ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಹಿಂಡಮಾರನಹಳ್ಳಿಯಲ್ಲಿ ಶುಕ್ರವಾರ ಗ್ರಾಮದ ವೃದ್ಧೆ ಪುಟ್ಟಮ್ಮ ಅವರ ತಲೆಗೆ ಹೊಡೆದ ಕಳ್ಳರು ಕೊರಳಿನಲ್ಲಿದ್ದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾರೆ.

ಹಿಂಡಮಾರನಹಳ್ಳಿ ಗ್ರಾಮದ ಮಂಜೇಗೌಡ ಅವರ ತಾಯಿ ಪುಟ್ಟಮ್ಮ ಮಂಜಾನೆ ಶೌಚಾಲಯಕ್ಕೆ ಹೋಗಲು ಮನೆಯಿಂದ ಹೊರ ಬಂದಿದ್ದಾಗ ಕಳ್ಳರು ತಲೆಗೆ ಹೊಡೆದು ಕೊರಳಲ್ಲಿ ಇದ್ದ 30 ಗ್ರಾಂ ತೂಕದ ಸರ ಕಸಿದು ಪರಾರಿಯಾಗಿದ್ದಾರೆ.

ಎಷ್ಟು ಹೊತ್ತಾದರೂ ಪುಟ್ಟಮ್ಮ ಮನೆಗೆ ಬಾರದಿರುವಾಗ ಮನೆಯವರು ಹೊರ ಬಂದು ನೋಡಿದ್ದಾರೆ. ಪುಟ್ಟಮ್ಮ ನೆಲಕ್ಕೆ ಬಿದ್ದಿದ್ದು ತಲೆಗೆ ಗಾಯವಾಗಿತ್ತು. ನಂತರ ಆಸ್ಪತ್ರೆಗೆ ದಾಖಲಿಸಲಾಯಿತು.

ಹೆಚ್ಚುವರಿ ಎಸ್.ಪಿ ಖಾದರ್, ಡಿವೈಎಸ್ಪಿ ಓಂ. ಪ್ರಕಾಶ್, ಸಿಪಿಐ ಲೋಹಿತ್, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.