ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ವಿ.ವಿ 16ನೇ ಘಟಿಕೋತ್ಸವ: ಟಿ.ಎಸ್. ನಾಗಭರಣಗೆ ಗೌರವ ಡಾಕ್ಟರೇಟ್

Published 7 ಆಗಸ್ಟ್ 2023, 7:43 IST
Last Updated 7 ಆಗಸ್ಟ್ 2023, 7:43 IST
ಅಕ್ಷರ ಗಾತ್ರ

ತುಮಕೂರು: ವಿಶ್ವವಿದ್ಯಾಲಯದಿಂದ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಭರಣ ಅವರಿಗೆ ಸೋಮವಾರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಇದೇ ಸಮಯದಲ್ಲಿ ಸಮಾಜ ಸೇವಕ ನಗರದ ಆರ್.ಎಲ್.ರಮೇಶ್ ಬಾಬು ಅವರು ಗೌರವ ಡಾಕ್ಟರೇಟ್ ಪಡೆದರು.

ವಿ‌.ವಿಯ 16ನೇ ಘಟಿಕೋತ್ಸವ ಕಾರ್ಯಕಮಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಚಾಲನೆ ನೀಡಿದರು. ಘಟಿಕೋತ್ಸವ ಮೆರವಣಿಗೆಯ ಮೂಲಕ ಅವರನ್ನು ಸ್ವಾಗತಿಸಲಾಯಿತು‌.

80 ವಿದ್ಯಾರ್ಥಿಗಳು 99 ಚಿನ್ನದ ಪದಕ ಹಂಚಿಕೊಂಡಿದ್ದಾರೆ. 78 ಮಂದಿ ಪಿಎಚ್.ಡಿ, ಐವರು ಡಿ.ಲಿಟ್ ಹಾಗೂ 10,273 ವಿದ್ಯಾರ್ಥಿಗಳು ಪದವಿ ಪಡೆದುಕೊಂಡರು.

ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್,

ತುಮಕೂರು ವಿ.ವಿ. ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಪರೀಕ್ಷಾಂಗ ಕುಲಸಚಿವ ಕೆ.ಪ್ರಸನ್ನಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT