ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್, ಯೋಗ ಕೇಂದ್ರ ತೆರೆಯಲು ಸಿದ್ಧತೆ

Last Updated 4 ಆಗಸ್ಟ್ 2020, 13:49 IST
ಅಕ್ಷರ ಗಾತ್ರ

ತುಮಕೂರು: ಕೇಂದ್ರ ಸರ್ಕಾರ ಕೋವಿಡ್ ಕಂಟೋನ್ಮೆಂಟ್ ವಲಯಗಳನ್ನು ಹೊರತುಪಡಿಸಿ, ಉಳಿದ ಪ್ರದೇಶಗಳಲ್ಲಿ ಆ. 5ರಿಂದ ಜಿಮ್, ಯೋಗ ಕೇಂದ್ರ ತೆರೆಯಲು ಅನುಮತಿ ನೀಡಿದ್ದು, ಜಿಲ್ಲೆಯಲ್ಲಿ ಈ ಕೇಂದ್ರಗಳನ್ನು ತೆರೆಯಲು ಮಾಲೀಕರು ಹಾಗೂ ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ನಾಲ್ಕೈದು ತಿಂಗಳುಗಳಿಂದ ಜಿಮ್‌ ತೆರೆಯಲು ಸರ್ಕಾರ ಅವಕಾಶ ನೀಡಿರಲಿಲ್ಲ. ಎಲ್ಲೆಡೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ಬಾಗಿಲು ಮುಚ್ಚಿ ದೂಳು ಹಿಡಿದಿದ್ದ ಕೇಂದ್ರಗಳನ್ನು ಶುಚಿಗೊಳಿಸುವ ಕಾರ್ಯಕ್ಕೆ ಸಿಬ್ಬಂದಿ ಮುಂದಾಗಿದ್ದಾರೆ. ಹಲವೆಡೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕೆಲವೆಡೆ ಸ್ಯಾನಿಟೈಸ್‌ ಮಾಡಲಾಗುತ್ತಿದ್ದು, ಜಿಮ್ ಯಂತ್ರಗಳನ್ನು ಜೋಡಿಸುವ ಹಾಗೂ ಮೆಷಿನ್‌ಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಪರಿಶೀಲಿಸಲಾಗುತ್ತಿದೆ.

‘ಆ. 5ರಿಂದ ಜಿಮ್ ತೆರೆಯಲು ಅವಕಾಶ ನೀಡಿದ್ದರೂ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು, ಗುರುವಾರದಿಂದ ಆರಂಭಿಸುತ್ತಿದ್ದೇವೆ. ಈ ಸಂಬಂಧ ನಮ್ಮ ಸಿಬ್ಬಂದಿ ಹಾಗೂ ಜಿಮ್‌ಗೆ ಬರುವವರೊಂದಿಗೆ ಸಭೆ ನಡೆಸಲಾಗುವುದು. 6 ಅಡಿ ಅಂತರ ಕಾಪಾಡಿಕೊಳ್ಳುವುದು, ದೇಹದ ಉಷ್ಣಾಂಶ ಪರೀಕ್ಷಿಸಿಒಳ ಬಿಡುವ ಬಗ್ಗೆ ಸಿದ್ಧತೆ ನಡೆಯುತ್ತಿದೆ’ ಎಂದು ತುಮಕೂರು ಫಿಟ್ನೋಲಿಕ್ ಜಿಮ್‌ ಸೆಂಟರ್‌ನ ಮಾಲೀಕರಾದ ಶರ್ಮಿಳಾ ಪ್ರತಿಕ್ರಿಯಿಸಿದರು.

ಪಾಲಿಸಬೇಕಾದ ಕ್ರಮಗಳು:

* ಯೋಗ, ಜಿಮ್ ಮಾಡುವಾಗ ನಡುವೆ 6 ಅಡಿ ಅಂತರ ಕಾಯ್ದುಕೊಳ್ಳುವುದು.

* ಅಭ್ಯಾಸಕ್ಕೂ ಮುನ್ನ, ನಂತರ ಸೋಪಿನಿಂದ ಕೈ ತೊಳೆಯುವುದು.

* ಆರೋಗ್ಯ ಸೇತುಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳುವುದು.

* 16 ವರ್ಷದ ಒಳಗಿನವರು, 50 ವರ್ಷ ಮೇಲ್ಪಟ್ಟವರಿಗೆ ಜಿಮ್‌ ಸೆಂಟರ್‌ಗೆ ಅವಕಾಶವಿಲ್ಲ.

* ಉಸಿರಾಟದ ಸಮಸ್ಯೆ ಇದ್ದವರು ಬರುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT