ಹಾಂಗ್‌ಝೌ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 0–3 ಸೆಟ್‌ಗಳಿಂದ ಸೋತ ಭಾರತ, ಏಷ್ಯನ್ ಗೇಮ್ಸ್ ವಾಲಿಬಾಲ್‌ನಲ್ಲಿ ಆರನೇ ಸ್ಥಾನ ಗಳಿಸಿತು. ಮಂಗಳವಾರ ನಡೆದ ಪಂದ್ಯದ ಮೂರೂ ಸೆಟ್‌ಗಳಲ್ಲಿ ಮೇಲುಗೈ ಸಾಧಿಸಿದ ಪಾಕ್ ತಂಡ ಒಂದು ಗಂಟೆ 14 ನಿಮಿಷಗಳಲ್ಲಿ 25–21, 25–20, 25–23 ರಿಂದ ಜಯಗಳಿಸಿತು.
ಭಾರತ ತಂಡ ವಾಲಿಬಾಲ್‌ನಲ್ಲಿ ಸಿಹಿ–ಕಹಿ ಎರಡನ್ನೂ ಉಂಡಿತು. ಲೀಗ್ ಹಂತದಲ್ಲಿ ಕಾಂಬೋಡಿಯಾ ಮೇಳೆ 3–0 ಯಿಂದ ಜಯಗಳಿಸಿದ್ದ ಭಾರತ ನಂತರ 2018ರ ಕ್ರೀಡೆಗಳ ಬೆಳ್ಳೀ ವಿಜೇತ ದಕ್ಷಿಣ ಕೊರಿಯಾವನ್ನು 3–2 ರಿಂದ ಸೋಲಿಸಿ ಗಮನ ಸೆಳೆದಿತ್ತು. ಅಗ್ರ 12ರ ಪಂದ್ಯದಲ್ಲಿ ಕಳೆದ ಕ್ರೀಡೆಗಳ ಕಂಚಿನ ಪದಕ ವಿಜೇತ ಚೀನಾ ತೈಪೆ ಮೇಲೆ ಜಯಗಳಿಸಿತ್ತ್ತು. ಆದರೆ ಅಗ್ರ ಆರು ತಂಡಗಳ ಸೆಣಸಾಟದಲ್ಲಿ ಜಪಾನ್‌ಗೆ ಸೋತು ಪದಕ ವಂಚಿತವಾಯಿತು. ಪಾಕ್ ವಿರುದ್ಧ ಸೋಲಿನಿಂದಾಗಿ ಆರನೇ ಸ್ಥಾನಕ್ಕೆ ಸರಿದಿದೆ. ಜಕಾರ್ತಾ (2018) ಕ್ರೀಡೆಗಳಲ್ಲಿ ಭಾರತ 12ನೇ ಸ್ಥಾನ ಪಡೆದಿತ್ತು.
ಭಾರತ ಮಹಿಳಾ ತಂಡ ತನ್ನ ಅಭಿಯಾನವನ್ನು ಶನಿವಾರ ಉತ್ತರ ಕೊರಿಯಾ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.