ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಬೇಳೆ ಕೆ.ಜಿ ₹150; ಅಡಿಗೆ ಎಣ್ಣೆ ಬೆಲೆ ಇಳಿಕೆ

Published 3 ಜೂನ್ 2023, 16:13 IST
Last Updated 3 ಜೂನ್ 2023, 16:13 IST
ಅಕ್ಷರ ಗಾತ್ರ

ತುಮಕೂರು: ಕಳೆದ ಕೆಲ ವಾರಗಳಿಂದ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ತೊಗರಿ ಬೇಳೆ ಬೆಲೆ ಈಗ ಮತ್ತಷ್ಟು ದುಬಾರಿಯಾಗಿದ್ದು, ಕೆ.ಜಿ ₹150ಕ್ಕೆ ತಲುಪಿದೆ. ಅಕ್ಕಿ ಹಾಗೂ ಇತರೆ ಕೆಲ ಬೇಳೆ ಕಾಳುಗಳ ದರ ತುಸು ಹೆಚ್ಚಳವಾಗಿದೆ. ತರಕಾರಿ, ಸೊಪ್ಪು, ಮತ್ತಷ್ಟು ಏರಿಕೆ ಕಂಡಿದ್ದು, ಅಡುಗೆ ಎಣ್ಣೆ ಧಾರಣೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

ತರಕಾರಿ ದುಬಾರಿ:

ಕೆಲ ವಾರಗಳಿಂದ ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದ್ದ ತರಕಾರಿ ಬೆಲೆ ಈ ವಾರ ಏರಿಕೆಯತ್ತ ಮುಖಮಾಡಿದೆ. ಬೀನ್ಸ್ ದರ ಕೆ.ಜಿ ₹60–70ಕ್ಕೆ ಜಿಗಿದಿದ್ದು, ಗೆಡ್ಡೆಕೋಸು, ಹಸಿರು ಮೆಣಸಿನಕಾಯಿ, ಕ್ಯಾಪ್ಸಿಕಂ ಬೆಲೆ ತಲಾ ಕೆ.ಜಿ ₹50–60ಕ್ಕೆ ಹೆಚ್ಚಳವಾಗಿದೆ. ಆಲೂಗಡ್ಡೆ, ಬೆಂಡೆಕಾಯಿ, ಬದನೆಕಾಯಿ, ಹಾಗಲಕಾಯಿ, ನುಗ್ಗೇಕಾಯಿ ದರ ಏರಿಕೆಯಾಗಿದೆ. ಮೂಲಂಗಿ ಬೆಲೆ ಮಾತ್ರ ಇಳಿಕೆಯಾಗಿದೆ. ದುಬಾರಿಯಾಗಿದ್ದ ಶುಂಠಿ ಧಾರಣೆ ಕೆ.ಜಿಗೆ ₹20 ಕಡಿಮೆಯಾಗಿದೆ.

ಸೊಪ್ಪು ಮತ್ತೆ ಏರಿಕೆ:

ಏರಿಳಿತ ಕಂಡಿದ್ದ ಸೊಪ್ಪಿನ ದರ ಈಗ ಒಮ್ಮೆಲೆ ದುಪ್ಪಟ್ಟಾಗಿದೆ. ಮೆಂತ್ಯ ಸೊಪ್ಪು ಬೆಲೆ ಎರಡು ಪಟ್ಟು ಹೆಚ್ಚಳವಾಗಿದ್ದು, ಇತರೆ ಸೊಪ್ಪುಗಳೂ ಇದೇ ದಾರಿ ಹಿಡಿದಿವೆ. ಕೊತ್ತಂಬರಿ ಸೊಪ್ಪು ಕೆ.ಜಿ ₹50–60, ಸಬ್ಬಕ್ಕಿ ಸೊಪ್ಪು ಕೆ.ಜಿ ₹70–80, ಮೆಂತ್ಯ ಕೆ.ಜಿ ₹80–100, ಪಾಲಕ್ ಸೊಪ್ಪು (ಕಟ್ಟು) ₹50ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಇಳಿಯದ ಹಣ್ಣು:

ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಆಗದಿದ್ದರೂ ಇಳಿಕೆಯಾಗುತ್ತಿಲ್ಲ. ಸೇಬು ದುಬಾರಿಯಾಗಿಯೇ ಮುಂದುವರೆದಿದ್ದು, ಇತರೆ ಹಣ್ಣುಗಳು ಸಹ ಅದೇ ದಾರಿಯಲ್ಲಿ ಸಾಗಿವೆ. ಕರಬೂಜ ಹಣ್ಣಿನ ದರ ಮಾತ್ರ ಕಡಿಮೆಯಾಗಿದೆ.

ಮಾವಿನ ಹಣ್ಣಿನ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ರಸಪುರಿ ಕೆ.ಜಿ ₹80–120, ಬಾದಾಮಿ ಕೆ.ಜಿ ₹120–140, ಸೇಂದೂರ ಕೆ.ಜಿ ₹50–70, ಮಲಗೂವ ಕೆ.ಜಿ ₹120–140, ಬೇನಿಷ ಕೆ.ಜಿ ₹40–50ಕ್ಕೆ ಮಾರಾಟವಾಗುತ್ತಿದೆ.

ತೊಗರಿ ಬೇಳೆ ಬಲು ದುಬಾರಿ:

ತೊಗರಿ ಬೇಳೆ ಧಾರಣೆ ವಾರದಿಂದ ವಾರಕ್ಕೆ ಹೆಚ್ಚುತ್ತಲೇ ಸಾಗಿದ್ದು, ಬೇಡಿಕೆಗೆ ಅನುಗುಣವಾಗಿ ದಾಸ್ತಾನು ಇಲ್ಲವಾಗಿದೆ. ಮಾರುಕಟ್ಟೆಗೆ ಬೇಳೆ ಬರುವುದು ಕಡಿಮೆಯಾಗಿರುವುದು ದರ ಹೆಚ್ಚಳಕ್ಕೆ ಕಾರಣವಾಗಿದ್ದು, ಕೆ.ಜಿ ₹140–150ಕ್ಕೆ ಜಿಗಿದಿದೆ. ಕಡಲೆ ಬೇಳೆ, ಕಡಲೆ ಕಾಳು, ಹೆಸರು ಕಾಳು, ಅವರೆಕಾಳು, ಬಟಾಣಿ ಅಲ್ಪ ಇಳಿಕೆಯಾಗಿದೆ. ಅಕ್ಕಿ ಬೆಲೆ ಮತ್ತೆ ಏರಿಕೆಯತ್ತಲೇ ಸಾಗಿದೆ.

ಅಡುಗೆ ಎಣ್ಣೆ ಇಳಿಕೆ:

ಅಡುಗೆ ಎಣ್ಣೆ ಬೆಲೆ ಕಳೆದ ಎರಡು ವಾರದಿಂದ ಇಳಿಕೆಯತ್ತ ಹೆಜ್ಜೆ ಹಾಕಿದ್ದು, ಪಾಮಾಯಿಲ್ ಕೆ.ಜಿಗೆ ₹15 ಕಡಿಮೆಯಾಗಿದೆ. ಗೋಲ್ಡ್‌ ವಿನ್ನರ್ ಕೆ.ಜಿ ₹120 (15 ಕೆ.ಜಿ ಟಿನ್ ತೆಗೆದುಕೊಂಡರೆ ಕೆ.ಜಿ ₹100ಕ್ಕೆ ಸಿಗುತ್ತದೆ), ಪಾಮಾಯಿಲ್ ಕೆ.ಜಿ ₹80, ಕಡಲೆಕಾಯಿ ಎಣ್ಣೆ ಕೆ.ಜಿ ₹150ಕ್ಕೆ ಇಳಿಕೆಯಾಗಿದೆ.

ಮಸಾಲೆ ಪದಾರ್ಥ:

ಜೀರಿಗೆ ಧಾರಣೆ ಮತ್ತೆ ದುಬಾರಿಯಾಗುತ್ತಲೇ ಇದ್ದು, ಧನ್ಯ, ಚಕ್ಕೆ, ಹುಣಸೆ ಹಣ್ಣು ಅಲ್ಪ ಅಗ್ಗವಾಗಿದೆ. ಮೆಣಸಿನ ಕಾಯಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.

ಕೋಳಿ ಯಥಾಸ್ಥಿತಿ:

ಹಿಂದಿನ ವಾರ ದುಬಾರಿಯಾಗಿದ್ದ ಕೋಳಿ ಮಾಂಸದ ಬೆಲೆ ಈ ವಾರವೂ ಅದೇ ದಾರಿಯಲ್ಲಿ ಸಾಗಿದ್ದು, ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹160, ರೆಡಿ ಚಿಕನ್ ಕೆ.ಜಿ ₹250, ಸ್ಕಿನ್‌ಲೆಸ್ ಕೆ.ಜಿ ₹280, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹120ಕ್ಕೆ ಸಿಗುತ್ತಿದೆ.

