ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟೊಮೆಟೊ ಬೆಲೆ ಏರಿಕೆ; ಇಳಿದ ಬೀನ್ಸ್

ಸೊಪ್ಪಿನ ದರವೂ ಇಳಿಕೆ; ತರಕಾರಿ ಅಲ್ಪ ಅಗ್ಗ
Published 9 ಜೂನ್ 2024, 6:18 IST
Last Updated 9 ಜೂನ್ 2024, 6:18 IST
ಅಕ್ಷರ ಗಾತ್ರ

ತುಮಕೂರು: ಸೊಪ್ಪಿನ ದರ ಇಳಿಕೆಯತ್ತ ಮುಖ ಮಾಡಿದ್ದರೆ, ಟೊಮೆಟೊ ಗಗನಮುಖಿಯಾಗಿದ್ದು, ಬೀನ್ಸ್ ಸೇರಿದಂತೆ ತರಕಾರಿ ಬೆಲೆ ಅಲ್ಪ ಇಳಿಕೆಯಾಗಿದೆ. ಅಕ್ಕಿ ಧಾರಣೆ ತುರು ಏರಿಕೆ ಕಂಡಿದ್ದು, ಕೋಳಿ ಮಾಂಸದ ಬೆಲೆಯಲ್ಲಿ ತುಂಬಾ ವ್ಯತ್ಯಾಸ ಕಂಡು ಬಂದಿಲ್ಲ.

ಟೊಮೆಟೊ ದುಬಾರಿ: ಸುಮಾರು ಒಂದು ವರ್ಷದಿಂದಲೂ ತಟಸ್ಥವಾಗಿದ್ದ ಟೊಮೆಟೊ ಬೆಲೆ ಒಮ್ಮೆಲೆ ಜಿಗಿತ ಕಂಡಿದೆ. ಉತ್ತಮ ಬೆಲೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ರೈತರು ಬೆಳೆಯುವುದನ್ನು ಕಡಿಮೆ ಮಾಡಿದ್ದು, ಜತೆಗೆ ಬೇಸಿಗೆಯಲ್ಲಿ ಗಿಡ ನೆಟ್ಟು ಕಾಪಾಡಿಕೊಳ್ಳುವುದು ಕಷ್ಟಕರವಾಗಿತ್ತು. ಹಾಗಾಗಿ ಆವಕ ಕಡಿಮೆಯಾಗಿದ್ದು, ಬೇಡಿಕೆ ಕಂಡುಕೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗಬಹುದು ಎಂದು ಹೇಳಲಾಗುತ್ತಿದೆ.

ಬೀನ್ಸ್ ದರವೂ ಕಡಿಮೆಯಾಗುತ್ತಿದ್ದು, ಕೆ.ಜಿ ₹60–70ಕ್ಕೆ ತಗ್ಗಿದೆ. ಕಳೆದ ಕೆಲವು ವಾರಗಳ ಹಿಂದೆ ಕೆ.ಜಿ ₹200ರ ಗಡಿ ದಾಟಿತ್ತು. ಹಿಂದಿನ ವಾರದಿಂದ ಇಳಿಕೆಯತ್ತ ಮುಖ ಮಾಡಿದ್ದು, ಮತ್ತಷ್ಟು ಕಡಿಮೆಯಾಬಹುದು. ಕಳೆದ ವಾರ ಕುಸಿತ ಕಂಡಿದ್ದ ಈರುಳ್ಳಿ ಕೆ.ಜಿಗೆ ₹10 ಏರಿಕೆ ದಾಖಲಿಸಿದೆ. ಬದನೆಕಾಯಿ ದರ ಏರಿಕೆಯಾಗಿದ್ದರೆ, ತೊಂಡೆಕಾಯಿ ತೀವ್ರ ಕುಸಿತ ಕಂಡಿದೆ. ಗೆಡ್ಡೆಕೋಸು, ಮೂಲಂಗಿ, ನುಗ್ಗೆಕಾಯಿ ಮತ್ತಷ್ಟು ಅಗ್ಗವಾಗಿದೆ. ಶುಂಠಿ ಸಹ ಕೆ.ಜಿಗೆ ₹20 ಇಳಿಕೆಯಾಗಿದೆ.

