ಸೋಮವಾರ, 4 ಆಗಸ್ಟ್ 2025
×
ADVERTISEMENT
ADVERTISEMENT

ಕೊಡಿಗೇನಹಳ್ಳಿ ಠಾಣೆಯಲ್ಲಿ ಸಿಬ್ಬಂದಿ ಕೊರತೆ: ಹೆಚ್ಚಿನ ಪೊಲೀಸರ ನೇಮಕಕ್ಕೆ ಒತ್ತಾಯ

ಗಂಗಾಧರ್ ವಿ. ರೆಡ್ಡಿಹಳ್ಳಿ
Published : 4 ಆಗಸ್ಟ್ 2025, 7:38 IST
Last Updated : 4 ಆಗಸ್ಟ್ 2025, 7:38 IST
ಫಾಲೋ ಮಾಡಿ
Comments
ಕೊಡಿಗೇನಹಳ್ಳಿಯಲ್ಲಿ ನಿರ್ಮಾಣಹಂತದ ಪೊಲೀಸ್‌ ಠಾಣೆ ಕಟ್ಟಡ 
ಕೊಡಿಗೇನಹಳ್ಳಿಯಲ್ಲಿ ನಿರ್ಮಾಣಹಂತದ ಪೊಲೀಸ್‌ ಠಾಣೆ ಕಟ್ಟಡ 
ನಮ್ಮ ಭಾಗದ ಹಲವು ಗ್ರಾಮಗಳು ಆಂಧ್ರ ಗಡಿಯಲ್ಲಿರುವ ಕಾರಣ ಇಲ್ಲಿನ ನೂರಾರು ಮಹಿಳೆಯರು ಪ್ರತಿದಿನ ಹಿಂದೂಪುರ ಹಾಗೂ ಚೆಕ್‌ಪೋಸ್ಟ್‌ನಲ್ಲಿರುವ ಗಾರ್ಮೆಂಟ್ಸ್ ಮತ್ತು ಇತರೆ ಕಂಪನಿಗಳಲ್ಲಿ ಕೆಲಸಗಳಿಗೆ ಹೋಗಿ ಬರುವುದರಿಂದ ಇಲ್ಲಿ ಕಳ್ಳತನ ಹಾಗೂ ಇತರೆ ಅಪರಾಧ ಕೃತ್ಯ ತಪ್ಪಿಸಲು ಪೊಲೀಸರ ಗಸ್ತು ಅವಶ್ಯಕ.
ರಾಜಶೇಖರ್ ರೆಡ್ಡಿ ಕಡಗತ್ತೂರು
ಸಂಚಾರ ನಿಯಮ ಪಾಲನೆ ಮದ್ಯವ್ಯಸನದ ದುಷ್ಟರಿಣಾಮ ಅಪರಾಧ ಕೃತ್ಯಗಳ ಪರಿಣಾಮಗಳ ಬಗ್ಗೆ ಎಲ್ಲ ಶಾಲೆ ಕಾಲೇಜು ಹಾಗೂ ಪ್ರತಿ ಗ್ರಾಮಗಳಲ್ಲಿ ಕಾನೂನು ಅರಿವು ಪೋಕ್ಸೊ ಕಾಯ್ದೆ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಪ್ರತ್ಯೇಕ ಪೊಲೀಸ್ ತಂಡವನ್ನು ರಚಿಸಬೇಕಿದೆ.
ಲಕ್ಷ್ಮಿನರಸೇಗೌಡ ತೆರಿಯೂರು
ಗೃಹಸಚಿವ ಜಿ.ಪರಮೇಶ್ವರ ಅವರು ಪಟ್ಟಣದಲ್ಲಿ ಈಗಾಗಲೇ ನೂತನ ಪೊಲೀಸ್ ಠಾಣೆ ನಿರ್ಮಾಣಕ್ಕೆ ಚಾಲನೆ ನೀಡಿದ ಹಾಗೆ ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಮತ್ತು ದೂರದ ಗ್ರಾಮಗಳಲ್ಲಿನ ಬಡವರ ಸಮಸ್ಯೆಗಳಿಗೆ ಒತ್ತು ನೀಡುವ ಉದ್ದೇಶದಿಂದ ಹೆಚ್ಚಿನ ಸಿಬ್ಬಂದಿ ನೇಮಿಸಬೇಕು.
ಕೆ.ಎನ್. ವಿಜಯಕುಮಾರ್ ಕೋಡ್ಲಾಪುರ
ಈಗಿರುವ ಸಿಬ್ಬಂದಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲು ಸಾಕಾಗುತ್ತಿದೆ. ಗಡಿಭಾಗದಲ್ಲಿನ ಅಪರಾಧ ಕೃತ್ಯ ಮತ್ತು ಗ್ರಾಮಗಳಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ನಿಗಾವಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು.
ಸಿ.ನಂಜಪ್ಪ ಚಿಕ್ಕದಾಳವಟ್ಟ ಗ್ರಾ.ಪಂ ಸದಸ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT