲಿದೆ.

ರಾಮಶೆಟ್ಟಿಹಳ್ಳಿಯಿಂದ ತಿಪಟೂರಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಕಡಿತಗೊಳ್ಳಲಿದ್ದು, ತಿಪಟೂರಿಗೆ ತಲುಪುವ ಹತ್ತಾರು ಹಳ್ಳಿಗಳ ಸಂಪರ್ಕ ಕಡಿತಗೊಳ್ಳಲಿದೆ. ಮಾದಿಹಳ್ಳಿ ಬಳಿ ತಲೆತಲಾಂತರದಿಂದ ಇದ್ದ 3 ಕರಾಬು ರಸ್ತೆಗಳು ಸಂಪೂರ್ಣವಾಗಿ ಮುಚ್ಚಿಹೋಗಲಿದ್ದು ಗ್ರಾಮಕ್ಕೂ ಕೃಷಿ ಜಮೀನಿಗೂ ಮಧ್ಯೆ ಸಂಪರ್ಕವೇ ಕಡಿದು ಹೋಗುವಂತಾಗಿದೆ.

ರಸ್ತೆ ವಿಸ್ತರಣೆ ಯೋಜನೆ ಅವೈಜ್ಞಾನಿಕವಾಗಿದ್ದು, ಯೋಜನೆಯ ಎಂಜಿನಿಯರ್, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯ.

ಈಗಾಗಲೇ ರೈತರು, ಗ್ರಾಮಸ್ಥರು ಯೋಜನೆಯ ವಿರುದ್ಧ ಅನೇಕ ಹೋರಾಟ, ಪ್ರತಿಭಟನೆ ನಡೆಯುತ್ತಲೇ ಇದ್ದಾರೆ. ಯೋಜನೆಯಲ್ಲಿ ಬದಲಾವಣೆಯಾಗದಿದ್ದರೆ, ನ್ಯಾಯಾಲಯದ ಮೊರೆ ಹೋಗುವ ಮುನ್ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.