ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ’ನೀನಾಸಂ’ ನಾಟಕೋತ್ಸವ

Last Updated 13 ಅಕ್ಟೋಬರ್ 2019, 5:54 IST
ಅಕ್ಷರ ಗಾತ್ರ

ತುಮಕೂರು: ನಗರದ ಝೆನ್ ಟೀಮ್‌ನಿಂದ ಸೋಮವಾರ ಮತ್ತು ಮಂಗಳವಾರ (ಅ.14 ಮತ್ತು 15ರಂದು) ನಗರದ ಎಂ.ಜಿ. ರಸ್ತೆಯ ಬಾಲಭವನದಲ್ಲಿ ಸಂಜೆ 6.30 ಕ್ಕೆ ‘ನೀನಾಸಂ ನಾಟಕೋತ್ಸವ’ ಆಯೋಜಿಸಲಾಗಿದೆ.

14ರಂದು ಸಂಜೆ 6.30ಕ್ಕೆ ಗಿರೀಶ್ ಕಾರ್ನಾಡ್ ರಚನೆಯ ಬಿ.ಆರ್.ವೆಂಕಟರಮಣ ಐತಾಳ್ ನಿರ್ದೇಶನದ ‘ರಾಕ್ಷಸ-ತಂಗಡಿ’ ನಾಟಕ ಪ್ರದರ್ಶನವಿದೆ. 15ರಂದು ಸಂಜೆ 6.30ಕ್ಕೆ ’ಕರ್ಣ ಸಾಂಗತ್ಯ’ ನಾಟಕ ಪ್ರದರ್ಶನವಾಗಲಿದೆ. ನಾಟಕವನ್ನು ಗಣೇಶ್ ಮಂದರ್ತಿ ನಿರ್ದೇಶಿಸುತ್ತಿದ್ದಾರೆ.

14ರಂದು ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ, ಲೇಖಕ ಮುಕುಂದರಾವ್ ಮತ್ತು ಗೋಮಾರದಹಳ್ಳಿ ಮಂಜುನಾಥ್ ಪಾಲ್ಗೊಳ್ಳಲಿದ್ದಾರೆ.

15ರ ಸಮಾರೋಪದಲ್ಲಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್ ಪಾಲ್ಗೊಳ್ಳುವರು. ಪ್ರತಿ ನಾಟಕಕ್ಕೆ ₹ 30 ಪ್ರವೇಶ ಶುಲ್ಕ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT