ತುರುವೇಕೆರೆ: ಪಟ್ಟಣದ ತುರುವೇಕೆರೆ ಕೆರೆ ಕೋಡಿ ಸಮೀಪದ ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಬುಧವಾರ ಭೂಮಿಪೂಜೆ ನೆರವೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿ 2006-07ನೇ ಸಾಲಿನಲ್ಲಿ ಒಳಚರಂಡಿ ನಿರ್ಮಾಣವಾಗಿದ್ದು, ಕೆಲ ತಾಂತ್ರಿಕ ತೊಂದರೆಗಳ ಕಾರಣ ಪಟ್ಟಣಿಗರ ಬಳಕೆಗೆ ಅನುಕೂಲವಾಗಿರಲಿಲ್ಲ ಎಂದರು.

ಈಗ ಎರಡನೇ ಹಂತದ ಒಳಚರಂಡಿ ಕಾಮಗಾರಿಯನ್ನು ₹6.5 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ. ಹಾನಿಯಾಗಿರುವ ಕಡೆಗಳಲ್ಲಿ ದುರಸ್ತಿ ಮಾಡಿ ಪ್ರತಿ ಮನೆಗೂ ಯುಜಿಡಿ ಸಂಪರ್ಕ ನೀಡಲಾಗುವುದು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಸೂಚಿಸಿದರು.

ಯುಜಿಡಿ ನೀರು ಸಂಸ್ಕರಿಸಿದ ತ್ಯಾಜ್ಯ ನೀರು ಬಿಡಲು ಜಮೀನು ನೀಡಿದ ರೈತ ತಿಮ್ಮಣ್ಣ ಅವರನ್ನು ಶಾಸಕರನ್ನು ಸತ್ಕರಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಸದಸ್ಯರಾದ ಎನ್.ಆರ್. ಸುರೇಶ್, ಮಧು, ಆಶಾ ರಾಜಶೇಖರ್, ನಾಮನಿರ್ದೇಶಿತ ಸದಸ್ಯರಾದ ರುದ್ರೇಶ್, ಶ್ರೀನಿವಾಸ್ ಮೂರ್ತಿ, ಗುತ್ತಿಗೆದಾರರಾದ ಆನಂದ್ ಗೌಡ ಮತ್ತು ರಂಜನ್ ಗೌಡ, ದಿ ಟೌನ್ ಬ್ಯಾಂಕ್ ನಿರ್ದೇಶಕ ಟಿ.ಆರ್.ರಂಗನಾಥ್, ಪಟ್ಟಣ ಪಂಚಾಯಿತಿ ಎಇಇ ಹರೀಶ್, ಕಂದಾಯಾಧಿಕಾರಿ ಪ್ರಶಾಂತ್ ಭದ್ರಣ್ಣ, ಕಾಂತರಾಜು, ಮಂಗಿಕುಪ್ಪೆ ಬಸವರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.