ಶಿರಾ: ತಾಲ್ಲೂಕಿನ ಶಿಕ್ಷಕರ ಬಹುದಿನದ ಕನಸಾಗಿರುವ ಗುರು ಭವನ ನಿರ್ಮಾಣದ ಕನಸು ಕನಸಾಗಿಯೇ ಉಳಿದಿದೆ.

ಶಿಕ್ಷಕರ ದಿನಾಚರಣೆಯಂದು ನೆನಪಾಗುವ ಗುರುಭವನ ನಂತರ ಯಾರಿಗೂ ನೆನಪಿಗೆ ಬರುವುದಿಲ್ಲ. ಮತ್ತೆ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲೇ ಗುರುಭವನ ನೆನಪಾಗುತ್ತದೆ.

ಶಿರಾ ತಾಲ್ಲೂಕು ಹೊರತುಪಡಿಸಿ ಜಿಲ್ಲೆಯ ಉಳಿದ 9 ತಾಲ್ಲೂಕುಗಳಲ್ಲಿ ಗುರು ಭವನಗಳಿವೆ. ಶಿಕ್ಷಕರ ಚಟುವಟಿಗೆಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಗುರು ಭವನ ನಿರ್ಮಾಣ ಮಾಡಲಾಗಿದೆ. ಆದರೆ, ಇಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಶಿಕ್ಷಕರಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಗುರುಭವನ ಇದುವರೆಗೂ ಮರೀಚಿಕೆಯಾಗಿದೆ. ಗುರು ಭವನದ ಕನಸು ಕಂಡು ದೇಣಿಗೆ ನೀಡಿದ ಹಲವು ಶಿಕ್ಷಕರು ಇಂದು ನಿಧನರಾಗಿದ್ದಾರೆ. ಅವರ ಕನಸು ಕನಸಾಗಿ ಉಳಿದಿದೆ. ಅದು ಸಾಕಾರ ಯಾವಾಗ ಎನ್ನುವ ಪ್ರಶ್ನೆ ಪ್ರತಿಯೊಬ್ಬರಲ್ಲಿ ಮೂಡುವಂತಾಗಿದೆ.

ಶಿಕ್ಷಕರಿಂದ ವಂತಿಗೆ: ಕ್ಷೇತ್ರ ಶಿಕ್ಷಣಾಧಿಕರಿ ಕಚೇರಿ ಮುಂಭಾಗದಲ್ಲಿ ಗುರುಭವನ ನಿರ್ಮಾಣಕ್ಕಾಗಿ 1998ರಲ್ಲಿ ಶಂಕುಸ್ಥಾಪನೆ ನಡೆಸಿ ತಳಪಾಯ ಹಾಕಲಾಯಿತು. ಇದಕ್ಕಾಗಿ ಅಂದು ಕಾರ್ಯನಿರ್ವಹಿಸುತ್ತಿದ್ದ 951 ಮಂದಿ ಪ್ರಾಥಮಿಕ ಶಾಲಾ ಶಿಕ್ಷಕರ ವೇತನದಿಂದ ತಲಾ ಒಂದು ಸಾವಿರ ರೂಪಾಯಿ ವಂತಿಗೆಯಾಗಿ ಒಟ್ಟು ₹9.51ಲಕ್ಷ ಸಂಗ್ರಹಿಸಲಾಯಿತು. ಇದರಲ್ಲಿ ಗುರುಭವನದ ತಳಪಾಯಕ್ಕಾಗಿ ₹2ಲಕ್ಷ ಖರ್ಚು ಮಾಡಲಾಗಿದೆ.

ಸ್ಥಳ ಬದಲು: ಗುರು ಭವನ ನಿರ್ಮಾಣಕ್ಕಾಗಿ ಕಲ್ಲುಕೋಟೆ ಸರ್ವೆ ನಂಬರ್ 226ರಲ್ಲಿ 31ಗುಂಟೆ ಜಾಗ ನೀಡಲಾಗಿತ್ತು. ನಿಗದಿತ ಸ್ಥಳ ಗುರ್ತಿಸಲು ವಿಫಲರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುಭವನ ನಿರ್ಮಾಣ ಮಾಡಲು ಹೊರಟು ಅವಾಂತರ ಮಾಡಿಕೊಳ್ಳಲಾಗಿದೆ.

ನ್ಯಾಯಾಲಯಕ್ಕೆ: ಕಾಮಗಾರಿ ಆರಂಭವಾಗಿ, ತಳಪಾಯ ಆಗುವವರೆಗೂ ಯಾವುದೇ ಅಡೆತಡೆ ಇಲ್ಲದೆ ಕಾಮಗಾರಿಗೆ ನಡೆಯಿತು. ಆದರೆ, ನಾಗರಿಕೆ ವೇದಿಕೆಯವರು ಇಲ್ಲಿ ಗುರುಭವನ ನಿರ್ಮಿಸಿದರೆ ಮಕ್ಕಳ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಆಗಲಿದೆ. ಇಲಾಖೆಯಿಂದ ಅನುಮತಿ ಪಡೆಯದೆ ಕಟ್ಟಡ ನಿರ್ಮಿಸುತ್ತಿದ್ದಾರೆಂದು 2007ರಲ್ಲಿ ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ನ್ಯಾಯಾಲಯ ಸೂಕ್ತ ಅನುಮತಿ ಪಡೆದು ನಿಗದಿತ ಸ್ಥಳದಲ್ಲಿ ಗುರುಭವನ ನಿರ್ಮಿಸುವಂತೆ ಅದೇಶ ನೀಡಿತು.

