ತುಮಕೂರು: ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಚ್.ಎನ್.ಚಂದ್ರಶೇಖರ್ ಹಾಗೂ ಓಹಿಲೇಶ್ವರ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

ಇಬ್ಬರೂ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗಳಿಗೆ ಅಧಿಕೃತ ಪತ್ರ ನೀಡಿ ನಿವೃತಿ ಹೊಂದಿದ್ದಾರೆ. ಅಂತಿಮವಾಗಿ ಡಾ.ಎಸ್.ಪರಮೇಶ್ ಒಬ್ಬರೇ ಅಭ್ಯರ್ಥಿಯಾಗಿ ಉಳಿದುಕೊಂಡಿದ್ದಾರೆ ಎಂದು ಸಮಾಜದ ಮುಖಂಡರಾದ ಎಸ್.ಕೆ.ರಾಜಶೇಖರ್, ನಟರಾಜ್ ಸಾಗರಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜುಲೈ 21ರಂದು ಮತದಾನ ನಡೆಯಲಿದೆ. ಈಗಾಗಲೇ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಅಂದು ಮತದಾನ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಮೂವರು ಸ್ಪರ್ಧಿಸಿದ್ದು, ಇಬ್ಬರು ನಿವೃತ್ತರಾಗಿದ್ದಾರೆ. ಕೊನೆಗೆ ಡಾ.ಎಸ್.ಪರಮೇಶ್ ಮಾತ್ರ ಉಳಿದುಕೊಂಡಿದ್ದಾರೆ. ಆದರೆ ನಿಯಮದಂತೆ ಚುನಾವಣೆ ನಡೆಯಬೇಕಿದೆ.

ಮತದಾನ ನಡೆಯುವ ಸ್ಥಳ: ತುಮಕೂರು ಮತದಾನ ಕೇಂದ್ರದಲ್ಲಿ ತುಮಕೂರು ನಗರ, ಗ್ರಾಮಾಂತರ, ಶಿರಾ, ಕುಣಿಗಲ್ ತಾಲ್ಲೂಕಿನ ಮತದಾರರು ಮತ ಚಲಾಯಿಸಬಹುದು. ಗುಬ್ಬಿ (ತಾಲ್ಲೂಕಿನ ಮತದಾರರು), ತಿಪಟೂರು ಕೇಂದ್ರದಲ್ಲಿ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಾಲ್ಲೂಕು, ಮಧುಗಿರಿಯಲ್ಲಿ ಕೊರಟಗೆರೆ, ಪಾವಗಡ ತಾಲ್ಲೂಕಿನ ಮತದಾರರು ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.