ಮೀನು ಏರಿಕೆ:

ಮೀನಿನ ಧಾರಣೆ ಮತ್ತಷ್ಟು ಏರಿಕೆಯಾಗಿದ್ದು, ಬಂಗುಡೆ ಕೆ.ಜಿ ₹320, ಬೂತಾಯಿ ಕೆ.ಜಿ ₹180, ಅಂಜಲ್ ಕೆ.ಜಿ ₹1,150, ಬೊಳಿಂಜರ್ ₹240, ಸೀಗಡಿ ಕೆ.ಜಿ ₹640, ಏಡಿ ಕೆ.ಜಿ ₹390ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಮಸಾಲೆ ಪದಾರ್ಥ(ಮಂಡಿಪೇಟೆ ಮಾರುಕಟ್ಟೆ)

ಧನ್ಯ ಕೆ.ಜಿ ₹100–150,

ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹580–600,

ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹260–270,

ಹುಣಸೆಹಣ್ಣು ₹80–120,

ಕರಿಮೆಣಸು ಕೆ.ಜಿ ₹560–580,

ಜೀರಿಗೆ ಕೆ.ಜಿ ₹550–560,

ಸಾಸಿವೆ ಕೆ.ಜಿ ₹80–85,

ಮೆಂತ್ಯ ಕೆ.ಜಿ ₹85–90,

ಚಕ್ಕೆ ಕೆ.ಜಿ ₹265–280,

ಲವಂಗ ಕೆ.ಜಿ ₹850–900,

ಗುಣಮಟ್ಟದ ಗಸಗಸೆ ಕೆ.ಜಿ ₹1,300–1350,

ಬಾದಾಮಿ ಕೆ.ಜಿ ₹680–700,

ಗೋಡಂಬಿ ಕೆ.ಜಿ ₹650–720,

ದ್ರಾಕ್ಷಿ ಕೆ.ಜಿ ₹200–210

ಹಣ್ಣು (ಬೆಲೆ ಕೆ.ಜಿ ₹)

ಸೇಬು;200–220

ದಾಳಿಂಬೆ;180–200

ಮೂಸಂಬಿ;80–100

ಕಿತ್ತಳೆ;140–160

ಸಪೋಟ;80–100

ಏಲಕ್ಕಿ ಬಾಳೆ;50–60

ಪಚ್ಚಬಾಳೆ;30–40

ಪಪ್ಪಾಯ;30–40

ಸೀಬೆ;80–100

ಪೈನಾಪಲ್;60–80

ಕರಬೂಜ;30–40

ಕಲ್ಲಂಗಡಿ;30–40

ದ್ರಾಕ್ಷಿ;180–200

ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)

ತೊಗರಿ ಬೇಳೆ;140–150

ಕಡಲೆ ಬೇಳೆ;65–70

ಉದ್ದಿನ ಬೇಳೆ;120–125

ಹೆಸರು ಬೇಳೆ;108–110

ಕಡಲೆಕಾಳು;60–65

ಹೆಸರು ಕಾಳು;100–110

ಅಲಸಂದೆ;85–90

ಅವರೆಕಾಳು;130–140

ಹುರುಳಿಕಾಳು;75–80

ಹುರಿಗಡಲೆ;80–85

ಬಟಾಣಿ;65–70

ಕಡಲೆ ಬೀಜ;125–130

ಗೋಧಿ;36–38

ಸಕ್ಕರೆ;38–39

ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)

ಬೀನ್ಸ್;60–70

ಕ್ಯಾರೇಟ್;40–50

ಬೀಟ್ರೂಟ್‌;25–30

ಈರುಳ್ಳಿ;20–25

ಟೊಮೆಟೊ;15–20

ಆಲೂಗಡ್ಡೆ;25–30

ಗೆಡ್ಡೆಕೋಸು;50–60

ಮೂಲಂಗಿ;25–30

ಬೆಂಡೆಕಾಯಿ;30–40

ಬದನೆಕಾಯಿ;30–40

ಎಲೆಕೋಸು;15–20

ಹೂಕೋಸು(1ಕ್ಕೆ);30

ತೊಂಡೆಕಾಯಿ;15–20

ಹಾಗಲಕಾಯಿ;40–50

ನಗ್ಗೆಕಾಯಿ;50–60

ಮೆಣಸಿನಕಾಯಿ;50–60

ಕ್ಯಾಪ್ಸಿಕಂ;50–60

ಶುಂಠಿ;100–120

ಸೌತೆಕಾಯಿ 1ಕ್ಕೆ;8–10

ನಿಂಬೆಹಣ್ಣು 1ಕ್ಕೆ;4–5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT