ಬುಧವಾರ, ಅಕ್ಟೋಬರ್ 21, 2020
26 °C

ತುಮಕೂರು: ವಿದ್ಯುತ್ ಅನಧಿಕೃತ ಸಂಪರ್ಕಕ್ಕೆ ₹ 2ಲಕ್ಷ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ಕಟ್ಟಡ ನಿರ್ಮಾಣಕ್ಕೆ ಅನಧಿಕೃತವಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದ ಕಟ್ಟಡದ ಮೇಲೆ ದಾಳಿ ನಡೆಸಿದ ಬೆಸ್ಕಾಂ ಜಾಗೃತದಳದ ಅಧಿಕಾರಿಗಳು ಮಾಲೀಕನಿಗೆ ₹ 2ಲಕ್ಷ ದಂಡ ವಿದಿಸಿದ್ದಾರೆ.

ಪಟ್ಟಣದ ಕುವೆಂಪು ನಗರದಲ್ಲಿ ಲೋಕೇಶ್ ಅವರು ಬೃಹತ್ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರು. ಖಚಿತ ಮಾಹಿತಿ ಮೇರೆಗೆ ಬೆಸ್ಕಾಂ ಜಾಗೃತ ದಳ ಸಿಪಿಐ ರಾಧಾಕೃಷ್ಣ, ಪಿಎಸ್ಐ ಶಕುಂತಲಮ್ಮ, ಎಇಇ ರಾಮಕೃಷ್ಣ ಸಿಬ್ಬಂದಿ ಬಸವರಾಜು ಮತ್ತು ಪುರುಷೋತ್ತಮ್ ದಾಳಿ ನಡೆಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು