ಸೋಮವಾರ, ಆಗಸ್ಟ್ 2, 2021
27 °C

ದುರಸ್ತಿಯಾಗದ ಚಿರಶಾಂತಿ ವಾಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ನಗರದಲ್ಲಿ ಮೃತಪಟ್ಟವರನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಇರುವ ಚಿರಶಾಂತಿ ವಾಹನ ಕೆಟ್ಟುನಿಂತು ತಿಂಗಳುಗಳೇ ಕಳೆದರೂ ದುರಸ್ತಿಯಾಗಿಲ್ಲ.

ನಗರದ 31 ವಾರ್ಡ್‍ಗಳಲ್ಲಿ ಯಾರಾದರೂ ನಿಧನರಾದರೆ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲು ಅನುಕೂಲವಾಗಲೆಂದು 12 ವರ್ಷಗಳ ಹಿಂದೆಯೇ ವಾಹನ ಖರೀದಿಸಲಾಗಿತ್ತು. ಅಗತ್ಯವಿರುವವರು ₹ 300 ಪಾವತಿಸಿ ಇದನ್ನು ಬಳಸಿಕೊಳ್ಳಬಹುದು. ವಾಹನದ ನಿರ್ವಹಣೆ ಮಾಡಬೇಕಿದ್ದ ನಗರಸಭೆ ಈ ವಾಹನದ ದುರಸ್ತಿಗೆ ಆಸಕ್ತಿವಹಿಸಿಲ್ಲ. ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಖಾಸಗಿ ಆಂಬುಲೆನ್ಸ್‌ ಲಾಬಿ: ನಗರಸಭೆಯ ಚಿರಶಾಂತಿ ವಾಹನ ಕೆಟ್ಟು ನಿಂತಿರುವುದನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ಆಂಬುಲೆನ್ಸ್‌ಗಳು ನಿಧನರಾದವರನ್ನು ಸ್ಮಶಾನಕ್ಕೆ ಕೊಂಡೊಯ್ಯಲು
ಸಾವಿರಾರು ರೂಪಾಯಿ ಕೇಳುತ್ತಾ, ಸಾವಿನ ಮನೆಯಲ್ಲೂ ಸುಲಿಗೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನೂತನ ವಾಹನ ಖರೀದಿಗೆ ಆಗ್ರಹ:

12 ವರ್ಷಗಳಿಂದ ವಾಹನ ಬಳಸಿಕೊಂಡಿದ್ದಾರೆ. ಆದರೆ ಸುಸ್ಥಿತಿಯಲ್ಲಿ ಇಟ್ಟುಕೊಂಡಿಲ್ಲ. ಈ ವಾಹನದ ಚಾಲಕನಿಗೆ ಯಾರಿಗೆ ಸಮಸ್ಯೆ ಹೇಳಿಕೊಳ್ಳುವುದು ಎಂಬುದೇ ಪ್ರಶ್ನೆಯಾಗಿದೆ. ತಿಂಗಳಿಗೆ ಎರಡು ಬಾರಿ ಕೆಟ್ಟು ನಿಲ್ಲುತ್ತದೆ. ಹಾಗಾಗಿ ನೂತನ ವಾಹನ ಖರೀದಿಸಬೇಕು ಎನ್ನುವುದು ನಗರವಾಸಿಗಳ ಒತ್ತಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು