ಶಿವಕುಮಾರ ಸ್ವಾಮೀಜಿ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತಸಾಗರ

7

ಶಿವಕುಮಾರ ಸ್ವಾಮೀಜಿ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತಸಾಗರ

Published:
Updated:

ತುಮಕೂರು: ಶಿವಕುಮಾರ ಸ್ವಾಮೀಜಿ ಅವರ ದರ್ಶನಕ್ಕೆ ಸಿದ್ಧಗಂಗಾ ಮಠದತ್ತ ಮಂಗಳವಾರ ಭಕ್ತ ಸಾಗರವೇ ಹರಿದು ಬರುತ್ತಿದೆ.

ಹರಿದು ಬರುತ್ತಿರುವ ಭಕ್ತರು ಯಾವುದೇ ಅಡ್ಡಿ ಇಲ್ಲದೆ ದರ್ಶನ ಪಡೆಯುವಂತಾಗಲು ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಉದ್ದ ಸರದಿಯಲ್ಲಿ ಜನ ನಿಂತಿದ್ದು, ಗಂಟೆ ಗಂಟೆಗೂ ಜನರ ಸಂಖ್ಯೆ ಹೆಚ್ಚುತ್ತಲೇ ಇದೆ. 

* ಇದನ್ನೂ ಓದಿ: ಶಿವಕುಮಾರ ಶ್ರೀ ಬರೆದಿಟ್ಟಿರುವಂತೆ ಅವರ ಕ್ರಿಯಾಸಮಾಧಿ ನಡೆಯಲಿದೆ: ಸಿದ್ಧಲಿಂಗ ಶ್ರೀ

3ರ ವರೆಗೆ ಮಾತ್ರ ದರ್ಶನ: ಕಿರಿಯ ಶ್ರೀ
ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ಶಿವಕುಮಾರ ಸ್ವಾಮೀಜಿ ದರ್ಶನಕ್ಕೆ ಅವಕಾಶ. ನಂತರ ಸಮಯ ವಿಸ್ತರಣೆ ಇಲ್ಲ. 3.30ರ ಬಳಿಕ ಕ್ರಿಯಾಸಮಾಧಿ ಪ್ರಕ್ರಿಯೆ ನಡೆಯಲಿದೆ ಎಂದು ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಪ್ರಸಾದ ವ್ಯವಸ್ಥೆ
ಬರುವ ಭಕ್ತರಿಗೆ 10ಕ್ಕೂ ಹೆಚ್ಚು ಕಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಹಲವು ಹಳ್ಳಿಗಳ ಜನರು ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ತುಮಕೂರು ನಗರದಲ್ಲಿ ಅಘೋಷಿತ ಬಂದ್‌ ಏರರ್ಪಟ್ಟಿದ್ದು, ಬಹುತೇಕ ಅಂಗಡಿ ಮುಂಗಟ್ಟೆಗಳು ಮುಚ್ಚಿವೆ. ಹಲವು ಹೋಟೇಲ್‌ಗಳ ಮಾಲೀಕರು ಭಕ್ತರಿಗೆ ಉಚಿ ಉಪಹಾರ, ಊಟ ನೀಡುತ್ತಿದ್ದಾರೆ. 

* ಇವನ್ನೂ ಓದಿ: 

ಅನಂತದೆಡೆಗೆ ನಡೆದ ’ದೇವರು’

ಅರಿವಿನ ಜತೆ ಬದುಕು ಕೊಟ್ಟ ಲೋಕಗುರು​

* ಸರಳತೆಯ ಕಾಯಕಯೋಗಿ

ಬುದ್ಧಿ’ಯನ್ನು ಕಾಣಲು ಓಡೋಡಿ ಬಂದರು​

ಅನ್ನದಾಸೋಹದಲ್ಲಿಯೇ ಶಿವನ ಸಾಕ್ಷಾತ್ಕಾರ​

ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ: ನೀವು ಓದಬೇಕಾದ 14 ಸುದ್ದಿಗಳು

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !