ಮಂಗಳವಾರ, ಸೆಪ್ಟೆಂಬರ್ 17, 2019
27 °C
ಅಪಘಾತದಲ್ಲಿ ಗಾಯಗೊಂಡ ಯುವಕ, ಸಿದ್ಧಗಂಗಾ ಆಸ್ಪತ್ರೆಯ ವೈದ್ಯರ ತಂಡದಿಂದ 8 ತಾಸು ಶಸ್ತ್ರಚಿಕಿತ್ಸೆ

ತುಂಡಾದ ಅಂಗೈ ಮಣಿಕಟ್ಟಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Published:
Updated:
Prajavani

ತುಮಕೂರು: ಅಪಘಾತವೊಂದರಲ್ಲಿ ಕೈಯಿಂದ ಬೇರ್ಪಟ್ಟಿದ್ದ ಅಂಗೈ ಮಣಿಕಟ್ಟನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿ ಮರುಜೋಡಣೆಯನ್ನು ನಗರದ ಸಿದ್ಧಗಂಗಾ ಆಸ್ಪತ್ರೆ ವೈದ್ಯರು ಪ್ರಶಂಶೆಗೆ ಪಾತ್ರರಾಗಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹುಲಿಕುಂಟೆ ಗ್ರಾಮದ 26 ವರ್ಷದ ಹರೀಶ್ ಶಸ್ತ್ರಚಿಕಿತ್ಸೆಗೊಳಗಾದವರು.

ಸೆಪ್ಟಂಬರ್ 2 ರಂದು ಹಬ್ಬಕ್ಕೆ ಊರಿಗೆ ತೆರಳುತ್ತಿದ್ದಾಗ ಕೊರಟಗೆರೆ ಬಳಿ ಸಂಭವಿಸಿದ ಅಪಘಾತದಲ್ಲಿ ಬಲಗೈನ ಅಂಗೈ ಮಣಿಕಟ್ಟು ಸಮೇತ ತುಂಡಾಗಿ ಬಿದ್ದಿತ್ತು.

ಸಿದ್ಧಗಂಗಾ ಆಸ್ಪತ್ರೆಗೆ ತುರ್ತು ನಿರ್ಧಾರ ತೆಗೆದುಕೊಂಡ ಎಲುಬು ಮತ್ತು ಕೀಲು ಮೂಳೆ ರೋಗ ತಜ್ಞರಾದ ಡಾ.ಸಿ.ವಿ.ಕುಮಾರ್ ಹಾಗೂ ವಿಜಯ್‌ಕುಮಾರ್ ನೇತೃತ್ವದ ವೈದ್ಯರ ತಂಡ ಸತತ 8 ತಾಸು ( ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೂ) ನಿರಂತರ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪೋಷಕರ ಪ್ರತಿಕ್ರಿಯೆ: ‘ಅಪಘಾತದಲ್ಲಿ ಗಾಯಗೊಂಡಿದ್ದ ನನ್ನ ಮಗನಿಗೆ ಸಿದ್ಧಗಂಗಾ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿ ಮಗನ ಪ್ರಾಣ ಉಳಿಸಿದ್ದಾರೆ’ ಎಂದು ಹರೀಶ್ ತಂದೆ ಮಂಜುನಾಥ್ ಹೇಳಿದ್ದಾರೆ.

’ಬೆಂಗಳೂರಿನಲ್ಲಿ ಇದೇ ಚಿಕಿತ್ಸೆಗೆ ಲಕ್ಷಾಂತರ ಖರ್ಚಾಗುತ್ತಿತ್ತು. ಜೀವ ಉಳಿಯುವ ಭರವಸೆಯನ್ನೂ ನೀಡದೆ ಚಿಕಿತ್ಸೆ ಕೊಡಿಸಬೇಕಾಗಿತ್ತು. ಆದರೆ, ಸಿದ್ಧಗಂಗಾ ಆಸ್ಪತ್ರೆ ವೈದ್ಯರು ಧೈರ್ಯ ತುಂಬಿ ನಿರಂತರ ಶಸ್ತ್ರಚಿಕಿತ್ಸೆ ಮುಖಾಂತರ ಮಗನ ಪ್ರಾಣ ಉಳಿಸಿದ್ದಾರೆ’ ಎಂದು ವೈದ್ಯರ ಕಾರ್ಯ ಪ್ರಶಂಸಿಸಿದ್ದಾರೆ. 

Post Comments (+)