ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ: ಅಂಗಡಿ ಮಳಿಗೆ ₹6.30 ಕೋಟಿ ಬಾಡಿಗೆ ವಸೂಲಿ

ಶಿರಾ ನಗರಸಭೆ ಸಾಮಾನ್ಯಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಸೂಚನೆ
Published 13 ಸೆಪ್ಟೆಂಬರ್ 2023, 7:02 IST
Last Updated 13 ಸೆಪ್ಟೆಂಬರ್ 2023, 7:02 IST
ಅಕ್ಷರ ಗಾತ್ರ

ಶಿರಾ: ಅಂಗಡಿ ಮಳಿಗೆಗಳಿಂದ ನಗರಸಭೆಗೆ ₹6.30ಕೋಟಿ ಬಾಡಿಗೆ ಹಣ ಬಾಕಿ ಬರಬೇಕಿದೆ. ತಕ್ಷಣ ಬಾಡಿಗೆ ವಸೂಲಿ ಮಾಡುವಂತೆ ಶಾಸಕ ಟಿ.ಬಿ.ಜಯಚಂದ್ರ ಸೂಚಿಸಿದರು.

ನಗರಸಭೆ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ನಗರಸಭೆ ಸದಸ್ಯ ಅಂಜಿನಪ್ಪ ಮಾತನಾಡಿ, ಅಂಗಡಿ ಮಳಿಗೆಗಳ ಅವಧಿ ಮುಕ್ತಾಯವಾಗಿದೆ. ಅವರಿಂದ ₹6.30 ಕೋಟಿ ಬಾಡಿಗೆ ಹಣ ಬಾಕಿ ಇದೆ. ಈಗ ತೆರವು ಮಾಡಿಸಿದರೆ ಬಾಕಿ ಹಣ ಬರುವುದಿಲ್ಲ. ನವೀಕರಣ ಮಾಡಿ ಬಾಡಿಗೆ ಹೆಚ್ಚು ಮಾಡುವಂತೆ ಹೇಳಿದಾಗ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸದಸ್ಯ ಆರ್.ರಾಮು, ಮತ್ತೆ ನವೀಕರಣಗೊಳಿಸಿ ಇರುವವರಿಗೆ ನೀಡುವ ಬದಲು ಹೊಸದಾಗಿ ಹರಾಜು ಮಾಡಿದರೆ ನಗರಸಭೆ ಹೆಚ್ಚಿನ ಸಂಪನ್ಮೂಲ ಕ್ರೂಡೀಕರಣವಾಗಲಿದೆ ಎಂದರು. 

ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ಟಿ.ಬಿ.ಜಯಚಂದ್ರ, ಬಾಡಿಗೆ ವಸೂಲಿ ಮಾಡಲು ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಬಗ್ಗೆ ತಕ್ಷಣ ಸೂಕ್ತ ಕ್ರಮತೆಗೆದುಕೊಳ್ಳಬೇಕು ಎಂದರು.

ಸಹಕಾರ ನೀಡಿ: ನಗರದಲ್ಲಿ ಸಾರಿಗೆ ಸಮಸ್ಯೆ ಬಗೆಹರಿಸಲು ಹೊಸದಾಗಿ ಬಂದಿರುವ ಸಿಪಿಐ ಮಂಜೇಗೌಡ ಉತ್ತಮವಾಗಿ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ ಅವರಿಗೆ ಸಹಕಾರ ನೀಡಿ ಎಂದು ಸದಸ್ಯ ಜಾಫರ್ ಹೇಳಿದರು.

ಸಿಪಿಐ ಮಂಜೇಗೌಡ ಮಾತನಾಡಿ, ಹೂವು ಮತ್ತು ಹಣ್ಣು ವ್ಯಾಪಾರಿಗಳನ್ನು ಬಾಲಾಜಿನಗರದಲ್ಲಿರುವ ತರಕಾರಿ ಮಾರುಕಟ್ಟೆ ಬಳಿಗೆ ಸ್ಥಳಾಂತರ ಮಾಡಿ ಸಂಜೆ ಸಮಯ ಬೀದಿ ಬಳಿ ಹೋಟಲ್ ನಡೆಸುವವರನ್ನು ಎಪಿಎಂಸಿ ಮುಂಭಾಗಕ್ಕೆ ಸ್ಥಳಾಂತರ ಮಾಡಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಪುಡ್ ಕೋರ್ಟ್ ನಿರ್ಮಾಣಕ್ಕೆ ಅನೇಕ ಬಾರಿ ಮನವಿ ಮಾಡಲಾಗಿದೆ. ಒಂದು ಕಡೆ ಪುಡ್ ಕೋರ್ಟ್ ನಿರ್ಮಾಣ ಮಾಡಿದರೆ ನಗರದ ಅಂದ ಹೆಚ್ಚಲಿದೆ ಎಂದು ಸದಸ್ಯೆ ಉಮಾ ವಿಜಯರಾಜು ಹೇಳಿದರು.

ನಾರಾಯಣಸ್ವಾಮಿ ಕಲ್ಯಾಣ ಮಂಟಪದ ಬಳಿ ಇರುವ ಕಂದಾಯ ನಿರೀಕ್ಷಕರ ಕಟ್ಟಡ  ಹಾಗೂ ಮುಜರಾಯಿ ಇಲಾಖೆಗೆ ಸೇರಿದ ತರಕಾರಿ ಮಾರಾಟ ಮಾಡುತ್ತಿರುವ ಜಾಗ ತೆರವುಗೊಳಿಸಿ ಅಲ್ಲಿ ಫುಡ್ ಕೋರ್ಟ್ ನಿರ್ಮಿಸಿದರೆ ಹೆಚ್ಚಿನ ಅನುಕೂಲವಾಗಲಿದೆ. ಈ ಮುಜರಾಯಿ ಜಾಗ ನಗರಸಭೆಗೆ ಹಸ್ತಾಂತರ ಮಾಡಿಸಲು ಕ್ರಮ ತೆಗೆದುಕೊಳ್ಳುವುದಾಗಿ ಶಾಸಕರು ಹೇಳಿದರು.

ನೋಟೀಸ್ ನೀಡಿ: ನಗರಸಭೆಗೆ 11 ವರ್ಷದಿಂದ ಕಂದಾಯ ಬಾಕಿ ಉಳಿಸಿಕೊಂಡಿದ್ದರೂ ಕೂಡ ಖಾತೆ ಬದಲಾವಣೆ ಮಾಡಲಾಗಿದೆ. ಇವರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಸದಸ್ಯೆ ಉಮಾ ವಿಜಯರಾಜು ಹೇಳಿದಾಗ, ಇದನ್ನು ಬೆಂಬಲಿಸಿದ ಶಾಸಕ ಟಿ.ಬಿ.ಜಯಚಂದ್ರ, ಅಕ್ರಮವಾಗಿ ಖಾತೆ ಮಾಡಿರುವವರಿಗೆ ನೋಟಿಸ್ ಜಾರಿ ಮಾಡಿ 10 ದಿನದಲ್ಲಿ ಸಮರ್ಪಕವಾಗಿ ಉತ್ತರ ನೀಡದಿದ್ದರೆ ಸಂಬಂಧಿಸಿದವರನ್ನು ಅಮಾನತು ಮಾಡುವಂತೆ ಸೂಚಿಸಿದರು.‌

ನಗರಸಭೆ ಅಧ್ಯಕ್ಷೆ ಪಿ.ಪೂಜಾ ಹೆಚ್ಚಿನ ಹುರುಪಿನಿಂದ ಮೊದಲ ಸಭೆಯಲ್ಲಿ ಭಾಗವಹಿಸಿದ್ದರು. ಕನ್ನಡಕ್ಕಿಂತ ಹೆಚ್ಚು ಇಂಗ್ಲಿಷ್ ಬಳಕೆ ಮಾಡಿದರು.

ಅಧ್ಯಕ್ಷರ ನಡೆಗೆ ಖಂಡನೆ: ಶಿಕ್ಷಕರು ಶಾಲಾ‌ ಮಕ್ಕಳನ್ನು ಗದರಿಸಿ ಮಾತನಾಡುವಂತೆ ನಗರಸಭೆ ಅಧ್ಯಕ್ಷೆ ಪಿ.ಪೂಜಾ ಅವರ ನಡವಳಿಕೆ ಕೆಲ ಸಿಬ್ಬಂದಿಗೆ ಬೇಸರ ತರಿಸಿತು.

ಸಭೆಯಲ್ಲಿ ಉಪಾಧ್ಯಕ್ಷೆ ಸಮ್ರೀನ್ ಖಾನಂ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಎಲ್.ರಂಗನಾಥ್, ಪೌರಾಯುಕ್ತೆ ಪಲ್ಲವಿ, ಎಇಇ ಕೆಂಚಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT