ತುಮಕೂರು: ಧರ್ಮಗಳ ಪ್ರಭಾವದಿಂದ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಆಚರಣೆಗಳು ಕ್ಷೀಣಿಸುತ್ತಿವೆ. ಆಹಾರ ಪದ್ಧತಿ, ದೈವಾರಾಧನೆ ನಶಿಸುತ್ತಿದೆ ಎಂದು ಬೆಂಗಳೂರು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಿ.ಜಿ.ಲಕ್ಷ್ಮೀಪತಿ ಹೇಳಿದರು.

ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಜುಂಜಪ್ಪ ಅಧ್ಯಯನ ಪೀಠ, ಕಲಾ ಕಾಲೇಜಿನ ಕನ್ನಡ ವಿಭಾಗದಿಂದ ಆಯೋಜಿಸಿದ್ದ ‘ಮಧ್ಯ ಕರ್ನಾಟಕದ ಬುಡಕಟ್ಟುಗಳ ಸಾಂಸ್ಕೃತಿಕ ಅನನ್ಯತೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ 45 ಬುಡಕಟ್ಟುಗಳಿದ್ದು, ಸಮುದಾಯದ ಜನರು ದಶಕಗಳಿಂದ ತಮ್ಮದೇ ಪೂಜಾರಿಯನ್ನು ಹೊಂದಿದ್ದರು. ಆಧ್ಯಾತ್ಮಿಕತೆ ಒಪ್ಪುತ್ತಿರಲಿಲ್ಲ. ಜನಾಂಗದಲ್ಲಿ ಯಾವುದೇ ಒಂದು ಧರ್ಮ ಪಾಲಿಸುವುದು ವಿರುದ್ಧವಾಗಿದೆ. ಬುಡಕಟ್ಟು ಕಲೆ, ಆಚರಣೆ ದೇಶದ ಕಲೆ, ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ನಾವು ನಮ್ಮ ಸಂಸ್ಕೃತಿಗೆ ಮರಳಬೇಕು. ಬುಡಕಟ್ಟು ಜನಾಂಗದವರು ಕೀಳರಿಮೆ ಬಿಟ್ಟು ಬದುಕು ಕಟ್ಟಿಕೊಳ್ಳಬೇಕು. ವೈಶಿಷ್ಟ್ಯತೆ ಉಳಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ವಿ.ವಿ ಪ್ರಾಧ್ಯಾಪಕ ಬಿ.ಕರಿಯಣ್ಣ, ‘ಸುಧಾರಣೆಯ ಹೆಸರಲ್ಲಿ ಸಂಸ್ಕೃತಿ ಹಾಳು ಮಾಡಿಕೊಳ್ಳುತ್ತಿದ್ದೇವೆ. ಜಾತಿ ಗಣತಿಯಲ್ಲಿ ಬುಡಕಟ್ಟು ಜನಾಂಗವನ್ನು ಬೇರೆ ಜಾತಿಗೆ ಸೇರಿಸಿ, ತಮ್ಮ ಮೂಲ ಹುಡುಕಿಕೊಂಡು ಹೋಗಬೇಕಾದ ವಾತಾವರಣ ಸೃಷ್ಟಿಸಿದ್ದಾರೆ’ ಎಂದರು.

ಕಲಾ ಕಾಲೇಜಿನ ಪ್ರಾಂಶುಪಾಲರಾದ ಜಿ.ದಾಕ್ಷಾಯಿಣಿ, ಜುಂಜಪ್ಪ ಅಧ್ಯಯನ ಪೀಠದ ಸಂಯೋಜಕ ಎಸ್.ಶಿವಣ್ಣ ಬೆಳವಾಡಿ, ಕನ್ನಡ ವಿಭಾಗದ ಮುಖ್ಯಸ್ಥೆ ಎಚ್.ಆರ್.ರೇಣುಕಾ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.