ಪಾವಗಡ: ತಾಲ್ಲೂಕಿನ ರೈತರು, ಸಾಮಾನ್ಯ ಜನರಿಗೆ ಪ್ರಯೋಜನಕಾರಿಯಾಗುವ ಯೋಜನೆಗಳ ಕುರಿತು ವಿವರ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿ ಸೇರಿದಂತೆ ಇಲಾಖೆಗಳ ಗಮನಕ್ಕೆ ತರಬೇಕು ಎಂದು ರಾಜ್ಯ ಯೋಜನಾ ಸಮಿತಿ ಸದಸ್ಯ ಮಂಜುನಾಥ್ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ತಾಲ್ಲೂಕು ಅಭಿವೃದ್ಧಿ ವೇದಿಕೆ, ತಾಲ್ಲೂಕು ಅಭಿವೃದ್ಧಿ ಚಿಂತನಾ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಬಜೆಟ್ನಲ್ಲಿ ಎಲ್ಲ ಪ್ರದೇಶದ ಸಮಸ್ಯೆಗಳನ್ನು ಒಳಗೊಳ್ಳಲು ಜಿಲ್ಲಾವ್ಯಾಪ್ತಿ ಅಧಿಕಾರಿಗಳಿಗೆ ಎರಡು–ಮೂರು ತಿಂಗಳು ಹಿಂದೆ ಪತ್ರ ಬರೆದರೂ, ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಕುರಿ ಸಾಕಾಣಿಕೆದಾರರಿಗೆ ಶೆಡ್ ನಿರ್ಮಾಣಕ್ಕೆ ಅನುದಾನ, ಬ್ಯಾಂಕ್ ಸಾಲ, ಸಬ್ಸಿಡಿ ನೀಡುವ ಪ್ರಸ್ತುತ ಸರ್ಕಾರದ ಯೋಜನೆಗೆ ಪರ್ಯಾಯವಾಗಿ ಕುರಿ ಸಾಕಾಣಿಕೆದಾರರನ್ನು ನೇರವಾಗಿ ಗುರುತಿಸಿ ಶೆಡ್ಗೆ ಬದಲಾಗಿ ನೇರ ಅನುದಾನ ನೀಡಬೇಕು. ಕೃಷಿಗೆ ಮಾತ್ರವಲ್ಲ, ಕುರಿ–ಮೇಕೆಗಳಿಗೂ ಬೆಳೆ ನಷ್ಟ ಪರಿಹಾರ ಸಿಗುವ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕು ಎಂದರು.

ಸಂಶೋಧನಾ ವಿಜ್ಞಾನಿ ಎಸ್.ಆರ್. ಭಾರ್ಗವಿ, ಪಾವಗಡ ಪ್ರದೇಶ ದೇಶಕ್ಕೆ ಹೆಸರಾಗಿರುವ ಸೋಲಾರ್ ಪಾರ್ಕ್ ನಿರ್ಮಾಣದ ಹಿಂದೆ ನೀರಿನ ಕೊರತೆ ಒಂದು ಪ್ರಮುಖ ಕಾರಣ. ಇಲ್ಲಿ ಶಾಶ್ವತ ನೀರು ಇದ್ದರೆ ಯಾವುದೇ ರೈತನು ಸೋಲಾರ್ಗೆ ಜಮೀನು ಕೊಡುವ ಸ್ಥಿತಿ ಇರಲಿಲ್ಲ. 30 ವರ್ಷದ ಕರಾರಿನ ನಂತರ ಆ ಭೂಮಿಯನ್ನು ಪುನಃ ಕೃಷಿಗೆ ಬಳಸಲಾಗದ ಸ್ಥಿತಿ ಇದೆ. ಭವಿಷ್ಯದಲ್ಲಿ ಮಕ್ಕಳಿಗೆ–ಮರಿಮಕ್ಕಳಿಗೂ ಜಮೀನು ಉಳಿಯುವುದಿಲ್ಲ ಎಂದರು.

ವಕೀಲ ಎಂ. ನಾಗೇಂದ್ರಪ್ಪ, ಜನ ವಿಜ್ಞಾನ ಚಳವಳಿಯ ಸಿ.ಎತಿರಾಜು, ರೈತ ಸಂಘದ ಅಧ್ಯಕ್ಷ ಪೂಜಾರಪ್ಪ, ಆರ್.ಟಿ. ಖಾನ್ ಹಾಜರಿದ್ದರು.