ಮಂಜೂರಾದ ಜಾಗದಲ್ಲಿ ಶಂಕುಸ್ಥಾಪನೆ: ಗುರುಭವನ ನಿರ್ಮಾಣಕ್ಕೆ ಮಂಜೂರಾದ ಜಾಗವನ್ನು ಹುಡುಕುವ ಕೆಲಸವನ್ನು ಮಾಡಿದ ಶಿಕ್ಷಕರ ಸಂಘದ ಪದಾಧಿಕಾರಿಗಳು ವಿವೇಕಾನಂದ ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಜಾಗವನ್ನು ಗುರ್ತಿಸಿ ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾದರು. ಸೆ.5,2023 ರಂದು ಶಾಸಕ ಟಿ.ಬಿ.ಜಯಚಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಅವರ ಸಮ್ಮುಖದಲ್ಲಿ ಶಂಕುಸ್ಥಾಪನೆ ನಡೆಸಲಾಯಿತು. ಪೂಜೆ ನಡೆಸಿದ್ದು ಬಿಟ್ಟರೆ ಎರಡು ವರ್ಷವಾದರೂ ಯಾವುದೇ ಕೆಲಸ ಪ್ರಾರಂಭವಾಗಿಲ್ಲ.

ಬ್ಯಾಂಕಿನಲ್ಲಿ ಹಣ ಭದ್ರ: ಗುರು ಭವನ ನಿರ್ಮಾಣಕ್ಕಾಗಿ ಶಿಕ್ಷಕರಿಂದ ಸಂಗ್ರಹಿಸಿದ್ದ ವಂತಿಗೆ ಹಣವನ್ನು ಗುರು ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಖಜಾಂಚಿ ಹೆಸರಿನಲ್ಲಿ ಠೇವಣಿಯಾಗಿ ಇಡಲಾಗಿದೆ.

ಭಿನ್ನಾಭಿಪ್ರಾಯ: ಗುರುಭವನ ಕಾಮಗಾರಿ ಸ್ಥಗಿತಗೊಳ್ಳಲು ಶಿಕ್ಷಕರಲ್ಲಿರುವ ಭಿನ್ನಾಭಿಪ್ರಾಯವೇ ಕಾರಣವಾಗಿದೆ. ಶಿಕ್ಷಕರಲ್ಲಿ ಐಕ್ಯತೆ ಇಲ್ಲದಿರುವುದು ಮತ್ತು ನಿರ್ಮಾಣವಾದರೆ ಅವರಿಗೆ ಹೆಸರು ಬರುತ್ತದೆ ಎನ್ನುವ ವೈಯಕ್ತಿಕ ದ್ವೇಷ ಕಾಮಗಾರಿ ಸ್ಥಗಿತವಾಗಲು ಕಾರಣವಾಗಿದೆ. ಒಬ್ಬರನ್ನು ಒಬ್ಬರು ಕಾಲು ಎಳೆಯುತ್ತಿದ್ದು ಯಾವುದೇ ಕಾರಣಕ್ಕೂ ಗುರುಭವನ ಕಾಮಗಾರಿ ನಡೆಯದಂತೆ ವ್ಯವಸ್ಥಿತವಾಗಿ ಪಿತೂರಿ ನಡೆಸುತ್ತಿದ್ದಾರೆ.

ಮುಂದಿನ ವರ್ಷ ಯಾವುದು?: ಪ್ರತಿವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಭಾಗವಹಿಸುವ ಜನಪ್ರತಿನಿಧಿಗಳು ಮುಂದಿನ ವರ್ಷ ಶಿಕ್ಷಕರ ದಿನಾಚರಣೆಯನ್ನು ಸ್ವಂತ ಕಟ್ಟಡವಾದ ಗುರುಭವನದಲ್ಲಿ ಆಚರಣೆ ಮಾಡೋಣ ಎಂದು ಹೇಳುತ್ತಾರೆ. ಆದರೆ, ನಂತರ ಈ ಬಗ್ಗೆ ಯಾರು ಚಕಾರ ಎತ್ತುವುದಿಲ್ಲ. ಗುರುಭವನ ನಿರ್ಮಾಣವಾಗುವ ಮುಂದಿನ ವರ್ಷ ಯಾವುದು ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.

ಗುರುಭವನ ನಿರ್ಮಾಣಕ್ಕೆ ಹಣಕಾಸಿನ ಕೊರತೆಯಿಲ್ಲ. ಇಚ್ಛಾಶಕ್ತಿ ಕೊರತೆಯಿದೆ. ಈಗಲಾದರು ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಂದು ಕಡೆ ಸೇರಿ ಗುರುಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದರೆ ನಿರ್ಮಾಣ ಅಸಾಧ್ಯವಲ್ಲ ಎನ್ನುತ್ತಾರೆ ಶಿಕ್ಷಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.