ಮಧುಗಿರಿ: ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿ ಹನುಮಂತಪುರ ಗ್ರಾಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ 20 ನವಿಲುಗಳು ಸಾವನ್ನಪ್ಪಿವೆ.

ಹನುಮಂತಪುರದ ಗೋಮಾಳ ಜಾಗದಲ್ಲಿ 3 ಗಂಡು ಹಾಗೂ 17 ಹೆಣ್ಣು ನವಿಲುಗಳು ಮೃತಪಟ್ಟಿವೆ.

ಈ ಭಾಗದ ಅಕ್ಕ -ಪಕ್ಕ ಮುಸುಕಿನ ಜೋಳದ ಬೆಳೆ ಹಾಕಿದ್ದಾರೆ. ಬೆಳೆ ನಾಶ ಮಾಡುತ್ತವೆ ಎಂದು ಮುಸಕಿನ ಜೋಳಕ್ಕೆ ವಿಷ ಹಾಕಿದ್ದಾರೆ. ಇದರಿಂದಲೇ ನವಿಲುಗಳು ಮೃತಪಟ್ಟಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

'ಮೃತಪಟ್ಟ ನವಿಲುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಮೇಲೆ ಸಾವಿಗೆ ಕಾರಣ ಗೊತ್ತಾಗಲಿದೆ' ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಅರಣ್ಯ ಇಲಾಖೆಯ ಎಸಿಎಫ್ ಮಲ್ಲಿಕಾರ್ಜುನ್, ವಲಯ ಅರಣ್ಯಾಧಿಕಾರಿ ಸುರೇಶ್, ಉಪ ಅರಣ್ಯ ವಲಯಾಧಿಕಾರಿ ಮುತ್ತುರಾಜು, ಮಹೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
.ಮಲೆ ಮಹದೇಶ್ವರ ಬೆಟ್ಟದಲ್ಲಿ ತಾಯಿ ಹುಲಿ, 4 ಮರಿ ಹುಲಿಗಳ ಸಾವು! ವಿಷಪ್ರಾಶನದ ಶಂಕೆ.ಸೋಮವಾರಪೇಟೆ | ತೋಟಕ್ಕೆ ಬಂದ ಜಾನುವಾರುಗಳಿಗೆ ವಿಷಪ್ರಾಶನ ಶಂಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.