ಸೊಪ್ಪು ಇಳಿಕೆ: ಈ ವಾರ ಸೊಪ್ಪಿನ ಧಾರಣೆ ಅರ್ಧದಷ್ಟು ತಗ್ಗಿದೆ. ಹಿಂದಿನ ವಾರಗಳಲ್ಲಿ ಕೆ.ಜಿ ₹200 ಗಡಿ ದಾಟಿದ್ದರೆ, ಈಗ ₹100 ಸಮೀಪಕ್ಕೆ ಬಂದಿದೆ. ಆದರೆ ಮೆಂತ್ಯ ಸೊಪ್ಪಿನ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಕೊತ್ತಂಬರಿ ಸೊಪ್ಪು ಕೆ.ಜಿ ₹100–120, ಸಬ್ಬಕ್ಕಿ ಕೆ.ಜಿ ₹100–120, ಮೆಂತ್ಯ ಸೊಪ್ಪು ಕೆ.ಜಿ ₹150–160, ಪಾಲಕ್ ಸೊಪ್ಪು (ಕಟ್ಟು) ₹70–80ಕ್ಕೆ ಇಳಿಕೆ ಕಂಡಿದೆ.

ಹಣ್ಣು ಯಥಾಸ್ಥಿತಿ: ಹಣ್ಣುಗಳ ಬೆಲೆ ಬಹುತೇಕ ಯಥಾಸ್ಥಿತಿಯಲ್ಲೇ ಮುಂದುವರಿದಿದೆ. ಏಲಕ್ಕಿ ಬಾಳೆಹಣ್ಣು ತುಸು ದುಬಾರಿಯಾಗುತ್ತಲೇ ಸಾಗಿದ್ದು, ಪಪ್ಪಾಯಕ್ಕೆ ಹೆಚ್ಚಿನ ಬೇಡಿಕೆ ಕಂಡು ಬಂದಿಲ್ಲ.

ಅಡುಗೆ ಎಣ್ಣೆ: ಅಡುಗೆ ಎಣ್ಣೆ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್‌ವಿನ್ನರ್ ಕೆ.ಜಿ ₹108–110, ಪಾಮಾಯಿಲ್ ಕೆ.ಜಿ ₹88–89, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬೇಳೆ, ಧಾನ್ಯ ಅಲ್ಪ ಏರಿಕೆ: ಬೇಳೆ ಕಾಳು, ಧಾನ್ಯಗಳ ಧಾರಣೆ ಏರಿಳಿತ ಕಾಣುತ್ತಿದ್ದು, ಕಳೆದ ವಾರ ಅಲ್ಪ ಇಳಿಕೆಯಾಗಿದ್ದರೆ, ಈ ವಾರ ಕೊಂಚೆ ಏರುಮುಖಮಾಡಿವೆ. ತೊಗರಿ ಬೇಳೆ, ಕಡಲೆ ಬೇಳೆ ಸೇರಿದಂತೆ ಇತರೆ ಬೇಳೆಗಳು, ಕಡಲೆ ಕಾಳು, ಹೆಸರು ಕಾಳು ತುಸು ಹೆಚ್ಚಳವಾಗಿದೆ.

ಕೆಲ ವಾರಗಳಿಂದ ತಟಸ್ಥವಾಗಿದ್ದ ಅಕ್ಕಿ ಬೆಲೆ ಈಗ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಗೋಧಿ ಸಹ ತುಸು ಏರಿಕೆಯತ್ತ ಸಾಗಿದೆ.

ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಮೆಣಸು ಮತ್ತೆ ಕೆ.ಜಿಗೆ ₹40 ಏರಿಕೆಯಾಗಿದೆ. ಜೀರಿಗೆ, ಮೆಣಸಿನಕಾಯಿ, ಗೋಡಂಬಿ ದರ ಕೊಂಚ ಹೆಚ್ಚಳ ಕಂಡಿದೆ.

ಧನ್ಯ ಕೆ.ಜಿ ₹100–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹220–280, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹220–240, ಹುಣಸೆಹಣ್ಣು ₹130–160, ಕಾಳುಮೆಣಸು ಕೆ.ಜಿ ₹660–700, ಜೀರಿಗೆ ಕೆ.ಜಿ ₹340–360, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹85–90, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹900–920, ಗುಣಮಟ್ಟದ ಗಸಗಸೆ ಕೆ.ಜಿ ₹1,280–1,350, ಬಾದಾಮಿ ಕೆ.ಜಿ ₹620–640, ಗೋಡಂಬಿ ಕೆ.ಜಿ ₹680–780, ಒಣದ್ರಾಕ್ಷಿ ಕೆ.ಜಿ ₹180–220ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಅಲ್ಪ ಇಳಿಕೆ: ಕೋಳಿ ಮಾಂಸದ ಬೆಲೆ ಅಲ್ಪ ಪ್ರಮಾಣದಲ್ಲಿ ತಗ್ಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹160, ರೆಡಿ ಚಿಕನ್ ಕೆ.ಜಿ ₹260, ಸ್ಕಿನ್‌ಲೆಸ್ ಕೆ.ಜಿ ₹280, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹120ಕ್ಕೆ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT