ತುಮಕೂರು: ಸಮೀಕ್ಷೆಗೆ ಹೋಗಿದ್ದ ಮುಸ್ಲಿಂ ಸಮುದಾಯದ ಶಿಕ್ಷಕಿಯೊಬ್ಬರ ಮೇಲೆ ಕೆಲವರು ಗಲಾಟೆ ಮಾಡಿರುವ ಘಟನೆ ನಗರದ ಹೊರವಲಯ ಭೀಮಸಂದ್ರದಲ್ಲಿ ನಡೆದಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮುಸ್ಲಿಂ ಸಮುದಾಯದ ಶಿಕ್ಷಕಿ ಎಂಬ ಕಾರಣಕ್ಕೆ ಸಮೀಕ್ಷೆಗೆ ಅವಕಾಶ ನೀಡದೆ ಗಲಾಟೆ ಮಾಡುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

‘ಮುಸ್ಲಿಂ ಆಗಿ ಸಮೀಕ್ಷೆಗೆ ಹೇಗೆ ಮನೆ ಬಳಿ ಬಂದಿದ್ದೀಯಾ? ಸಮೀಕ್ಷೆ ಮಾಡಲು ನೀರು ಯಾರು? ಮುಸ್ಲಿಮರ ಮನೆ ಹತ್ತಿರ ಬಿಟ್ಟುಕೊಳ್ಳಬಾರದು. ಮನೆ ಬಳಿಗೆ ಏಕೆ ಬರುತ್ತೀರಾ? ಸಮೀಕ್ಷೆಗೆ ಬರುವಾಗ ಗುರುತಿನ ಕಾರ್ಡ್ ಏಕೆ ತಂದಿಲ್ಲ?’ ಎಂದೆಲ್ಲ ಪ್ರಶ್ನಿಸಲಾಗಿದೆ.

‘ನಮ್ಮ ಮನೆ ಸಮೀಪದಲ್ಲೇ ಇದ್ದು, ಐ.ಡಿ ಕಾರ್ಡ್ ತರುತ್ತೇನೆ. ಸಮೀಕ್ಷೆಗೆ ಅವಕಾಶ ಮಾಡಿಕೊಡಿ’ ಎಂದು ಶಿಕ್ಷಕಿ ಮನವಿ ಮಾಡುತ್ತಿರುವುದು ವಿಡಿಯೊದಲ್ಲಿ ಇದೆ.

ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಶಿಕ್ಷಕಿ ದೂರು ನೀಡಿದ್ದಾರೆ. ಈ ಕುರಿತು ಮಾಹಿತಿ ಪಡೆಯಲು ಯತ್ನಿಸಿದರೂ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.